ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ಸಾಕಷ್ಟು ಅಗ್ನಿಪರೀಕ್ಷೆ ಎದುರಿಸಿದ್ರು: ಬಿ.ವೈ.ರಾಘವೇಂದ್ರ (BJP | Yeddyurappa | Raghavendra | Chithra durga | Congress)
Bookmark and Share Feedback Print
 
ರಾಜ್ಯದಲ್ಲಿ ಈವರೆಗೂ ಆಡಳಿತ ನಡೆಸಿದ ಯಾವ ಮುಖ್ಯಮಂತ್ರಿಗಳು ಎದುರಿಸಲಾರದಷ್ಟು ಪರೀಕ್ಷೆಗಳನ್ನು ಬಿ.ಎಸ್.ಯಡಿಯೂರಪ್ಪ ಎದುರಿಸುತ್ತಿದ್ದಾರೆ ಎಂದು ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ತಾಲೂಕಿನ ಸಿರಿಗೆರೆ ತರಳಬಾಳು ಮಠದಲ್ಲಿ ಶುಕ್ರವಾರ ನಡೆದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ 18ನೇ ಶ್ರದ್ದಾಂಜಲಿ ಸಮಾರಂಭದಲ್ಲಿ ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಸುರಿದ ಮಳೆಯಿಂದ ಉಂಟಾದ ನೆರೆ ಸೇರಿದಂತೆ ಅನೇಕ ಪರೀಕ್ಷೆಗಳು ಎದುರಾಗಿವೆ. ರಾಜ್ಯದ ಜನರ ಆಶೀರ್ವಾದದಿಂದ ಎಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಬಜೆಟ್ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ತರಳಬಾಳು ಶ್ರೀಗಳನ್ನು ಮಠಕ್ಕೆ ಏನಾದರೂ ಬೇಕೆ ಎಂದು ಕೇಳಿದ್ದರು. ಆದರೆ ಶ್ರೀಗಳು ಮಠಕ್ಕೆ ಏನೂ ಬೇಡ. ಈ ಭಾಗದಲ್ಲಿ ಕುಡಿವ ನೀರಿನ ಬವಣೆಯಿದೆ. ಶಾಂತಿಸಾಗರದಿಂದ ನೀರು ಹರಿಸಿ ಸಮಸ್ಯೆ ಬಗೆಹರಿಸಿ ಎಂದಿದ್ದರು. ಬಜೆಟ್‌ನಲ್ಲಿ ಇದಕ್ಕಾಗಿ 20 ಕೋಟಿ ರೂ. ಮೀಸಲಿಡಲಾಗಿದೆ. ಈ ಯೋಜನೆಯಿಂದ ಹತ್ತಾರು ಹಳ್ಳಿಗಳಿಗೆ ಶುದ್ಧ ಕುಡಿವ ನೀರು ಸಿಗಲಿದೆ. ತುಂಗಾ ನದಿ ದಂಡೆಯಲ್ಲಿ ಹಿರಿಯ ಶ್ರೀಗಳ ಹೆಸರಿನಲ್ಲಿ 5 ಕೋಟಿ ವೆಚ್ಚದಲ್ಲಿ ಗುರುಭವನ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ