ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಮಲ ಕಲಹ: ಅತೃಪ್ತರಿಗೆ ತಲಾ 20 ಕೋಟಿ: ಸಿಎಂ ಆರೋಪ (BJP Government | Karnataka BJP | Yaddyurappa)
Bookmark and Share Feedback Print
 
ರಾಜ್ಯದ ಬಿಜೆಪಿ ಸರಕಾರಕ್ಕೆ ಎದುರಾಗಿರುವ ಕಂಟಕದ ಕುರಿತು ಬುಧವಾರ ಬೆಳಿಗ್ಗೆ ಸಚಿವ ಸಂಪುಟ ಸಭೆ ನಡೆಯುವ ಕೆಲವೇ ಕ್ಷಣಗಳ ಮೊದಲು ವಿಧಾನಸೌಧದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಎಲ್ಲ ಅತೃಪ್ತ ಶಾಸಕರಿಗೆ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ತಲಾ 20ರಿಂದ 30 ಕೋಟಿ ರೂಪಾಯಿ ಹಣವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನೀಡಿದೆ ಎಂದು ಆರೋಪಿಸಿದ್ದಾರೆ.

ಈ ಹಣವನ್ನು ನಿನ್ನೆ ಸಂಜೆಯೇ ಅತೃಪ್ತ ಶಾಸಕರ ಬಂಧುಗಳಿಗೆ ತಲುಪಿಸಲಾಗಿದೆ ಎಂದು ತಿಳಿಸಿದ ಅವರು, ಚುನಾಯಿತ ಸರಕಾರವನ್ನು ಉರುಳಿಸುವ ಕಾಂಗ್ರೆಸ್ ಮತ್ತು ಜೆಡಿಎಸ್ ಚಾಳಿ ಮುಂದುವರಿದಿದೆ ಎಂದರು. ಅವರು ಹಣ ಕೊಟ್ಟಿದ್ದು, ಅನಿವಾರ್ಯವಾಗಿ ಅವರೊಂದಿಗೆ ಹೋಗಬೇಕಾಯಿತು ಎಂದು ಈಗಾಗಲೇ ಅತೃಪ್ತರ ಬಣದಲ್ಲಿರುವ ಕೆಲವು ಶಾಸಕರು ತಮಗೆ ತಿಳಿಸಿರುವುದಾಗಿಯೂ ಮುಖ್ಯಮಂತ್ರಿ ಹೇಳಿದರು.

ಜನಾದೇಶವನ್ನು ರಕ್ಷಿಸುವ ಹಾಗೂ ಈ ಮೂಲಕ ರಾಜ್ಯದ ಹಿತ ದೃಷ್ಟಿಯಿಂದಾಗಿ ಆರೇಳು ಮಂದಿ ಹೊಸ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುತ್ತದೆ. ನಾಲ್ಕು ಸ್ವತಂತ್ರ ಸಚಿವರನ್ನು ಕೈಬಿಡಲು ಈಗಾಗಲೇ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಮೂವರು ಹಿರಿಯ ಸಚಿವರ ರಾಜೀನಾಮೆಗೆ ಈಗಾಗಲೇ ಕೇಳಿಕೊಂಡಿದ್ದೇನೆ. ಶೀಘ್ರದಲ್ಲೇ ಅವರ ಪ್ರಮಾಣವಚನ ಸ್ವೀಕಾರಕ್ಕೆ ಏರ್ಪಾಡು ಮಾಡುವುದಾಗಿ ಹೇಳಿದರು.

ಸಂಪುಟ ಸಭೆಯ ಬಳಿಕ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿ ಕರೆದು, ದೇವೇಗೌಡ ಮತ್ತವರ ಕುಟುಂಬದ ಅನೇಕ ಚಟುವಟಿಕೆಗಳ ಕುರಿತು ಬಹಿರಂಗಪಡಿಸುವುದಾಗಿಯೂ ಯಡಿಯೂರಪ್ಪ ತಿಳಿಸಿದರು.

ಪರಿಸ್ಥಿತಿ ಎದುರಾದರೆ, ಜನಾದೇಶದ ಪ್ರಕಾರ ನಾವು ಸದನದಲ್ಲಿ ಬಹುಮತ ಸಾಬೀತುಪಡಿಸಲು ಯಶಸ್ವಿಯಾಗುತ್ತೇವೆ ಎಂದೂ ಅವರು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ