ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆದಿಕವಿ ರನ್ನನ ಹೆಸರಿನಲ್ಲಿ ಟ್ರಸ್ಟ್: ಗೋವಿಂದ ಕಾರಜೋಳ (Adhi kavi pampa | Karajola | BJP | Yeddyurappa)
Bookmark and Share Feedback Print
 
ಆದಿಕವಿ ರನ್ನನ ಹೆಸರಿನಲ್ಲಿ ಟ್ರಸ್ಟ್ ಆರಂಭಿಸಲಾಗುವುದು. ಟ್ರಸ್ಟ್ ಸ್ಥಾಪಿಸಿ ಕವಿ ರನ್ನನ ಇತಿಹಾಸ, ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಸರಕಾರ ಮಾಡಲಿದೆ. ಮುಧೋಳದಲ್ಲೇ ಹಳೆಗನ್ನಡ ಹಾಗೂ ಮೋಡಿ ಲಿಪಿ ಸಂಶೋಧನೆ ಕೇಂದ್ರವನ್ನು ಶೀಘ್ರ ಆರಂಭಿಸಲಾಗುವುದು ಎಂದು ಕನ್ನಡ ಸಂಸ್ಕೃತಿ ಮತ್ತು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಇಲ್ಲಿನ ರನ್ನ ಸಂಶೋಧನೆ ಕೇಂದ್ರಕ್ಕೆ ಈಗಾಗಲೇ ಮೂಲ ಸೌಲಭ್ಯ ಒದಗಿಸಲಾಗಿದೆ. ಗ್ರಂಥಾಲಯಕ್ಕೆ ಸಾಕಷ್ಟು ಪುಸ್ತಕಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೆಲಸದ ಹೊರೆ ಬಹಳ ಇರುವುದರಿಂದ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ತಮ್ಮ ಹೆಗಲಿಗೆ ಹೊರೆಸಿದ್ದಾರೆ ಎಂದು ವಿವರಿಸಿದರು.

ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿರಿಯ ನಾಯಕರಾಗಿರುವ ತಮಗೆ ಇನ್ನೂ ಮಹತ್ವದ ಖಾತೆಯನ್ನು ಸಿಎಂ ಕೊಡಬಹುದಾಗಿತ್ತಲ್ಲಾ ಎಂಬ ಪ್ರಶ್ನೆಗೆ ನಗು ಮುಖದಿಂದಲೇ ಉತ್ತರಿಸಿದ ಸಚಿವರು, ತಮಗೆ ನೀಡಿದ ಖಾತೆ ಬಹಳ ಮಹತ್ವದ್ದಾಗಿದೆ. ಅದಕ್ಕೆ ಮೆರುಗು ನೀಡುವುದಾಗಿ ಹೇಳಿ ಜಾರಿಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ