ಸಂಪುಟ ಪುನಾರಚನೆಯ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಸಂಜೆ ಸಂಪುಟ ಸದಸ್ಯರ ಖಾತೆ ಮರು ಹಂಚಿಕೆಯೊಂದಿಗೆ ನೂತನ ಸಚಿವರ ಖಾತೆಯನ್ನು ಘೋಷಿಸಿದ್ದಾರೆ.
ಆರು ಮಂದಿ ನೂತನ ಸಚಿವರ ಸೇರ್ಪಡೆಯಲ್ಲಿ ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಮರು ಸೇರ್ಪಡೆಗೊಂಡದ್ದಾರೆ. ಆರ್.ಅಶೋಕ್ ಸಾರಿಗೆ ಖಾತೆ ಜತೆಗೆ ಹೆಚ್ಚುವರಿಯಾಗಿ ಗೃಹಖಾತೆ ಜವಾಬ್ದಾರಿ ವಹಿಸಲಾಗಿದೆ. ಶೋಭಾ ಕರಂದ್ಲಾಜೆ ಇಂಧನ ಖಾತೆ , ವಿ.ಸೋಮಣ್ಣ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವಗಿರಿ ಹೊಣೆ ಹೊತ್ತಿದ್ದಾರೆ.
NRB
ಇನ್ನುಳಿದಂತೆ ಗೃಹ ಖಾತೆ ನಿರ್ವಹಿಸುತ್ತಿದ್ದ ವಿ.ಎಸ್.ಆಚಾರ್ಯ ಅವರಿಗೆ ಉನ್ನತ ಶಿಕ್ಷಣ ಮತ್ತು ಯೋಜನಾ ಖಾತೆ ನೀಡಲಾಗಿದೆ. ಡಿ.ಸುಧಾಕರ್‌ಗೆ ಯುವಜನಸೇವೆ ಮತ್ತು ಬಂಧೀಖಾನೆ, ವಿಜಯ್ ಶಂಕರ್ ಅವರಿಗೆ ಅರಣ್ಯ ಇಲಾಖೆ, ನಾರಾಯಣ ಸ್ವಾಮಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಹಾಗೂ ರಾಮದಾಸ್ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವಪಟ್ಟ ಗಿಟ್ಟಿಸಿಕೊಂಡಿದ್ದಾರೆ.
ಬುಧವಾರ ಬೆಳಿಗ್ಗೆ ರಾಜಭವನದಲ್ಲಿ ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಗೊಂಡ ಶೋಭಾ ಕರಂದ್ಲಾಜೆ, ಸಿ.ಸಿ.ಪಾಟೀಲ್, ಎ.ರಾಮದಾಸ್, ವಿ.ಸೋಮಣ್ಣ, ಎ.ನಾರಾಯಣ ಸ್ವಾಮಿ ಹಾಗೂ ಸಿ.ಎಚ್. ವಿಜಯ್ ಶಂಕರ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರತಿಜ್ಞಾವಿಧಿ ಬೋಧಿಸಿದ್ದರು.
ಬದಲಾವಣೆಗೊಂಡ ಸಚಿವರ ಖಾತೆ ವಿವರ: ವೆಂಕಟರಮಣಪ್ಪ-ರೇಷ್ಮೆ ಮತ್ತು ಜವಳಿ ಖಾತೆ, ಉಮೇಶ್ ಕತ್ತಿ- ಕೃಷಿ ಇಲಾಖೆ, ನರೇಂದ್ರ ಸ್ವಾಮಿ-ಪಶುಸಂಗೋಪನೆ, ರವೀಂದ್ರನಾಥ್-ತೋಟಗಾರಿಕೆ ಇಲಾಖೆ, ಶಿವರಾಜ್ ತಂಗಡಗಿ-ಸಣ್ಣ ಕೈಗಾರಿಕೆ,ಎಪಿಎಂಸಿ ಇಲಾಖೆ, ರೇವೂನಾಯಕ್ ಬೆಳಮಗಿ-ಗ್ರಂಥಾಲಯ ಇಲಾಖೆ, ಕೃಷ್ಣ.ಜೆ.ಪಾಲೇಮಾರ್-ಬಂದರು ಮತ್ತು ಮುಜರಾಯಿ ಇಲಾಖೆ.