ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೃಹರಕ್ಷಕ ದಳದ ಬಲ 40 ಸಾವಿರಕ್ಕೆ: ವಿ.ಎಸ್.ಆಚಾರ್ಯ (Acharya | BJP | Home gaurds | Udupi | Malpe)
Bookmark and Share Feedback Print
 
ರಾಜ್ಯದಲ್ಲಿ ಈಗ 25 ಸಾವಿರ ಗೃಹರಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 2012ರ ಮಾರ್ಚ್ ವೇಳೆಗೆ ಗೃಹ ರಕ್ಷಕರ ಸಂಖ್ಯೆ 40 ಸಾವಿರಕ್ಕೆ ಏರಿಸುವ ಗುರಿ ಇಟ್ಟುಕೊಂಡಿರುವುದಾಗಿ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಗೃಹರಕ್ಷಕ ದಳ ಆಶ್ರಯದಲ್ಲಿ ರಾಷ್ಟ್ರೀಯ ಕ್ರಿಯಾ ಯೋಜನೆ ಅಂಗವಾಗಿ ಗೃಹ ರಕ್ಷಕದಳದ ಮಲ್ಪೆ ಘಟಕ ಉದ್ಘಾಟಿಸಿ ಅವರು ಮಲ್ಪೆ ಕರಾವಳಿ ಕಾವಲು ಪೊಲೀಸ್ ಸ್ಟೇಶನ್ ಮೈದಾನದಲ್ಲಿ ಮಾತನಾಡಿದರು.

ಕಾನೂನು ಸುವ್ಯವಸ್ಥೆ ನಾಗರಿಕ ಸಮಾಜಕ್ಕೆ ಬಹುಮುಖ್ಯ. ಇದು ಪೊಲೀಸ್ ಇಲಾಖೆಯ ಜತೆಗೆ ನಾಗರಿಕರ ಸ್ಪಂದನೆ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. ಜನರ ಮಧ್ಯದಿಂದಲೇ ಬರುವ ಗೃಹರಕ್ಷಕರು ಚುನಾವಣೆ, ಜಾತ್ರೆ ಮತ್ತಿತರ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಇವರ ದಿನಭತ್ಯೆಯನ್ನು 100 ರೂ.ನಿಂದ 150ಕ್ಕೆ ಏರಿಸಲಾಗಿದೆ. ಬೆಂಗಳೂರು ನಗರದಲ್ಲಿ 150 ರೂ. ಇದ್ದಿದ್ದನ್ನು 175ಕ್ಕೆ ಏರಿಸಲಾಗಿದೆ ಎಂದರು.

ರಾಜ್ಯದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ. ಪಶ್ಚಿಮ ಘಟ್ಟದಲ್ಲಿದ್ದ ನಕ್ಸಲ್ ಸಮಸ್ಯೆ ಕೂಡಾ ತೀವ್ರ ಇಳಿಮುಖವಾಗಿದೆ. ದೇಶದ ನಕ್ಸಲ್ ಪೀಡಿತ ರಾಜ್ಯಗಳ ಪಟ್ಟಿಯಿಂದಲೇ ಕರ್ನಾಟಕವನ್ನು ತೆಗೆಯಲಾಗಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ