ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಸರಕಾರ ಉರುಳಿದ್ರೆ ಅಚ್ಚರಿ ಪಡಬೇಕಾಗಿಲ್ಲ: ಪಾಟೀಲ್ (BJP | JDS | Congress | Allama prabhu | Yeddyurappa)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬಿದ್ದರೆ ಅಚ್ಚರಿ ಪಡಬೇಕಾಗಿಲ್ಲವೆಂದು ಗುಲ್ಬರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿರುವ ಶಾಸಕ ಅಲ್ಲಮಪ್ರಭು ಪಾಟೀಲ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಈಗಾಗಲೇ 20 ಶಾಸಕರು ತಮ್ಮ ಬೆಂಬಲ ವಾಪಸ್ ಪಡೆದಿರುವುದಾಗಿ ರಾಜ್ಯಪಾಲರಿಗೆ ಪತ್ರ ರವಾನಿಸಿದ್ದಾರೆ. ಸರಕಾರ ಪತನಕ್ಕೆ ಇದು ಕಾರಣವಾಗಿಲಿದೆ ಎಂದು ತಿಳಿಸಿದರು.

ರಾಜಕೀಯದಲ್ಲಿನ ಸ್ಥಿತಿ ಇಷ್ಟು ಕೆಟ್ಟದಾಗಲು ಬಿಜೆಪಿ ಸರಕಾರವೇ ಕಾರಣ. ಆಪರೇಷನ್ ಕಮಲ ನಡೆಸುವ ಮೂಲಕ ಅನ್ಯ ಪಕ್ಷಗಳವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಂಡರು. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಈಗಲೂ ಅಂಥದೊಂದು ಪ್ರಯತ್ನ ಮುಂದುವರಿಸಿದ್ದಾರೆ. ಹೀಗಿರುವಾಗ ಇವರ ಸರಕಾರ ಉಳಿಯುವುದಾದರೂ ಹೇಗೆ ಎಂದು ಅಲ್ಲಮಪ್ರಭು ಪ್ರಶ್ನಿಸಿದರು.

ಇವರ ಪಾಪದ ಕೊಡ ತುಂಬಿದೆ. ಬಿಜೆಪಿ ಸರಕಾರ ಪತನವಾದರೆ ಅದಕ್ಕೆ ಯಾರೂ ಹೊಣೆಯಲ್ಲ. ಅದಕ್ಕೆ ಯಡಿಯೂರಪ್ಪ ಮತ್ತು ಅವರ ಕೂಟವೇ ಹೊಣೆ ಎಂದರು. ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಭಿನ್ನಮತ ಆ ಪಕ್ಷದ ಆಂತರಿಕ ವಿಷಯವಾದರೂ, ಇವರ ಈ ಕಚ್ಚಾಟದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ