ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದಿಕ್ಕು ತಪ್ಪಿಸಿದ್ದೇ ರೇಣುಕ, ಅವ್ರನ್ನು ನಂಬಬೇಡಿ: ಅತೃಪ್ತರು (Renukacharya | JDS | BJP Government | BJP Dissidence | Karnataka Government)
Bookmark and Share Feedback Print
 
ರಾಜ್ಯದ ರಾಜಕೀಯ ನಾಟಕ ಮತ್ತೊಂದು ತಿರುವುದು ಪಡೆದಿದ್ದು, ಅತೃಪ್ತರ ಗಡಣವು ಗೋವಾದಲ್ಲಿ ಜೆಡಿಎಸ್ ಸಂಸದ ಚೆಲುವರಾಯಸ್ವಾಮಿ ಹಾಗೂ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಜೊತೆಗೆ ಕೋಲ್ಕತ್ತಾಗೆ ಹಾರಲು ಸಿದ್ಧವಾಗಿರುವಂತೆಯೇ, ಈಗ ಏಕಾಂಗಿಯಾಗಿರುವ ರೇಣುಕಾಚಾರ್ಯರನ್ನು ಯಾರೂ ನಂಬುವಂತಿಲ್ಲ, ಅವರೇ ಸರಕಾರದ ಇಂದಿನ ಸ್ಥಿತಿಗೆ ಕಾರಣ ಎಂದು ಕಿಡಿ ಕಾರಿದ್ದಾರೆ.

ಮುಂದಿನ ಕ್ರಮದ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ತೀರ್ಮಾನ ಕೈಗೊಳ್ಳಲಿದ್ದೇವೆ. ನಮ್ಮನ್ನು ಯಾರೂ ಬಲವಂತವಾಗಿ ಕರೆದುಕೊಂಡು ಬಂದಿಲ್ಲ ಎಂದು ಅವರೆಲ್ಲರೂ ಟಿವಿ ವಾಹಿನಿಗಳ ಜತೆಗೆ ದೂರವಾಣಿ ಮೂಲಕ ಮಾತನಾಡುತ್ತಾ ಹೇಳಿದ್ದಾರೆ. ಅವರ ಹೇಳಿಕೆಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ.

ಬೇಳೂರು ಏನು ಹೇಳಿದ್ರು...
ರೇಣುಕಾಚಾರ್ಯ ತಮಗೆ ಮನೆಯಲ್ಲಿ ಸಮಸ್ಯೆಯಿದೆ ಹೋಗಬೇಕೂಂತ ಹೇಳಿದ್ರು, ನಾವು ಕಳಿಸಿಕೊಟ್ಟೆವು ಎಂದವರು ರೇಣುಕಾಚಾರ್ಯರೊಂದಿಗೆ ಬಂಡಾಯದ ಅವಳಿ-ಜವಳಿಗಳೆಂದು ಗುರುತಿಸಲ್ಪಟ್ಟವರಲ್ಲೊಬ್ಬರಾದ, ಸಚಿವಪಟ್ಟದ ಆಕಾಂಕ್ಷಿ ಬೇಳೂರು ಗೋಪಾಲಕೃಷ್ಣ.

ನಾವೆಲ್ಲ ಒಟ್ಟು 19 ಮಂದಿ ಶಾಸಕರಿದ್ದೇವೆ. 4 ಮಂದಿ (ಬೆಳ್ಳುಬ್ಬಿ, ಶಿವನಗೌಡ ನಾಯಕ, ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹಾಗೂ ಶಂಕರಲಿಂಗೇಗೌಡ) ಈಗಾಗಲೇ ಬಂದಿದ್ದಾರೆ.

ಜನಾರ್ದನ ರೆಡ್ಡಿ ಸಂಧಾನಕ್ಕೆ ಬಂದ್ರು, ನಾವು ಒಪ್ಪಿಕೊಳ್ಳಲಿಲ್ಲ. ಅವರೊಂದಿಗೆ ಮಾತುಕತೆ ಮುಗಿದಿದೆ. ಎಲ್ಲರೂ ಒಟ್ಟು ಸೇರಿ ಮುಂದೇನು ಮಾಡಬೇಕು ಅಂತ ತೀರ್ಮಾನಿಸುತ್ತೇವೆ ಎಂದಿದ್ದಾರೆ ಅವರು.

ಸಿಎಂ ರೇಣುಕರನ್ನು ವಜಾ ಮಾಡದಿದ್ದಾಗಲೇ ಅನುಮಾನ ಬಂದಿತ್ತು ಎಂದ ಕಾಶಂಪೂರ್...
ನಾಲ್ಕು ಮಂದಿ ಸಚಿವರನ್ನು ವಜಾ ಮಾಡಿ, ರೇಣುಕಾಚಾರ್ಯರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪುಟದಿಂದ ವಜಾ ಮಾಡದೆ ಬಿಟ್ಟಾಗ್ಲೇ ನಮಗೆ ಶಂಕೆ ಬಂದಿತ್ತು. ಅವರು ಸಿಎಂ ಜತೆಗೆ ಇನ್ನೂ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂಬ ಸಂದೇಹ ನಮಗಿತ್ತು. ಈಗ ಅದನ್ನು ಮಾಡಿತೋರಿಸಿದ್ದಾರೆ ಎಂದು ಶಾಸಕ ಬಂಡೆಪ್ಪ ಕಾಶಂಪೂರ್ ಹೇಳಿದ್ದಾರೆ.

ಶಾಸಕ ನಾಗರಾಜ್ ಅವರು ಕೂಡ ಮಾತನಾಡಿ, ಈಗಾಗಲೇ ಶಂಕರಲಿಂಗೇಗೌಡ, ಬೆಳ್ಳುಬ್ಬಿ, ಶಿವನಗೌಡ ನಾಯಕ್, ಮಾನಪ್ಪ ವಜ್ಜಲ್ ನಮ್ಮ ಜತೆಗೆ ಬಂದಿದ್ದಾರೆ ಎಂದರು.

ಇದಕ್ಕೆಲ್ಲಾ ಕಾರಣ ರೇಣುಕಾಚಾರ್ಯ ಎಂದ ಸಂಪಂಗಿ
ಶಾಸಕ ವೈ. ಸಂಪಂಗಿ ಮಾತನಾಡಿ, ರೇಣುಕಾಚಾರ್ಯರೇ ಗುಂಪುಗಾರಿಕೆ ಮಾಡಿ ನಮ್ಮನ್ನು ಇಂದು ಬೀದಿಗೆ ತಂದವರು. ಇಂದಿನ ಸ್ಥಿತಿಗೆ ಮತ್ತು ಮುಖ್ಯಮಂತ್ರಿ ವಿರುದ್ಧ ಈ ರೀತಿ ಮಾಡೋಣ ಅಂತೆಲ್ಲಾ ಸಂಚು ಆರಂಭಿಸಿದ್ದೇ ರೇಣುಕಾಚಾರ್ಯ. ನಾಲ್ಕೈದು ದಿನದ ಎಲ್ಲ ಬೆಳವಣಿಗೆಗಗಳಿಗೆ ಕಾರಣವೇ ಅವರು ಎಂದು ದೂರಿದರು.

ಅದೇ ರೀತಿ ಸರಿಯಾಗಿಯೇ ಇದ್ದ ನಮ್ಮನ್ನು ಬಂಡುಕೋರರೆಂದು ಎಲ್ಲರೂ ಗುರುತಿಸುವಂತೆ ಮಾಧ್ಯಮಗಳ ಮುಂದೆಲ್ಲಾ ಬಿಂಬಿಸಿದ್ದೇ ರೇಣುಕಾಚಾರ್ಯ ಎಂದು ಕಿಡಿ ಕಾರಿದ ಅವರು, ಸರಕಾರ ಬೆಂಬಲಿಸುವುದೇ ಇಲ್ಲವೇ ಎಂಬುದು ಇನ್ನೂ ತೀರ್ಮಾನವಾಗಿಲ್ಲ, ಎಲ್ಲರೂ ಒಟ್ಟು ಸೇರಿ ತೀರ್ಮಾನಿಸುತ್ತೇವೆ ಎಂದಿದ್ದಾರೆ.

ರೇಣುಕ ಮೋಸ ಮಾಡಿದ್ದು ಎಂದ ಸುಧಾಕರ್
ರೇಣುಕಾಚಾರ್ಯ ಕುರಿತು ಮಾತನಾಡಿದ ಶಾಸಕ ಡಿ. ಸುಧಾಕರ್, ನಾವ್ಯಾರೂ ಅವರನ್ನು ಕೈಬಿಟ್ಟಿಲ್ಲ, ಅವರೇ ನಮಗೆ ಮೋಸ ಮಾಡಿ ಹೋದ್ರು, ನಮ್ಮನ್ನೆಲ್ಲಾ ಕರೆದುಕೊಂಡು ಬಂದದ್ದು ಅವರು. ಈಗ ಕಪಟ ನಾಟಕ ಆಡ್ತಿದ್ದಾರೆ. ಈ ರಾಜ್ಯ ಇಷ್ಟು ವರ್ಷದಿಂದ ಅವರ ರಾಜಕೀಯವನ್ನು ನೋಡುತ್ತಾ ಬಂದಿದೆ. ಅವರ ಆಟವನ್ನು ಜನ ನಂಬೋದಿಲ್ಲ. ಈಗ ಮೊಸಳೆ ಕಣ್ಣೀರು ಸುರಿಸ್ತಾ ಇದ್ದಾರೆ ಎಂದರು.

ನಾವೆಲ್ಲರೂ ಸ್ವಇಚ್ಛೆಯಿಂದ ಬಂದಿದ್ದೇವೆ, ಯಾರೂ ಬಲವಂತವಿಲ್ಲ. ಗೂಂಡಾಗಿರಿಯನ್ನೂ ಯಾರೂ ಮಾಡಿಲ್ಲ ಎಂದವರು ಶಾಸಕ ಗೂಳಿಹಟ್ಟಿ ಶೇಖರ್.

ಚುನಾವಣೆಗೆ ಹೆದರಲ್ಲ - ಕೊಳ್ಳೇಗಾಲ ಶಾಸಕ ನಂಜುಂಡಸ್ವಾಮಿ
"ನಮ್ಮ ಊರಿನ ಅಭಿವೃದ್ಧಿಯಾಗಿಲ್ಲ. ಶಾಸಕನಾಗಿದ್ದೆನೇ ಹೊರತು ಬೇರಾವುದೇ ಸ್ವಾತಂತ್ರ್ಯ ಇರಲಿಲ್ಲ. ಏನೇ ಕೇಳಿದ್ರೂ ಬೇರೆಯವರನ್ನು (ಕೃಷ್ಣಮೂರ್ತಿ) ಕೇಳಿಕೊಂಡು ಕೆಲಸ ಮಾಡಬೇಕಾದ ಪ್ರಸಂಗ ಬಂದಿತ್ತು. ಇದರಿಂದ ರೋಸಿಹೋಗಿದ್ದೇನೆ" ಎಂದು ನಂಜುಂಡಸ್ವಾಮಿ ಅಸಮಾಧಾನ ತೋರ್ಪಡಿಸಿದರು.

ಮಾತು ಮುಂದುವರಿಸಿದ ಅವರು, ನಾವೇ ರಾಜೀನಾಮೆ ಕೊಡಲು ಸಿದ್ಧರಾಗಿರುವಾಗ ಅನರ್ಹತೆಗೊಳ್ಳುವ ಭೀತಿ ಇಲ್ಲ. ಚುನಾವಣೆಗೂ ಹೆದರೋದಿಲ್ಲ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ