ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೌದು, ರೆಡ್ಡಿಗಳಿಂದಾಗಿ ಸರಕಾರ ಉಳಿದಿದೆ: ಯಡಿಯೂರಪ್ಪ (Reddy brothers | BS Yediyurappa | Karnataka | BJP govt)
Bookmark and Share Feedback Print
 
ಬಳ್ಳಾರಿ ರೆಡ್ಡಿ ಸಹೋದರರಿಂದಾಗಿಯೇ ಬಿಜೆಪಿ ಸರಕಾರ ರಚನೆಯಾಯಿತು. ಅವರು ಇಲ್ಲದೇ ಹೋಗಿದ್ದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ಸಂಪುಟ ವಿಸ್ತರಣೆಯಲ್ಲೂ ಅವರ ಸಹಕಾರ ಇಲ್ಲದಿರುತ್ತಿದ್ದರೆ ಕಷ್ಟವಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ರೆಡ್ಡಿ ಸಹೋದರರ ಸಹಕಾರ ಇಲ್ಲದೇ ಇರುತ್ತಿದ್ದರೆ ಬಿಜೆಪಿ ಸರಕಾರ ರಚನೆಯಾಗುತ್ತಿರಲಿಲ್ಲ. ಸಚಿವ ಸಂಪುಟ ವಿಸ್ತರಣೆಯೂ ಯಶಸ್ವಿಯಾಗಿ ನಡೆಯುವುದು ಸಾಧ್ಯವಿರಲಿಲ್ಲ. ಅಭಿವೃದ್ಧಿ ಕಾರ್ಯಗಳಲ್ಲೂ ಅವರ ಸಹಕಾರ ನಮಗೆ ಅಗತ್ಯವಾಗಿತ್ತು ಎಂದರು.

ರೆಡ್ಡಿ ಸಹೋದರರ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳ ಕುರಿತು ಪ್ರತಿಕ್ರಿಯಿಸ ಯಡಿಯೂರಪ್ಪ, ಇದು ನನಗೊಬ್ಬನಿಗೆ ಲಭಿಸಿದ ಗೆಲುವಲ್ಲ; ಇಲ್ಲಿ ಶಾಸಕರು, ಪ್ರತಿಪಕ್ಷಗಳು, ಸಾರ್ವಜನಿಕರು, ರೆಡ್ಡಿ ಸಹೋದರರು ಎಲ್ಲರ ಸಹಕಾರದಿಂದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಅಧಿಕಾರದಲ್ಲಿ ಮುಂದುವರಿಯಲು ಕೂಡ ಎಲ್ಲರೂ ಕಾರಣರು ಎಂದು ಹೇಳಿದರು.

ಎರಡು ವರ್ಷಗಳನ್ನು ಸರಕಾರ ಯಶಸ್ವಿಯಾಗಿ ಪೂರೈಸಿದೆ. ಇನ್ನುಳಿದಿರುವ ಎರಡು ಮುಕ್ಕಾಲು ವರ್ಷಗಳಲ್ಲಿ ರಾಜ್ಯವನ್ನು ಯಶಸ್ವಿ ಪಥದತ್ತ ಮುನ್ನಡೆಸಲು ಅವಕಾಶ ನೀಡಿ. ನನಗೆ ಅಧಿಕಾರ ಕೊಡಮಾಡಿರುವುದು ಜನತೆ, ಇಲ್ಲಿ ನಾನು ನೆಪ ಮಾತ್ರನಾಗಿದ್ದೇನೆ. ರಾಜ್ಯವನ್ನು ಮಾದರಿಯನ್ನಾಗಿ ಮಾಡುವುದೇ ನನ್ನ ಹಂಬಲ ಎಂದು ನುಡಿದರು.

ಸಂಪುಟಕ್ಕೆ ಸೇರ್ಪಡೆಗೊಂಡಿರುವ ನೂತನ ಸಚಿವರಿಗೆ ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸ್ಥಾನಗಳನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಪಕ್ಷದ ಮುಖಂಡರ ಸಮನ್ವಯ ಸಮಿತಿಯಲ್ಲಿ ಚರ್ಚೆ ನಡೆಸಿ, ಯಾವ ಸಚಿವರಿಗೆ ಯಾವ ಜಿಲ್ಲೆಯ ಉಸ್ತುವಾರಿ ಸ್ಥಾನ ನೀಡಬೇಕೆಂಬುದನ್ನು ನಿರ್ಧರಿಸಲಾಗುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ