ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತ್ತೆ ಆಪರೇಶನ್ ಕಮಲ: 10 ಪ್ರತಿಪಕ್ಷ ಶಾಸಕರಿಗೆ ಬಿಜೆಪಿ ಗಾಳ? (BJP Government | Karnataka BJP | Yaddyurappa)
Bookmark and Share Feedback Print
 
ಬಿಜೆಪಿ ಸರಕಾರವನ್ನು ಉಳಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದಾದ ಪಕ್ಷದಲ್ಲಿ ಮತ್ತೆ ಆಪರೇಶನ್ ಕಮಲ ನಡೆಯುವ ಸಾಧ್ಯತೆಯಿದ್ದು, ಕನಿಷ್ಠ 10 ಮಂದಿ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಗಾಳ ಹಾಕಲು ಬಿಜೆಪಿ ಯೋಚಿಸುತ್ತಿದೆ.

ಸರಕಾರವೇನಾದರೂ ಅಲ್ಪಮತಕ್ಕೆ ಕುಸಿದು, ಅನ್ಯ ಮಾರ್ಗವೇ ಇಲ್ಲವೆಂದಾದರೆ, ಕಾಂಗ್ರೆಸಿನ 10 ಶಾಸಕರು ಹಾಗೂ ಜೆಡಿಎಸ್‌ನ 2-3 ಶಾಸಕರನ್ನು ಸೆಳೆದುಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ.

ಕಮಲದ ಗಾಳಕ್ಕೆ ಬೀಳುವ ಈ ಸಂಭಾವ್ಯ ಶಾಸಕರಲ್ಲಿ ಕಾಂಗ್ರೆಸ್‌ನ ಕೆ.ಆರ್.ಪೇಟೆ ಶಾಸಕ ಕೆ.ಬಿ.ಚಂದ್ರಶೇಖರ್, ಗುರುಮಿಠ್ಕಲ್ ಶಾಸಕ ಬಾಬುರಾವ್ ಚಿಂಚನಸೂರ್, ಅರಕಲಗೂಡಿನ ಎ.ಮಂಜು, ಕುಣಿಗಲ್‌ನ ರಾಮಸ್ವಾಮಿ ಗೌಡ, ರಾಮದುರ್ಗದ ಪಿ.ಎಂ.ಅಶೋಕ್ ಹಾಗೂ ನಾಗಮಂಗಲದ ಸುರೇಶ್ ಗೌಡ ಹೆಸರುಗಳು ಕೇಳಿಬಂದರೆ, ಜೆಡಿಎಸ್‌ನಿಂದ ಮಂಡ್ಯದ ಶಾಸಕ ಶ್ರೀನಿವಾಸ್, ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರಮೇಶ್ ಬಾಬು ಹಾಗೂ ಹಳಿಯಾಳ ಶಾಸಕ ಸುನಿಲ್ ಹೆಗಡೆ ಹೆಸರುಗಳು ಕೇಳಿಬರುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ