ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಾನಪದ ಸಂಸ್ಕೃತಿಯನ್ನು ಖರೀದಿಸಲಾಗದು: ಚನ್ನಬಸಪ್ಪ (Channabasappa | Yadagiri | Grama panchayath | Karnataka)
Bookmark and Share Feedback Print
 
ಗ್ರಾಮ ಪಂಚಾಯಿತಿಯಿಂದ ಹಿಡಿದು ಮಹಾನಗರಪಾಲಿಕೆವರೆಗಿನ ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಜಾನಪದ ಕಲೆಗಳ ಅಭಿವೃದ್ಧಿಗೆ ತಂತಮ್ಮ ಬಜೆಟ್‌ನಲ್ಲಿ ಶೇ. 2ರಷ್ಟಾದರೂ ಹಣವನ್ನು ಮೀಸಲಿಡುವಂತಾಗಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಇಲ್ಲಿ ಆರಂಭವಾದ ಜಿಲ್ಲಾ ಜಾನಪದ ಸಂಭ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ಜಾನಪದವನ್ನು ಉಳಿಸಲು ಸಮಾಜ, ಸರಕಾರ, ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದರು.

ಆಧುನಿಕತೆಯ ಹೊಡೆತ, ರಾಜಕೀಯ ಹಗರಣ, ಜಾಗತೀಕರಣದ ಜಂಜಾಟ, ಸಾಮಾಜಿಕ ಅವ್ಯವಸ್ಥೆ, ಗೊಂದಲದಿಂದ ಕೂಡಿರುವ ಈ ದಿನಮಾನಗಳಲ್ಲಿ ಸಮಾಜ ಅಧೋಗತಿಯತ್ತ ಸಾಗುತ್ತಿರುವಾಗ ಮೂಲ ಸಂಸ್ಕೃತಿಯತ್ತ ಗಮನಹರಿಸಬೇಕಾದ ಅಗತ್ಯ ತೀವ್ರವಾಗಿದೆ. ಮೂಲ ಸಂಸ್ಕೃತಿ ಎಂದರೆ ನೆಲದ ಸಂಸ್ಕೃತಿಯಾದ ಜಾನಪದವನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.

ನಗರದ ನಾಗರಿಕತೆಯನ್ನು ಹಣ ಕೊಟ್ಟು ಕೊಳ್ಳಬಹುದು, ಆದರೆ ಜಾನಪದ ಸಂಸ್ಕೃತಿಯನ್ನು ಖರೀದಿಸಲಾಗದು. ಜಾನಪದ ಸಾಹಿತ್ಯ ಎಂದರೆ ತಾಯಿ ಹೃದಯವಿದ್ದಂತೆ. ಗ್ರಾಮಗಳಲ್ಲಿ ನೆಲೆಯಾದ ಜಾನಪದವನ್ನು ಸಂರಕ್ಷಿಸಬೇಕಿದೆ. ಹಾಗೆಯೇ ಇಂತಹ ಸಮ್ಮೇಳನಗಳಿಂದ ಸಂಸ್ಕೃತಿಯ ಪರಿಚಯವಾಗುತ್ತದೆ. ಹಾಗಾಗಿ ಜಾನಪದ ಕಲೆಗಳನ್ನು ಬೆಳೆಸಬೇಕು. ಆ ಮೂಲಕ ಜಾನಪದದ ಯಾವುದೇ ಪ್ರಕಾರಗಳನ್ನಾಗಲೀ ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು, ಆ ಮೂಲಕ ಜಾನಪದ ಕಲಾವಿದರ ಶ್ರಮವನ್ನು ಗುರುತಿಸಿ ಮಾನ್ಯತೆ ನೀಡಬೇಕು ಎಂದು ಗೊರುಚ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ