ಮಂತ್ರಿಯಾಗಲಿಲ್ಲವೆಂಬ ಕಾರಣಕ್ಕೆ ಜನಸೇವೆ ಮರೆತು ಸರಕಾರ ಅಸ್ಥಿರಗೊಳಿಸುವ ಭಿನ್ನಮತೀಯರು ಯಾರೇ ಇರಲಿ ಅವರನ್ನು ಕ್ಷೇತ್ರದ ಕಾರ್ಯಕರ್ತರು ಅಟ್ಟಾಡಿಸಿಕೊಂಡು ಹೊಡೆಯಬೇಕು ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಅಭಿಪ್ರಾಯವ್ಯಕ್ತಪಡಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರಾದ ಮೇಲೆ ತಮ್ಮನ್ನೆಲ್ಲಾ ಮಂತ್ರಿ ಮಾಡಲು ಸಾಧ್ಯವಿಲ್ಲವೆಂಬ ಸಾಮಾನ್ಯ ಜ್ಞಾನವೂ ಇಲ್ಲದಿರುವವರು ಹಾಗೂ ಶಾಸಕರನ್ನು, ಮಂತ್ರಿಗಳನ್ನು ವಿಶ್ವಾಸದಲ್ಲಿಟ್ಟುಕೊಂಡು ಕೆಲಸ ಮಾಡದೇ ಕೇವಲ ಹಗರಣಗಳಲ್ಲಿ ಕಾಲ ನೂಕುತ್ತಿರುವ ಯಡಿಯೂರಪ್ಪನಂತಹ ದುರ್ಬಲ ಮುಖ್ಯಮಂತ್ರಿಯಿಂದಾಗಿ ಸರಕಾರ ಬಹುಮತ ಕಳೆದುಕೊಂಡಿದೆ. ಇದರಿಂದ ಆಡಳಿತ ಯಂತ್ರ ಕುಸಿಯುತ್ತಿದೆಯಲ್ಲದೇ ಜನರೇ ನಾಚಿಕೆಪಡುವ ರೀತಿಯಲ್ಲಿ ರಾಜಕೀಯ ಮಾಡುತ್ತಿರುವುದು ನಾಡಿನ ದುರಂತ ಎಂದರು.
ಬಿಜೆಪಿ ಸರಕಾರ ತನ್ನಿಂದ ತಾನೇ ಕುಸಿಯಲಿದೆ ಎಂದ ಅವರು, ಕಾಂಗ್ರೆಸ್‌ಗೆ ಪರಿಸ್ಥಿತಿಯ ಲಾಭ ಪಡೆಯುವ ಇಚ್ಛೆ ಇಲ್ಲ. ಅ.11ರಂದು ಬಹುಮತ ಸಾಬೀತುಪಡಿಸದೇ ಹೋದಲ್ಲಿ ಸರಕಾರ ರಚನೆಗೆ ಪಕ್ಷ ಮುಂದಾಗಲಿದೆ ಎಂದು ತಿಳಿಸಿದರು.