ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭಾವೈಕ್ಯ ಮೂಡಿಸುವ ಜವಾಬ್ದಾರಿ ಯುವಕರ ಮೇಲಿದೆ: ಜಿಗಜಿಣಗಿ (Gigaginagi | BJP | Karnataka | Congress | Yeddyurappa)
Bookmark and Share Feedback Print
 
ರಾಷ್ಟ್ರೀಯ ಭಾವೈಕ್ಯ ಮನೋಭಾವ ಇಲ್ಲದ ಮನುಷ್ಯ ಸಮಾಜದಲ್ಲಿ ಬಾಳಲು ಅನರ್ಹ. ಜನಸಾಮಾನ್ಯರಲ್ಲೂ ಈ ಮನೋಭಾವನೆ ಮೂಡಿಸುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಅಭಿಪ್ರಾಯಪಟ್ಟರು.

ನೆಹರು ಯುವ ಕೇಂದ್ರ, ಜಿಲ್ಲಾಡಳಿತ ಹಾಗೂ ಜಿಪಂ ಸಹಯೋಗದಲ್ಲಿ ಇಲ್ಲಿನ ಕಂದಗಲ್ ಹನಮಂತರಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ 7ದಿನಗಳ ರಾಷ್ಟ್ರೀಯ ಭಾವೈಕ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಭಿನ್ನ ಸಂಸ್ಕೃತಿ, ಭಾಷೆ ಹಾಗೂ ಪ್ರಾದೇಶಿಕ ವೈವಿಧ್ಯತೆ ಇದ್ದರೂ ಭಾರತದಲ್ಲಿ ಏಕತೆ ಇದೆ. ಇಲ್ಲಿನ ಸಹಬಾಳ್ವೆ, ಸಮನ್ವಯ, ಭಾವೈಕ್ಯ ಜಗತ್ತಿಗೆ ಮಾದರಿಯಾಗಿದೆ. ವೈವಿಧ್ಯತೆಯಲ್ಲಿ ಏಕತೆಯ ಸಂಸ್ಕೃತಿ, ಸಹಬಾಳ್ವೆಯನ್ನು ಮುಂದುವರಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಒಟ್ಟಾರೆ ದೇಶದ ಭಾವೈಕ್ಯತೆ ದೃಷ್ಟಿಯಿಂದ ಯುವಕರು ಒಂದಾಗಬೇಕು. ತಮ್ಮ ಶಕ್ತಿ ಪ್ರದರ್ಶಿಸಬೇಕು. ಇವರು ಮನಸ್ಸು ಮಡಿದರೆ ಎಲ್ಲವೂ ಸಾಧ್ಯ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ