ಬೆಂಗಳೂರು/ಚೆನ್ನೈ, ಬುಧವಾರ, 6 ಅಕ್ಟೋಬರ್ 2010( 15:48 IST )
ಸರಕಾರ ಉಳಿಸಿಕೊಳ್ಳಲು ಮತ್ತು ಉರುಳಿಸಲು ತಂತ್ರ ಪ್ರತಿ ತಂತ್ರಗಳು ಮುಂದುವರಿದಿರುವಂತೆಯೇ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಧಾನ ತಂತ್ರದ ಭಾಗವಾಗಿ, ಆರೋಗ್ಯ ಸಚಿವ ಶ್ರೀರಾಮುಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಭಿನ್ನಮತೀಯರ ಮನವೊಲಿಕೆಗೆ ತೆರಳಿದ್ದ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ನಿರ್ಧಾರ ಪ್ರಕಟಿಸಿದ ಅವರು, ಪಕ್ಷದ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಾಗಿ ಹೇಳಿದರು. ಇದರಿಂದ ಬಂಡುಕೋರ ಶಾಸಕರಿಗೆ ಸಚಿವ ಸ್ಥಾನ ಕೊಡಿಸುವ ಮುಖ್ಯಮಂತ್ರಿ ಪ್ರಯತ್ನಕ್ಕೆ ಬಲ ಬಂದಂತಾಗಿದೆ.
ಈ ನಡುವೆ, ಭಿನ್ನಮತೀಯರ ಮನವೊಲಿಸಲು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರು ಚೆನ್ನೈ ವಿಮಾನ ನಿಲ್ದಾಣಕ್ಕೆ ತಲುಪಿರುವುದಾಗಿ ವರದಿಯಾಗಿದೆ.
ಇದಕ್ಕೆ ಮೊದಲು, ಮುಖ್ಯಮಂತ್ರಿ ಯಡಿಯೂರಪ್ಪ ಬೆಳಿಗ್ಗೆ ಘೋಷಿಸಿದಂತೆ, ಭಿನ್ನಮತೀಯ ಶಾಸಕರಿಗೆ ಮಂತ್ರಿಪಟ್ಟ ಕೊಡಲು ಅನುಕೂಲವಾಗುವ ನಿಟ್ಟಿನಲ್ಲಿ ಹಿರಿಯ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರೇವೂ ನಾಯಕ್ ಬೆಳಮಗಿ ಹಾಗೂ ಎಸ್.ಎ.ರವೀಂದ್ರನಾಥ್ ಅವರು ಸಚಿವ ಸ್ಥಾನ ತ್ಯಾಗ ಮಾಡಲು ಮುಂದಾಗಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.