ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಠಗಳು ಸರಕಾರದಷ್ಟೇ ಕೆಲಸ ನಿರ್ವಹಿಸುತ್ತಿವೆ: ಭಾರದ್ವಾಜ್ (HR Bharadhwaj | Karnataka | Governor | Adichunchanagiri)
Bookmark and Share Feedback Print
 
ಧಾರ್ಮಿಕ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಬಳಸಿಕೊಂಡು ನಾಡಿನ ಬಡಜನರ ಅಭಿವೃದ್ದಿಗೆ ಯೋಜನೆ ರೂಪಿಸಬೇಕು ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಕರೆ ನೀಡಿದರು.

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಶ್ರೀ ಕ್ಷೇತ್ರದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 37ನೇ ವಾರ್ಷಿಕ ಪಟ್ಟಾಭಿಷೇಕ ಮತ್ತು 32ನೇ ರಾಜ್ಯ ಮಟ್ಟದ ಶ್ರೀ ಕಾಲಭೈರವೇಶ್ವರ ಜನಪದ ಕಲಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಮಠ-ಮಾನ್ಯಗಳು ಗ್ರಾಮೀಣ ಜನತೆಗೆ ಅನ್ನ, ಅಕ್ಷರ ಮತ್ತು ಆರೋಗ್ಯ ನೀಡುವ ಮೂಲಕ ಸರಕಾರದಷ್ಟೇ ಕೆಲಸ ನಿರ್ವಹಿಸುತ್ತಿವೆ. ಬಸವಣ್ಣ, ಕಬೀರರ ದಾರಿಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಸಾಮಾಜಿಕ ಬದಲಾವಣೆಗೆ ಅಹರ್ನಿಶಿ ಶ್ರಮಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಧರ್ಮ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ನಂಬಿದವರು ಸರಳತೆ ಜತೆಗೆ ಪರಿಶುದ್ಧತೆಯಿಂದ ಜೀವನ ನಡೆಸಬೇಕು. ಧರ್ಮದ ಮೂಲಕ ಮೋಕ್ಷ ಪಡೆಯಲು ಸಾಧ್ಯ. ಸಾಧು-ಸಂತರ ಹಾದಿಯನ್ನು ಅನುಕರಿಸಬೇಕು ಎಂದು ಸಲಹೆ ನೀಡಿದರು.

ಧಾರ್ಮಿಕತೆಯ ವಿಷಯದಲ್ಲಿ ಭಾರತವು ಸಾಗರವಿದ್ದಂತೆ. ನಮ್ಮ ದೇಶ ಮತ್ತು ಸಂಸ್ಕ್ಕತಿಗೆ ಎರಡುವರೆ ಸಹಸ್ರ ವರ್ಷದ ಇತಿಹಾಸವಿದೆ. ಅಮೆರಿಕದಂತಹ ದಿಗ್ಗಜ ರಾಷ್ಟ್ತ್ರಕ್ಕೆ ಇರುವುದು ಎರಡುವರೆ ಶತಮಾನದ ಇತಿಹಾಸವಷ್ಟೇ. ಧಾರ್ಮಿಕ ಮತ್ತು ಸಾಂಸ್ಕ್ಕತಿಕವಾಗಿ ನಮ್ಮ ದೇಶವನ್ನು ಪಾಶ್ಚಾತ್ಯರು ಈಗ ಅನುಕರಿಸಲು ಹೊರಟಿದ್ದಾರೆ ಎಂದರು.

ಆದಿಚುಂಚನಗಿರಿ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಠಾಧೀಶರಾದ ಬಳಿಕ ಈ ಕ್ಷೇತ್ರದ ಸ್ವರೂಪವೇ ಬದಲಾಗಿದೆ. ವಿಶ್ವದೆಲ್ಲೆಡೆ ಶ್ರೀಕ್ಷೇತ್ರ ಮತ್ತು ಮಠದ ಕೀರ್ತಿ ಬೆಳಗುತ್ತಿದೆ ಎಂದು ಭಾರದ್ವಾಜ್ ಬಣ್ಣಿಸಿದರು.
ಸಂಬಂಧಿತ ಮಾಹಿತಿ ಹುಡುಕಿ