ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೆಜ್ಜೆ ಹೆಜ್ಜೆಗೂ ವಿರೋಧಿಗಳಿಂದ ಪ್ರತಿರೋಧ: ಯಡಿಯೂರಪ್ಪ (chief minister opposition development)
Bookmark and Share Feedback Print
 
PTI
ನಾಡು ಕಟ್ಟುವ ಕಾಯಕದಲ್ಲಿ ಹಗಲಿರುಳು ಶ್ರಮಿಸುತ್ತಿರುವ ತಮಗೆ ಕೆಲವರು ಹೆಜ್ಜೆ ಹೆಜ್ಜೆಗೂ ಪ್ರತಿರೋಧ ಒಡ್ಡುತ್ತಿದ್ದಾರೆ. ಅದರಿಂದ ತಾವು ಅಗ್ನಿ ಪರೀಕ್ಷೆ ಎದುರಿಸುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ತಾಲೂಕಿನ ಆದಿಚುಂಚನಗಿರಿಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 37ನೇ ವಾರ್ಷಿಕ ಪಟ್ಟಾಭಿಷೇಕ, ಚುಂಚಶ್ರೀ ಪ್ರಶಸ್ತಿ ಪ್ರದಾನ ಹಾಗೂ 32ನೇ ರಾಜ್ಯ ಮಟ್ಟದ ಕಾಲಭೈರವೇಶ್ವರ ಜನಪದ ಕಲಾ ಮೇಳದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇವರು, ಮಠಾಧಿಪತಿಗಳು ಮತ್ತು ಜನತೆಯ ಆಶೀರ್ವಾದ ತಮಗಿದೆ. ಆ ಶಕ್ತಿಯಿಂದ ಎಂತಹ ಅಡೆತಡೆಗಳನ್ನೂ ಮೆಟ್ಟಿ ನಿಲ್ಲಬಲ್ಲೆ. ಅಗ್ನಿ ಪರೀಕ್ಷೆಯನ್ನೂ ಸಮರ್ಥವಾಗಿ ಎದುರಿಸಬಲ್ಲೆ ಎಂದು ಅವರು, ರಾಜಕೀಯ ವಿರೋಧಿಗಳ ಹೆಸರು ಪ್ರಸ್ತಾಪಿಸದೆ ಟೀಕಾ ಪ್ರಹಾರ ನಡೆಸಿದರು.
ತಾವು ಅಧಿಕಾರಕ್ಕೆ ಬಂದ ನಂತರ ರಾಜ್ಯ ಅಭಿವೃದ್ದಿಯ ನಾಗಾಲೋಟದಲ್ಲಿ ಸಾಗುತ್ತಿದೆ. ಇದನ್ನು ಸಹಿಸದ ಕೆಲವರು ಪಿತೂರಿ ನಡೆಸುತ್ತಿದ್ದಾರೆ. ಯಾವ ಹಂತದಲ್ಲೂ ತಾವು ಮಾನಸಿಕವಾಗಿ ಜರ್ಜರಿತರಾಗದೆ ಮುನ್ನುಗ್ಗುತ್ತಿರುವೆ ಎಂದರು.

ಭ್ರಷ್ಟ ರಾಜಕಾರಣಿಗಳಿಂದ ರಾಜ್ಯ ನೀರೀಕ್ಷಿತ ಅಭಿವೃದ್ದಿ ಕಂಡಿಲ್ಲ. ವಿಜಯನಗರ ಅರಸರು ಆಳಿದ ಈ ನಾಡಿನಲ್ಲಿ ತಾವು ಬಡವರು, ದೀನ-ದಲಿತರ ಉದ್ದಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದು, ಇನ್ನುಳಿದ ಅವಧಿಯಲ್ಲಿ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ದಿಯತ್ತ ಕೊಂಡೊಯ್ಯುವುದಾಗಿ ತಿಳಿಸಿದರು.

ಭ್ರಷ್ಟರಿಂದ ಹಾದಿ ತಪ್ಪಿರುವ ಸಮಾಜವನ್ನು ಸರಿದಾರಿಗೆ ತರಲು ಮಠಾಧಿಪತಿಗಳು ಮುಂದಾಗಬೇಕು. ಒಂದೊಮ್ಮೆ ಸರಕಾರವೇನಾದರೂ ತಪ್ಪು ಮಾಡಿದರೆ, ಅದನ್ನು ತಿಳಿಸಿ ಕಿವಿ ಹಿಂಡುವ ಕೆಲಸವನ್ನೂ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ