ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಂಪುಟ ಪುನಾರಚನೆ; ಆರು ಮಂದಿ ಸಚಿವರಾಗಿ ಪ್ರಮಾಣವಚನ (Karnataka | BJP | Yeddyurappa | Ishwarappa)
Bookmark and Share Feedback Print
 
ತೀವ್ರ ಭಿನ್ನಮತ ಸ್ಫೋಟಿಸಿದ ನಡುವೆಯೂ ರಾಜ್ಯ ಆಡಳಿತ ಬಿಜೆಪಿ ಸರಕಾರವು ಸಚಿವ ಸಂಪುಟದ ಪುನಾರಚನೆ ಮಾಡಿದೆ. ಇಂದು ಬೆಳಗ್ಗೆ 9.30ಕ್ಕೆ ಸರಿಯಾಗಿ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರು ಮಂದಿ ನೂತನ ಸಚಿವರಿಗೆ ರಾಜ್ಯಪಾಲರು ಪ್ರಮಾನವಚನ ಭೋದಿಸಿದರು.

ಶೋಭಾ ಕರಂದ್ಲಾಜೆ, ಸಿ.ಸಿ. ಪಾಟೀಲ, ವಿ. ಸೋಮಣ್ಣ, ಎ ನಾರಾಣಸ್ವಾಮಿ, ಎ. ರಾಮದಾಸ್ ಮತ್ತು ಸಿ. ಎಚ್. ವಿಜಯಶಂಕರ್ ಅವರು ಭಗವಂತನ ನಾಮದಲ್ಲಿ ಪ್ರಮಾನವಚನ ಮಾಡಿದರು. ಆ ಮೂಲಕ ಶೋಭಾ ಕರಂದ್ಲಾಜೆ ಮತ್ತು ವಿ. ಸೋಮಣ್ಣ ಸಂಪುಟಕ್ಕೆ ಮರು ಸೇರ್ಪಡೆಗೊಂಡರು.

ಸಚಿವ ಸಂಪುಟ ಪುನಾರಚನೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಭಾರಿ ಗೊಂದಲ ಸೃಷ್ಟಿಯಾಗಿತ್ತು. ಈ ನಡೆವೆಯೂ ಮೂವರು ಸಚಿವರಿಗೆ ಕೊಕ್ ನೀಡಲು ಯಡ್ಡಿ ಆಡಳಿತ ನಿರ್ಧರಿಸಿತ್ತು.

ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ಗ್ರಂಥಾಲಯ ಸಚಿವ ಶಿವನಗೌಡ ನಾಯಕ್ ಮತ್ತು ಜವಳಿ ಸಚಿವ ಗೂಳಿಹಟ್ಟಿ ಶೇಖರ್ ಅವರನ್ನು ಮಂಗಳವಾರ ಸಂಪುಟದಿಂದ ವಜಾ ಮಾಡಲಾಗಿತ್ತು. ರಾಜೀನಾಮೆ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದ್ದರೂ ಈ ಮೂವರು ಸಚಿವರು ಸ್ಥಾನ ತೊರೆಯಲಿಲ್ಲ. ಇದರಿಂದಾಗಿ ಸಂಪುಟದಿಂದ ಕೈಬಿಡಲು ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ