ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಂಪುಟ ಸೇರ್ಪಡೆ ಕಸರತ್ತು: ಬೆಳ್ಳುಬ್ಬಿ ರಾಜೀನಾಮೆ (Bellubbi | BJP | Ishwarappa | Yeddyurappa | Cabinet reshafful)
Bookmark and Share Feedback Print
 
ಸಂಪುಟ ಪುನಾರಚನೆಯ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ಅಧ್ಯಕ್ಷರಿಗೆ ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಎಸ್.ಕೆ.ಬೆಳ್ಳುಬ್ಬಿ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ತಮ್ಮ ನಿವಾಸದಲ್ಲಿ ರಾಜೀವಾಮೆ ನಿರ್ಧಾರವನ್ನು ಪ್ರಕಟಿಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಒತ್ತಡದ ತಂತ್ರ ಹೇರುವ ಉದ್ದೇಶದಿಂದ ನಾನು ರಾಜೀನಾಮೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಶಿಸ್ತಿನ ಸಿಪಾಯಿ ಈ ಹಿಂದೆ ವರಿಷ್ಠರು ಸೂಚನೆ ಕೊಟ್ಟ ರೀತಿಯಲ್ಲಿ ಉಮೇಶ್ ಕತ್ತಿಗೆ ಸಚಿವ ಸ್ಥಾನ ಕಲ್ಪಿಸಿಕೊಡಲು ನಾನು ಸಚಿವ ಹುದ್ದೆಯನ್ನು ತ್ಯಾಗ ಮಾಡಿದ್ದೆ. ಆಗ ಎರಡು ವರ್ಷದ ನಂತರ ಮತ್ತೆ ನಿಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ಆಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡರು ಭರವಸೆ ಕೊಟ್ಟಿದ್ದರು.

ಇದೀಗ ಎರಡೂವರೆ ವರ್ಷ ಕಳೆದಿದೆ. ನನ್ನನ್ನು ಮಂತ್ರಿ ಮಾಡಿಲ್ಲ. ಹೀಗಾಗಿ ನಾನು ಕಾರ್ಖಾನೆಯ ಅಧ್ಯಕ್ಷ ಸ್ಥಾನವನ್ನು ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ. ಆದ್ದರಿಂದ ಈ ಜವಾಬ್ದಾರಿಯನ್ನು ಬೇರೆಯವರಿಗೆ ಕೊಡಿ ಎಂದು ಮುಖ್ಯಮಂತ್ರಿ ಮತ್ತು ಅಧ್ಯಕ್ಷರಿಗೆ ರಾಜೀನಾಮೆ ಪತ್ರದ ಮೂಲಕ ತಿಳಿಸಿದ್ದೇನೆ.

ಯಾರ ಒತ್ತಡಕ್ಕೂ ಮಣಿದು ನಾನು ರಾಜೀನಾಮೆ ಕೊಟ್ಟಿಲ್ಲ, ಸ್ವಯಂ ಪ್ರೇರಿತವಾಗಿ ರಾಜೀನಾಮೆ ಕೊಟ್ಟಿದ್ದೇನೆ. ಸಚಿವ ಸ್ಥಾನ ಪಡೆಯಲು ಈ ರೀತಿ ಒತ್ತಡದ ತಂತ್ರ ಮಾಡುತ್ತಿದ್ದೇನೆ ಎಂದು ಯಾರೊಬ್ಬರು ಭಾವಿಸಿಕೊಳ್ಳಬಾರದು ಎಂದು ಬೆಳ್ಳುಬ್ಬಿ ಮನವಿ ಮಾಡಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ