ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಂಪುಟಕ್ಕೆ ಭರ್ಜರಿ ಸರ್ಜರಿ:ಉಸ್ತುವಾರಿ ಸಚಿವರ ಬದಲಾವಣೆ (B.s. yudiyurappa Minister Surgery)
Bookmark and Share Feedback Print
 
PTI
ಸಚಿವ ಸಂಪುಟ ಪುನರ್‌ರಚನೆಯಿಂದಾಗಿ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಬದಲಾಯಿಸಲಾಗಿದ್ದು, ಮೊದಲ ಬಾರಿಗೆ ಪಕ್ಷೇತರ ಸಚಿವರಿಗೂ ಜಿಲ್ಲೆಗಳ ಉಸ್ತುವಾರಿ ಹೊಣೆಯನ್ನು ವಹಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ ಮಾಡಿದ್ದಾರೆ. .

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸರ್ಕಾರ ರಚನೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ನಾಲ್ವರು ಪಕ್ಷೇತರ ಸಚಿವರಿಗೆ ಕೊನೆಗೂ ಅವಕಾಶ ನೀಡಲಾಗಿದೆ.

ಗೃಹ ಸಚಿವ ಆರ್.ಅಶೋಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ಎರಡು ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (ಶಿವಮೊಗ್ಗ), ಶೋಭಾ ಕರಂದ್ಲಾಜೆ(ತುಮಕೂರು) ನರೇಂದ್ರಸ್ವಾಮಿ(ಚಾಮರಾಜನಗರ)ರೇವೂನಾಯಕ್ ಬೆಳಮಗಿ(ಬೀದರ್)ಗೋವಿಂದ ಕಾರಜೋಳ(ಬಾಗಲಕೋಟೆ)ಜನಾರ್ಧನ್ ರೆಡ್ಡಿ (ಬಳ್ಳಾರಿ)ಬಸವರಾಜ್ ಬೊಮ್ಮಾಯಿ(ಗುಲ್ಬರ್ಗಾ),ಎಸ್,ರವೀಂದ್ರನಾಥ್(ದಾವಣೆಗೆರೆ), ಜಿ.ಕರುಣಾಕರ ರೆಡ್ಡಿ(ಚಿತ್ರದುರ್ಗ),ಕೃಷ್ಣ ಜೆಪಾರೇಮರ್(ದಕ್ಷಿಣ ಕನ್ನಡ) ರಾಮಲು(ಗದಗ್ ಮತ್ತು ರಾಮನಗರ), ವಿ.ಸೋಮಣ್ಣ (ಹಾಸನ), ಆರ್.ಅಶೋಕ್ (ಮಂಡ್ಯ ಮತ್ತು ಬೆಂಗಳೂರು ದಕ್ಷಿಣ,ಎಂ.ಪಿ ರೇಣುಕಾಚಾರ್ಯ(ಚಿಕ್ಕಮಗಳೂರು)ಡಾ.ವಿ.ಎಸ್ ಆಚಾರ್ಯ(ಉಡುಪಿ),ಕಟ್ಟಾ ಸುಬ್ರಮಣ್ಯಂ ನಾಯ್ಡು(ಬೆಂಗಳೂರು ಉತ್ತರ)ಜಗದೀಶ್ ಶೆಟ್ಟರ್(ಧಾರವಾಡ)ಉಮೇಶ್ ಕತ್ತಿ (ಬೆಳಗಾವಿ)ರಾಮದಾಸ್(ಮೈಸೂರು)ಕಾಗೇರಿ (ಉತ್ತರ ಕನ್ನಡ)ಮುರುಗೇಶ್ ನಿರಾಣಿ(ವಿಜಾಪುರ್),ಸಿಎಚ್.ವಿಜಯ್‌ಶಂಕರ್ (ಕೊಡಗು) ಶಿವರಾಜ್ ತಂಗಡಗಿ(ಕೊಪ್ಪಳ)ಎಂ.ನಾರಾಯಣಸ್ವಾಮಿ(ಕೋಲಾರ)ಬಾಲಚಂದ್ರ ಜಾರಕಿಹೋಳಿ(ಯಾದಗಿರಿ),ಡಿ.ಸುಧಾಕರ್ (ರಾಯಚೂರು),ಬಿ. ಎಎಸ್. ಬಚ್ಚೆಗೌಡ (ಬೆಂಗಳೂರು ಗ್ರಾಮಾಂತರ)

ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿದ್ದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರೊ.ಮುಮ್ತಾಜ್ ಆಲಿಖಾನ್ ಅವರಿಗೆ ಕೈಬಿಡಲಾಗಿದೆ. ಸಚಿವರಾದ ಸಿ.ಸಿ.ಪಾಟೀಲ್, ಎಸ್.ಸುರೇಶ್‌ಕುಮಾರ್, ಲಕ್ಷ್ಮಣ ಸವದಿ, ಆನಂದ್ ಆಸ್ನೋಟಿಕರ್ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ವಹಿಸಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ