ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆನಂದ್ ಅಸ್ನೋಟಿಕರ್ ನಂಬಿಕೆ ದ್ರೋಹ ಮಾಡಿದ್ದಾರೆ: ಹೆಗಡೆ (Anand asnoticar | Ananth kumar hegade | Congress | BJP)
Bookmark and Share Feedback Print
 
ಭಾರತೀಯ ಜನತಾ ಪಾರ್ಟಿ ಆನಂದ್ ಅಸ್ನೋಟಿಕರ್ ಅವರ ಮೇಲೆ ಸಾಕಷ್ಟು ಭರವಸೆ ಇರಿಸಿತ್ತು. ಅದರೆ ಈಗ ಆನಂದ್ ನಂಬಿಕೆ ದ್ರೋಹ ಮಾಡಿದ್ದಾರೆ. ಕಾರವಾರ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉತ್ತರ ಕನ್ನಡ ಸಂಸದ ಅನಂತ ಕುಮಾರ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಕಾಂಗ್ರೆಸ್ಸಿಗರಾದ ಆನಂದ್ ಅಸ್ನೋಟಿಕರ್ ಅವರನ್ನು ಬಿಜೆಪಿ ನಂಬಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ಸಚಿವರನ್ನಾಗಿ ಮಾಡಿತು. ಆದರೂ ಆನಂದ್ ಅಸ್ನೋಟಿಕರ್ ಅಭಿವೃದ್ಧಿ ಪರ ಇರುವ ನಮ್ಮ ಸರಕಾರದ ವಿರುದ್ಧ ಕೆಲಸ ಮಾಡಿರುವುದು ಸಹಿಸಲು ಅಸಾಧ್ಯ ಎಂದರು.

ಕಾರವಾರದ ಜನತೆ ಕಾಂಗ್ರೆಸ್‌ನಿಂದ ಗೆಲ್ಲಿಸಿದರು. ನಂತರದಲ್ಲಿ ಆನಂದ್ ಅಸ್ನೋಟಿಕರ್ ಅಭಿವೃದ್ಧಿ ಹೆಸರು ಹೇಳಿಕೊಂಡು ಬಿಜೆಪಿ ಚಿನ್ಹೆ ಉಪಯೋಗಿಸಿಕೊಂಡು ಗೆದ್ದಿದ್ದಾರೆ. ಹೀಗಿರುವಾಗ ಈಗ ಸರಕಾರಕ್ಕೆ ಮೋಸ ಮಾಡಲು ಹೊರಟಿದ್ದಾರೆ. ಆನಂದ್‌ಗೆ ನೈತಿಕತೆ ಇದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಹೋಗಲಿ ಎಂದು ಸವಾಲು ಹಾಕಿದರು.

ಇನ್ನೂ ಕಾಲ ಮಿಂಚಿಲ್ಲ. ಬಿಜೆಪಿ ಕಾಲಾವಕಾಶ ನೀಡುತ್ತದೆ. ಸರಕಾರದ ಜತೆ ಸೇರಿ ಸರಕಾರದ ಬಲವರ್ಧನೆಗೆ ಸಹಕಾರ ನೀಡಿ ಎಂದು ಆನಂದ್ ಅಸ್ನೋಟಿಕರ್‌ಗೆ ಕಿವಿಮಾತು ಹೇಳಿದರು.

ಭಟ್ಕಳದಲ್ಲಿ ಗೋರಕ್ಷಣೆಗಾಗಿ ಪೊಲೀಸ್ ತನ್ನ ಜೀವವನ್ನೇ ಬಲಿದಾನ ಮಾಡಿದ್ದಾರೆ. ಈ ಘಟನೆ ತುಂಬಾ ವಿಷಾದನೀಯ. ಹಾಡಹಗಲೇ ಪೊಲೀಸರನ್ನೇ ಕೊಲೆಗೈಯುವ ಮಟ್ಟಿಗೆ ಪರಿಸ್ಥಿತಿ ಬಂದಿದೆ. ಪೊಲೀಸ್ ಪೇದೆಯ ಸಾವು ತುಂಬಾ ದುಃಖಕರ. ಘಟನೆ ಖಂಡನೀಯ. ಸರಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. 1993ರಲ್ಲಿ ಪೊಲೀಸ್ ಪೇದೆ ಗಣಪತಿ ನಾಯ್ಕ ಎಂಬುವವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಇದೇ ರೀತಿ ಮುಂದುವರಿದರೆ ಕೋಮು ಗಲಭೆ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ