ಸದ್ಗುಣ, ಸಂಸ್ಕಾರ, ಸಂಸ್ಕೃತಿ, ಸಾಮಾಜಿಕ ಚಿಂತನೆ, ರಾಷ್ಟ್ರೀಯತೆಯ ಮತ್ತೊಂದು ಮುಖವಾಗಿರುವ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಆದರ್ಶ ಬಿಜೆಪಿಗೆ ದಾರಿದೀಪವಾಗಲೆಂದು ಸಮಾಜ ಕಲ್ಯಾಣ ಸಚಿವ ಆನೇಕಲ್ ನಾರಾಯಣಸ್ವಾಮಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಪಂಡೀತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ, ಸಮಸ್ಯೆಗಳಿಗೆ ಪರಿಹಾರ ಹುಡುಕುವ ದಿಸೆಯಲ್ಲಿ ದೀನ ದಯಾಳ್ ಮತ್ತು ವೀರ ಸಾವರ್ಕರ್ ಬದುಕು ಮಾರ್ಗದರ್ಶಕವಾಗಬೇಕೆಂದರು.
ಸಮಾಜ ಕಲ್ಯಾಣ ಇಲಾಖೆಯ ಭ್ರಷ್ಟತೆಗೆ ಮೇಜರ್ ಸರ್ಜರಿ ಮಾಡುವುದಾಗಿ ತಿಳಿಸಿದ ಸಚಿವರು, ದಲಿತರ ಶಿಕ್ಷಣಕ್ಕೆ ಒತ್ತು ನೀಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ದಲಿತರ ಬಗ್ಗೆ ಇಂದು ಎಲ್ಲೆಡೆ ಗಮನ ಹರಿಯುತ್ತಿಲ್ಲ. ಈ ಬಗ್ಗೆ ಸರಕಾರ ಅರಿತಿದ್ದು, ವ್ಯವಸ್ಥಿತತವಾಗಿ ದಲಿತ ಹಾಗೂ ಹಿಂದುಳಿದ ವರ್ಗದವರನ್ನು ಮೇಲಕ್ಕೆ ತರುವ ಕಾರ್ಯ ಆಗಲಿದೆ ಎಂದರು.