ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೇಣುಕಾಚಾರ್ಯ, ಶಂಕರಲಿಂಗೇಗೌಡ ವಿರುದ್ಧ ಪ್ರತಿಭಟನೆ (Renukacharya | BJP | Congress | RSS | Yeddyurappa | Nagaraj)
Bookmark and Share Feedback Print
 
ರಾಜಕಾರಣಿಗಳ ಅಧಿಕಾರದ ಹಪಾಹಪಿ, ಅಪೇಕ್ಷೆ, ಬ್ಲ್ಯಾಕ್‌ಮೇಲ್ ರಾಜಕಾರಣದಿಂದ ರೋಸಿಹೋಗಿರುವ ಮತದಾರರು, ಬಿಜೆಪಿ ಕಾರ್ಯಕರ್ತರು ಗುರುವಾರ ಹೊನ್ನಾಳಿಯಲ್ಲಿ ಸಚಿವ ರೇಣುಕಾಚಾರ್ಯ ಅವರ ಮನೆ ಮುಂದೆ ತೀವ್ರ ಪ್ರತಿಭಟನೆ ನಡೆಸಿ, ಕೂಡಲೇ ಸ್ವಕ್ಷೇತ್ರಕ್ಕೆ ಮರಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬೆಂಬಲ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಬಿಜೆಪಿ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಆರ್ಎಸ್ಎಸ್ ನಾಯಕರ ಬೆಂಬಲದೊಂದಿಗೆ ರೇಣುಕಾಚಾರ್ಯ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಈ ಕ್ಷೇತ್ರದ ಮತದಾರರು ರೇಣುಕಾಚಾರ್ಯ ಅವರನ್ನು ಎರಡು ಬಾರಿ ಆರಿಸಿದ್ದಾರೆ. ಶಾಸಕರಾಗಿದ್ದ ಹೊನ್ನಾಳಿಗೆ ಸರಕಾರದಲ್ಲಿ ಸಚಿವ ಸ್ಥಾನವನ್ನೂ ನೀಡಲಾಗಿದೆ. ಎಲ್ಲಾ ರೀತಿಯ ಅಧಿಕಾರ, ಸ್ಥಾನಮಾನ ಕಲ್ಪಿಸಿಕೊಟ್ಟ ನಂತರವೂ ಈ ರೀತಿ ತಂತ್ರಗಾರಿಕೆ ನಡೆಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಬಿಜೆಪಿ ಕಾರ್ಯಕರ್ತರು ಸಲಹೆ ನೀಡಿದ್ದಾರೆ.

ಆ ನಿಟ್ಟಿನಲ್ಲಿ ರೇಣುಕಾಚಾರ್ಯ ಕೂಡಲೇ ಸ್ವಕ್ಷೇತ್ರಕ್ಕೆ ವಾಪಸ್ ಬಂದು, ತನ್ನ ನಿಷ್ಠೆಯನ್ನು ಮುಖ್ಯಮಂತ್ರಿಗಳಿಗೆ ವ್ಯಕ್ತಪಡಿಸಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಶಾಸಕ ನಾಗರಾಜ್ ವಿರುದ್ಧವೂ ಪ್ರತಿಭಟನೆ: ಸರಕಾರದ ವಿರುದ್ಧ ಬಂಡೆದ್ದು ಬೆಂಬಲವನ್ನು ರಾಜೀನಾಮೆ ವಾಪಸ್ ಪಡೆದಿರುವ ನೆಲಮಂಗಲ ಶಾಸಕ ನಾಗರಾಜ್ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ನೆಲಮಂಗಲ ಸುಭಾಷ್ ನಗರದಲ್ಲಿರುವ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಭಿನ್ನಮತೀಯ ಗುಂಪಿನಲ್ಲಿ ಗುರುತಿಸಿಕೊಂಡಿರುವ ಶಾಸಕ ನಾಗರಾಜ್ ಕೂಡಲೇ ಸ್ವಕ್ಷೇತ್ರಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶಂಕರಲಿಂಗೇಗೌಡ ಮನೆ ಮುಂದೆ ಪ್ರತಿಭಟನೆ: ಹಿರಿಯ ಶಾಸಕರಾಗಿರುವ ಶಂಕರಲಿಂಗೇಗೌಡ ಬಿಜೆಪಿ ತೊರೆಯಬಾರದು ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಗುರುವಾರ ಗೌಡರ ಪತ್ನಿ ಮತ್ತು ಪುತ್ರನ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯರಾದ ಶಂಕರಲಿಂಗೇಗೌಡರು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸಕ್ಕೆ ಕೈಹಾಕಬಾರದು ಎಂದು ಈ ಸಂದರ್ಭದಲ್ಲಿ ಕಾರ್ಯಕರ್ತರು ವಿನಂತಿ ಮಾಡಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ