ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾಯಕತ್ವ ಬದಲಾವಣೆ ಇಲ್ಲವೇ ಸರಕಾರ ಪತನ: ದತ್ತ ಭವಿಷ್ಯ (JDS | Dutta | Kumaraswamy | Hubballi | BJP | Yeddyurappa)
Bookmark and Share Feedback Print
 
ಬಿಜೆಪಿ ಸರಕಾರದಲ್ಲಿ ತಾತ್ಕಾಲಿಕವಾಗಿ ಶಮನಗೊಂಡಿರುವ ಭಿನ್ನಮತ ಶೀಘ್ರದಲ್ಲಿಯೇ ಸ್ಫೋಟಗೊಂಡು ನಾಯಕತ್ವ ಬದಲಾವಣೆ ಇಲ್ಲವೇ ಸರಕಾರ ಪತನಗೊಳ್ಳಲಿದೆ ಎಂದು ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತ ಭವಿಷ್ಯ ನುಡಿದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹಿರಿಯ ನಾಯಕರನ್ನು ಗಣನೆಗೆ ತೆಗೆದುಕೊಳ್ಳದ ಪರಿಣಾಮ ಪಕ್ಷದಲ್ಲಿ ದಿನದಿಂದ ದಿನಕ್ಕೆ ಭಿನ್ನಮತ ತೀವ್ರಗೊಳ್ಳುತ್ತಿದ್ದು, ಇದರಿಂದಾಗಿ ಸರಕಾರ ಪತನಗೊಳ್ಳುವುದು ಖಚಿತ ಎಂದರು.

ಸಚಿವ ಸಂಪುಟದಲ್ಲಿ ಮೇಲ್ಜಾತಿಯವರಿಗೆ ಪ್ರಬಲ ಖಾತೆಗಳನ್ನು ನೀಡಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಕೆಲಸಕ್ಕೆ ಬಾರದ ಖಾತೆ ನೀಡಲಾಗಿದೆ. ಯಡಿಯೂರಪ್ಪನವರ ಮಂತ್ರಿಮಂಡಲದಲ್ಲಿರುವ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಚಿವರಿಗೆ ನಿಜವಾಗಲೂ ಸ್ವಾಭಿಮಾನ ವಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಗೆ ಬರಬೇಕು ಎಂದೂ ಸಲಹೆ ನೀಡಿದರು.

ಸಾಮಾಜಿಕ ನ್ಯಾಯಕ್ಕೆ ಕೊಡಲಿ ಪೆಟ್ಟು ಹಾಕಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದ್ದಾರೆ. 15 ಜಿಲ್ಲೆಗಳಿಗೆ ಸಚಿವರನ್ನೇ ನೇಮಕ ಮಾಡಿಲ್ಲ. ಕೇವಲ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗೆ 11 ಸಚಿವ ಸ್ಥಾನ ನೀಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅಭಿವೃದ್ದಿ ಶೂನ್ಯವಾಗಿದೆ. ಜನತೆಯಲ್ಲಿ ಸುಳ್ಳಿನ ಸರಮಾಲೆ ಬಿತ್ತಲು ಸಾಧನಾ ಸಮಾ ವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನೆರೆ ಪೀಡಿತರಿಗೆ ಇಲ್ಲಿಯವರೆಗೂ ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು. ಇತ್ತೀಚೆಗೆ ನಡೆದ ಕಡೂರು ಮತ್ತು ಗುಲ್ಬರ್ಗ ದಕ್ಷಿಣ ಕ್ಷೇತ್ರ ಉಪ ಚುನಾವಣೆಯಲ್ಲಿ ಸರಕಾರ ಹಣ ಹಾಗೂ ಹೆಂಡದ ಹೊಳೆ ಹರಿಸಿ ತಮ್ಮ ಸೋಲಿಗೆ ಕಾರಣವಾಗಿದ್ದು, ಕಡೂರು ಕ್ಷೇತ್ರ ಗೆಲ್ಲಲು 40 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದೂ ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ