ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅನೈತಿಕ ಸಂಬಂಧ-ಗಂಡನ ಎದುರೇ ಪ್ರಿಯಕರನ ಹತ್ಯೆ! (Bangalore | Muttukaman | kills lover | Vijayalaxmi | Shrinivas)
Bookmark and Share Feedback Print
 
ತನ್ನ ಗುಟ್ಟು ರಟ್ಟಾಗುತ್ತದೆ ಎಂಬ ಭಯದಲ್ಲಿ 27ರ ಮಹಿಳೆಯೊಬ್ಬಳು ತನ್ನ ಗಂಡನ ಎದುರಲ್ಲೇ ಪ್ರಿಯಕರನನ್ನು ಪೆಟ್ಟಿಕೋಟ್‌ನಿಂದಲೇ ಕೊಲೆಗೈದಿರುವ ಘಟನೆ ನಗರದಲ್ಲಿ ನಡೆದಿದ್ದು, ಶವವನ್ನು ಕೆಲವು ಗಂಟೆಗಳ ಕಾಲ ಮನೆಯಲ್ಲಿಟ್ಟುಕೊಂಡು ನಂತರ ಮತ್ತೊಂದು ಪ್ರದೇಶದಲ್ಲಿ ಎಸೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ವಿಜಯಲಕ್ಷ್ಮಿ.ಎಸ್.ಎಂಬಾಕೆ ಮುತ್ತುಕಾಮನ್ ಅಲಿಯಾಸ್ ಬಾಂಡ್ ಎಂಬಾತನ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಮುತ್ತುಕಾಮನ್ ಮೈಸೂರು ನಿವಾಸಿಯಾಗಿದ್ದು, ಆತ ಬೆಂಗಳೂರಿನ ನಗರ ರೈಲ್ವೆ ನಿಲ್ದಾಣ ಮತ್ತು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ.

ಸುಮಾರು ಎರಡು ವರ್ಷಗಳ ಹಿಂದೆ ವಿಜಯಲಕ್ಷ್ಮಿ ಗಂಡ, ಆಟೋ ರಿಕ್ಷಾ ಚಾಲಕ ಶ್ರೀನಿವಾಸನ ಜತೆ ಮುತ್ತುಕಾಮನ್ ಸ್ನೇಹ ಬೆಳೆದಿತ್ತು. ಈ ಸ್ನೇಹದ ನಂತರ ಅವರಿಬ್ಬರು ಒಟ್ಟಿಗೆ ಗುಂಡು ಪಾರ್ಟಿಗೂ ಹೋಗುತ್ತಿದ್ದರು. ಅಲ್ಲದೆ ಆತನನ್ನು ಶ್ರೀನಿವಾಸ್ ಊಟೋಪಚಾರಕ್ಕೆ ಮನೆಗೂ ಕರೆತರಲಾರಂಭಿಸಿದ್ದ. ಹೀಗೆ ಮನೆಗೆ ಬರಲು ಆರಂಭಿಸಿದ ಮುತ್ತುಕಾಮನ್‌ಗೆ ಶ್ರೀನಿವಾಸನ ಪತ್ನಿ ವಿಜಯಲಕ್ಷ್ಮಿ ಜತೆ ಸ್ನೇಹ ಬೆಳೆದಿತ್ತು.

ತದನಂತರ ಶ್ರೀನಿವಾಸ್ ಮನೆಯಿಂದ ಹೊರಹೋದ ನಂತರ ಮುತ್ತುಕಾಮನ್ ಮನೆಗೆ ಬರಲು ಆರಂಭಿಸಿದ್ದ. ಇದರಿಂದಾಗಿ ವಿಜಯಲಕ್ಷ್ಮಿ ಮತ್ತು ಮುತ್ತುಕಾಮನ್ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು.

ಸೆಪ್ಟೆಂಬರ್ 14ರಂದು ಶ್ರೀನಿವಾಸ್, ಮುತ್ತುಕಾಮನ್‌ನನ್ನು ಮನೆಗೆ ಆಹ್ವಾನಿಸಿದ್ದ. ಮನೆಯಲ್ಲಿ ಇಬ್ಬರೂ ಮದ್ಯಪಾನ ಮಾಡಿದ್ದರು. ನಂತರ ಮುತ್ತುಕಾಮನ್‌ಗೆ ವಿಶ್ರಾಂತಿ ಮನೆಯಲ್ಲೇ ವಿಶ್ರಾಂತಿ ಪಡೆಯಲು ಹೇಳಿದ್ದ. ಸ್ವಲ್ಪ ಸಮಯದ ನಂತರ ಮುತ್ತುಕಾಮನ್ ನಿಧಾನಕ್ಕೆ ವಿಜಯಲಕ್ಷ್ಮಿ ಹಾಸಿಗೆಯತ್ತ ತೆರಳಿದ್ದ. ಆಗ ವಿಜಯಲಕ್ಷ್ಮಿ ಮನೆಯಲ್ಲಿ ಗಂಡ ಇರುವುದರಿಂದ ಲೈಂಗಿಕ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಳು.

ಆದರೆ ನಶೆಯಲ್ಲಿದ್ದ ಮುತ್ತುಕಾಮನ್ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸತೊಡಗಿದಾಗ ಇಬ್ಬರ ನಡುವೆಯೂ ಜಗಳ ಶುರುವಾಗಿತ್ತು. ಏರುಧ್ವನಿಯಲ್ಲಿನ ಗಲಾಟೆಯಿಂದಾಗಿ ಶ್ರೀನಿವಾಸ್ ನಿದ್ದೆಯಿಂದ ಎದ್ದು ಬಂದಾಗ, ಗಾಬರಿಗೊಂಡ ಹೆಂಡತಿ ತನ್ನ ಅನೈತಿಕ ಸಂಬಂಧ ಬಯಲಾಗುತ್ತದೆ ಎಂಬ ಭಯದಲ್ಲಿ ಪಕ್ಕದಲ್ಲೇ ಇದ್ದ ಪೆಟ್ಟಿಕೋಟ್‌ನಿಂದಲೇ ಆತನ ಕುತ್ತಿಗೆಯನ್ನು ಬಿಗಿದು ಹತ್ಯೆಗೈದಿದ್ದಳು.

ನಂತರ ನಾಲ್ಕು ಗಂಟೆಗೆ ಶವವನ್ನು ರಿಕ್ಷಾದಲ್ಲಿ ಹಾಕಿಕೊಂಡು ಸಮೀಪದ ಎಸ್‌ವಿಜೆ ನಗರದ ಕಾವೇರಿ ಅಪಾರ್ಟ್‌ಮೆಂಟ್ಸ್ ಹತ್ತಿರ ಎಸೆದು ಬಂದಿದ್ದರು. ಆದರೆ ಘಟನೆ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಗದೆ, ಕೊಲೆಯ ಕಾರಣ ಪತ್ತೆ ಹಚ್ಚಲು ತಲೆಕೆಡಿಸಿಕೊಳ್ಳುವಂತಾಗಿತ್ತು. ನಂತರ ಆತನ ಆತನ ಭಾವಚಿತ್ರವನ್ನು ಜನನಿಭಿಡ ಪ್ರದೇಶದಲ್ಲಿ ಅಂಟಿಸಿ ಮಾಹಿತಿ ನೀಡುವಂತೆ ಇಲಾಖೆ ಸೂಚಿಸಿತ್ತು. ಮುತ್ತುಕಾಮನ್ ಪರಿಚಿತ ಕೆಲಸಗಾರನೊಬ್ಬ ಶ್ರೀನಿವಾಸ್ ಜತೆಗಿನ ಸ್ನೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಕೊನೆಗೆ ಪೊಲೀಸರು ದಂಪತಿಗಳಿಬ್ಬರನ್ನು ಬಂಧಿಸಿದಾಗ ಕೊಲೆ ವಿವರ ಬಹಿರಂಗಗೊಂಡಿತ್ತು ಎಂದು ಹಿರಿಯ ವಿಜಯ ಠಾಣೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ