ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶಾಸಕರು ಕಾಫಿ, ತಿಂಡಿಗಾಗಿ ರೆಸಾರ್ಟ್‌ಗೆ ಹೋಗಿದ್ದಾರೆ!: ಈಶ್ವರಪ್ಪ (BJP | Ishwarappa | KPCC | Yeddyurappa | Dhanajaya kumar)
Bookmark and Share Feedback Print
 
NRB
ಒಂದೆಡೆ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕರ ಗುಂಪೊಂದು ಸರಕಾರದ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದರೆ, ಮತ್ತೊಂದೆಡೆ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಕಾಫಿ, ತಿಂಡಿಗಾಗಿ ಕೆಲವು ಶಾಸಕರು ರೆಸಾರ್ಟ್‌ಗೆ ಹೋಗಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸಮಜಾಯಿಷಿ ನೀಡಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಕಳೆದ ರಾತ್ರಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಸುಮಾರು 20 ಮಂದಿ ಶಾಸಕರು, ಕೆಲವು ಸಚಿವರು ತಮಿಳುನಾಡಿನ ರೆಸಾರ್ಟ್‌ವೊಂದರಲ್ಲಿ ರಹಸ್ಯ ಮಾತುಕತೆ ನಡೆಸಿ, ಸರಕಾರದ ವಿರುದ್ಧ ಬಂಡಾಯ ಎದ್ದಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಈಶ್ವರಪ್ಪ ನೀಡಿದ ಪ್ರತಿಕ್ರಿಯೆ ಇದಾಗಿದೆ.

'ನೋಡಿ ಇದೆಲ್ಲಾ ಗಾಳಿ ಸುದ್ದಿ. ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ದಿನದಿಂದ ಇಂತಹ ಊಹಾಪೋಹಗಳು ಕೇಳಿಬರುತ್ತಿವೆ. ಯಾವ ಶಾಸಕರೂ ರೆಸಾರ್ಟ್‌ಗೆ ಹೋಗಿಲ್ಲ. ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಭಿನ್ನಮತ ಇಲ್ಲ' ಎಂದರು.

ಯಾವುದೇ ಕಾರಣಕ್ಕೂ ಸರಕಾರ ಬೀಳಲ್ಲ, ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಾರೆ.ಯಾರಾದ್ರು ರೆಸಾರ್ಟ್‌ಗೆ ಹೋದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಮಾಧ್ಯಮದವರೇ ಅಂತಹ ಸುದ್ದಿಯನ್ನು ಏನೋ ಆಗಿದೆ ಎಂಬಂತೆ ಬಿಂಬಿಸುತ್ತಿದ್ದಾರೆಂದು ಗೂಬೆ ಕೂರಿಸಿದರು. ಆದರೆ ರೇಣುಕಾಚಾರ್ಯ ನೇತೃತ್ವದಲ್ಲಿ 20 ಶಾಸಕರು ಬಂಡಾಯ ಎದ್ದಿದ್ದಾರಲ್ಲ ಎಂಬ ಪ್ರಶ್ನೆಗೂ ಅದೆಲ್ಲ ಸುಳ್ಳು ಎಂದು ಪುನರುಚ್ಚರಿಸಿ ಜಾರಿಕೊಂಡರು.

ಸರಕಾರ ಸುಭದ್ರವಾಗಿದೆ-ಧನಂಜಯ್ ಕುಮಾರ್: ಅವಕಾಶ ವಂಚಿತರಿಗೆ ಪಕ್ಷದಲ್ಲಿ ಸೂಕ್ತ ಸಮಯದಲ್ಲಿ ಪ್ರಾತಿನಿಧ್ಯ ನೀಡಲಾಗುವುದು. ಕೆಲವು ಶಾಸಕರು ತಮ್ಮ ಆಕಾಂಕ್ಷೆ, ಅಪೇಕ್ಷೆ ವ್ಯಕ್ತಪಡಿಸುವುದು ಸಹಜ. ರಾಜಕೀಯ ಪಕ್ಷದಲ್ಲಿ ಇವೆಲ್ಲ ಸಾಮಾನ್ಯ. ಆದರೆ ಆಡಳಿತಾರೂಢ ಬಿಜೆಪಿ ಪಕ್ಷ ಸುಭದ್ರವಾಗಿದೆ ಎಂದು ಬಿಜೆಪಿ ಮುಖಂಡ ಧನಂಜಯ್ ಕುಮಾರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ನಡೆದ ಎಲ್ಲಾ ಉಪ ಚುನಾವಣೆಗಳಲ್ಲಿಯೂ ಜನರು ಭಾರತೀಯ ಜನತಾ ಪಕ್ಷವನ್ನೇ ಬೆಂಬಲಿಸಿದ್ದಾರೆ. ಹಾಗಾಗಿ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಬಂಡಾಯ ಇವೆಲ್ಲ ಸಹಜ ಪ್ರಕ್ರಿಯೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಅಪೇಕ್ಷೆ ಹೊರಹಾಕಲು ಸ್ವಾತಂತ್ರ್ಯ ಇದೆ. ಹಾಗೆಯೇ ಅವೆಲ್ಲವಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಸರಕಾರ ಅಸ್ಥಿರಗೊಳಿಸಲ್ಲ-ದೇಶಪಾಂಡೆ:ರಾಜ್ಯರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ನಾವು ಯಾವುದೇ ಕಾರಣಕ್ಕೂ ಸರಕಾರವನ್ನು ಅಸ್ಥಿರಗೊಳಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಬಂಡಾಯ ಪಕ್ಷದ ಆಂತರಿಕ ವಿಚಾರವಾಗಿದ್ದು, ಆ ಬಗ್ಗೆ ಏನೂ ಹೇಳಲಾರೆ. ಆದರೆ ಅವರ ತಪ್ಪಿನಿಂದಾಗಿ ಸರಕಾರ ಬಿದ್ದು ಹೋದರೆ ನಾವೇನೂ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.

ಸಂಕಟದಲ್ಲಿ ಸರಕಾರ-ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ?
ಸಂಬಂಧಿತ ಮಾಹಿತಿ ಹುಡುಕಿ