ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನ.20: ಮುಂಬೈಯಲ್ಲಿ ಮಿಸ್ಟರ್ ಮತ್ತು ಮಿಸ್ ಬಂಟ್ ಸ್ಪರ್ಧೆ (Akanksha World 2010 | Miss Bunt | Mister Bunt | Mumbai Bantara Sangha)
Bookmark and Share Feedback Print
 
ಮುಂಬೈ ಬಂಟರ ಸಂಘದ ಯುವ ವಿಭಾಗ ಪದಾಧಿಕಾರಿಗಳು
PR
ಮುಂಬೈ ಬಂಟರ ಸಂಘದಲ್ಲಿ ಪ್ರತೀ ವರ್ಷ ನಡೆಯುತ್ತಿರುವ ಮಿಸ್ಟರ್ ಬಂಟ್ ಮತ್ತು ಮಿಸ್ ಬಂಟ್ ಎಂಬ ವ್ಯಕ್ತಿತ್ವದ ಸ್ಪರ್ಧೆಗೆ ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಶ ದೊರೆತಿದೆ. ನವೆಂಬರ್ 20, 2010ರಂದು ಮುಂಬೈಯ ಬಂಟರ ಭವನದಲ್ಲಿ ಆಕಾಂಕ್ಷಾ ವರ್ಲ್ಡ್ 2010 ಭರ್ಜರಿ ಸ್ಪರ್ಧೆ ನಡೆಯಲಿದ್ದು, ಮುಂಬೈ ಕನ್ನಡಿಗರು ಇದಕ್ಕೆ ಸಿದ್ಧರಾಗುತ್ತಿದ್ದಾರೆ.

ನವೆಂಬರ್ 20ರಂದು ಮುಂಬಯಿಯಲ್ಲಿ ವಿಶ್ವ ಯುವ ಬಂಟರ ಸಮಾವೇಶ ನಡೆಯಲಿದ್ದು, ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಆಕಾಂಕ್ಷಾ ವರ್ಲ್ಡ್ ಸ್ಪರ್ಧೆಯು ಈ ಬಾರಿ ವಿಶ್ವ ಮಟ್ಟದಲ್ಲಿ ನಡೆಯುತ್ತಿರುವುದರಿಂದ ಹೊಸ ಹುರುಪು ಬಂದಿದೆ.

ಇದು ಬಂಟರ ಪ್ರತಿಭೆಯನ್ನು ಒರೆ ಹಚ್ಚುವ ಕಾರ್ಯಕ್ರಮವಾಗಿದ್ದು, ಹಿರಿಯರು ಕಿರಿಯರೆನ್ನದೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಭಾರತದೊಳಗೆ ಮತ್ತು ವಿದೇಶದಲ್ಲಿರುವ ಎಲ್ಲ ಬಂಟರ ಸಂಘಗಳಿಗೂ ಇದರಲ್ಲಿ ಪಾಲ್ಗೊಳ್ಳಲು ಆಹ್ವಾನ ಕಳುಹಿಸಲಾಗಿದ್ದು, ಬೆಂಗಳೂರು, ಚೆನ್ನೈ, ಪುಣೆ, ಯುಎಸ್ಎಗಳಿಂದ ಅದ್ಭುತ ಪ್ರತಿಕ್ರಿಯೆಗಳು ಬಂದಿವೆ. ಹೊರ ರಾಜ್ಯದಿಂದ ಬರುತ್ತಿರುವ ಸ್ಪರ್ಧಾಳುಗಳ ವಸತಿ, ಪ್ರಯಾಣದ ಜವಾಬ್ದಾರಿಯನ್ನು ಮುಂಬೈ ಬಂಟರ ಸಂಘದ ಯುವ ಘಟಕವು ಹೊತ್ತುಕೊಂಡಿದೆ.

ಮಿಸ್ಟರ್ ಮತ್ತು ಮಿಸ್ ಬಂಟ್ ವಿಜೇತರು ತಲಾ 51 ಸಾವಿರ ರೂಪಾಯಿ ಬಹುಮಾನವನ್ನು ಗೆದ್ದುಕೊಳ್ಳಲಿದ್ದು, ಮೊದಲ ರನ್ನರ್ ಅಪ್‌ಗಳು ತಲಾ 35 ಸಾವಿರ ರೂ. ಹಾಗೂ ದ್ವಿತೀಯ ರನ್ನರ್ ಅಪ್‌ಗಳು ತಲಾ 25 ಸಾವಿರ ರೂಪಾಯಿ ಬಹುಮಾನ ಗಿಟ್ಟಿಸಿಕೊಳ್ಳಲಿರುವುದರಿಂದ ಈ ಬಾರಿ ಸ್ಪರ್ಧೆಗೆ ವಿಶೇಷ ಕಳೆ ಬಂದಿದೆ.

ಮುಂಬೈ ಭಾಗದ ಎಲಿಮಿನಿಶೇನ್ ಸುತ್ತು ಈಗಾಗಲೇ ನಡೆದಿದ್ದು, ಪ್ರಾದೇಶಿಕವಾಗಿ ಎಲಿಮಿನೇಶನ್ ಸುತ್ತು ಅಕ್ಟೋಬರ್ 10ರಂದು ಕುರ್ಲಾದಲ್ಲಿರುವ ಬಂಟರ ಸಂಘದಲ್ಲಿ ನಡೆಯಲಿದೆ. ಇದರಲ್ಲಿ ನವೆಂಬರ್ 20ರಂದು ನಡೆಯುವ ಫೈನಲ್‌ಗೆ ಮುಂಬೈ ಭಾಗದ ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ