ಬೆಂಗಳೂರು, ಗುರುವಾರ, 30 ಸೆಪ್ಟೆಂಬರ್ 2010( 11:42 IST )
ಪಾನಮತ್ತನಾಗಿ ಲೈಂಗಿಕವಾಗಿ ವಿಕೃತ ರೀತಿಯಲ್ಲಿ ವರ್ತಿಸಿ ಮೂರು ಕೊಲೆ ಹಾಗೂ ಒಂದು ಕೊಲೆಯತ್ನ ನಡೆಸಿದ್ದ ಸುಬ್ರಮಣ್ಯಪುರದ ಮಂಜ (26)ನನ್ನು ಕುಮಾರಸ್ವಾಮಿಲೇಔಟ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಆರೋಪಿ ಮಂಜ ಪಾನಮತ್ತನಾದಾಗ ಲೈಂಗಿಕವಾಗಿ ವಿಕೃತ ರೀತಿಯ ಆನಂದ ಪಡೆಯಲು ಮಹಿಳೆಯರು, ಪುರುಷರನ್ನು ಬಳಸಿಕೊಳ್ಳಲು ಯತ್ನಿಸುತ್ತಿದ್ದು ಅವರು ಪ್ರತಿರೋಧ ತೋರಿದಾಗ ಕೊಲೆ ಮಾಡಿ ಪರಾರಿಯಾಗುತ್ತಿದ್ದ.
ಕಳೆದ ಜನವರಿಯಲ್ಲಿ ಜರಗನಹಳ್ಳಿ ಸಮೀಪ ಪರಿಚಯವಾದ ಮೋಹನ್ ಎಂಬಾತನನ್ನು ಲೈಂಗಿಕ ಚಟುವಟಿಕೆಗೆ ಬಳಸಿಕೊಳ್ಳಲು ಯತ್ನಿಸುತ್ತಿದ್ದು, ಆತ ಒಪ್ಪದಿದ್ದಾಗ ಕೊಲೆಗೈದು ತಲೆಮರೆಸಿಕೊಂಡಿದ್ದ.
ಖಚಿತ ಮಾಹಿತಿ ಮೇರೆಗೆ ಮಂಜನನ್ನು ಬಂಧಿಸಿದ ಕುಮಾರಸ್ವಾಮಿಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ಬಾಬು ನರೋನ್ ಅವರು ವಿಚಾರಣೆಗೊಳಪಡಿಸಿದಾಗ, ಆತ ಸುಬ್ರಮಣ್ಯಪುರದಲ್ಲಿ ಎರಡು, ತುಮಕೂರಿನ ತಿಲಕ್‌ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ 1 ಹಾಗೂ ಒಂದು ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು.