ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೈವಾಡವಿಲ್ಲವೆಂಬೋ ಕುಮಾರ ಗೋವಾಕ್ಕೆ ಹೋಗಿದ್ದೇಕೆ?: ಬಿಜೆಪಿ (Kumaraswamy | JDS | BJP Government | BJP Dissidence | Karnataka Government | Eshwarappa)
Bookmark and Share Feedback Print
 
WD
ಈ ರಾಜಕೀಯ ತಿಕ್ಕಾಟವೆಲ್ಲವೂ ಬಿಜೆಪಿಯ ಆಂತರಿಕ ಸಂಘರ್ಷವಾಗಿದ್ದು, ನಾವೇನೂ ತಲೆ ಹಾಕುವುದಿಲ್ಲ ಎಂದಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದೀಗ ಗೋವಾಕ್ಕೆ ಹೋಗಿ ಬಿಜೆಪಿ ಶಾಸಕರೊಂದಿಗೆ ಮಾತುಕತೆ ನಡೆಸಿದ್ದು ಯಾಕೆ ಎಂದು ಪ್ರಶ್ನಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಈ ರೀತಿ ಸುಳ್ಳು ಹೇಳಿದ ಕುಮಾರಸ್ವಾಮಿ ಮತ್ತು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ನಡುವೆ ನಡೆದ ಮಾತುಕತೆಯ ಸಿಡಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ಶನಿವಾರ ಸಂಜೆ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ, ಈ ರೀತಿಯ ರಾಜಕೀಯ ಕುತಂತ್ರ ಮಾಡುವ, ಸರಕಾರಕ್ಕೆ ಮಾಟ-ಮಂತ್ರ ಮಾಡಿಸುವ ಹಾಗೂ ವಾಮಾಚಾರ ನಡೆಸುವ ಮೂಲಕ ಅಧಿಕಾರಕ್ಕೆ ಬರುವ ಬದಲು, ಜನರಿಂದಲೇ ಗೆದ್ದುಬಂದು ಚುನಾಯಿತರಾಗಿ ನೀವು ರಾಜ್ಯದಲ್ಲಿ ಅಧಿಕಾರ ಸ್ಥಾಪಿಸುವುದಾದರೂ ಯಾವಾಗ ಎಂದು ಕುಮಾರಸ್ವಾಮಿಗೆ ಪ್ರಶ್ನಿಸಿದರು.

ಜನರಿಂದ ಪುರಸ್ಕಾರ ಪಡೆದ ಸರಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರಕ್ಕೆ ಬಲಿಯಾದ ತಮ್ಮ ಪಕ್ಷದ ಶಾಸಕರ ಕುರಿತು ಮಾತನಾಡುತ್ತಾ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಿಮಗೆ ಕೊಟ್ಟದ್ದು ತಾತ್ಕಾಲಿಕವಾಗಿ ಉಳಿಯಬಹುದು. ಆದರೆ ನಿಮ್ಮನ್ನು ಗೆಲ್ಲಿಸಿದ ಕಾರ್ಯಕರ್ತರು, ಗೆಲ್ಲಿಸಿದ ಪಕ್ಷವನ್ನೆಲ್ಲಾ ಮರೆತು, ಶಾಶ್ವತವಾಗಿ ನಿಮಗೆ ನೀವೇ ಅನ್ಯಾಯ ಮಾಡಿಕೊಳ್ಳುತ್ತಿದ್ದೀರಿ ಎಂದರು.

2 ತಿಂಗಳಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಕುತಂತ್ರ ನಡೀತಾ ಇದೆ. ಷಡ್ಯಂತ್ರದಲ್ಲಿ ನಿಪುಣವಾಗಿರುವ ದೇವೇಗೌಡರ ಸಹಕಾರವೂ ಇದಕ್ಕಿದೆ ಎಂದ ಅವರು, ಏನೇ ಆದರೂ ಅ.11ರಂದು ಬಿಜೆಪಿಗೆ ಪೂರ್ಣ ಬಹುಮತ ಸಾಬೀತುಪಡಿಸುತ್ತೇವೆ ಎಂದು ಈಶ್ವರಪ್ಪ ವಿಶ್ವಾಸದಿಂದ ನುಡಿದರು.

ಅವರು ಬಿಡುಗಡೆ ಮಾಡಿದ ಸಿಡಿಯಲ್ಲಿ, ಕುಮಾರಸ್ವಾಮಿ ಅವರು ಅಪ್ಪಚ್ಚು ರಂಜನ್‌ಗೆ "ನಾವೆಲ್ಲಾ ವ್ಯವಸ್ಥೆ ಮಾಡಿದ್ದೀವಿ, ನೀವು ಧೈರ್ಯವಾಗಿ ಪಕ್ಷ ಬಿಟ್ಟು ಬನ್ನಿ" ಎಂದು ಆಮಿಷ ನೀಡುವ ಮಾತುಗಳಿದ್ದವು.

ಈ ನಡುವೆ, ಗೋವಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಜೆ ನಾಟಕೀಯ ವಿದ್ಯಮಾನಗಳು ನಡೆದವು. ಬಂಡುಕೋರ ಶಾಸಕರು ಅಲ್ಲಿಂದ ಕೋಲ್ಕತಾಕ್ಕೆ ಹಾರುವುದೆಂದೆಲ್ಲಾ ಊಹಾಪೋಹಗಳಿದ್ದವು. ಅವರನ್ನು ಶಂಕರಲಿಂಗೇಗೌಡ, ಬೆಳ್ಳುಬ್ಬಿ, ಶಿವನಗೌಡ ನಾಯಕ್, ಮಾನಪ್ಪ ವಜ್ಜಲ್ ಕೂಡಿಕೊಂಡಿದ್ದು, ಎಲ್ಲ ಬಿಜೆಪಿ ಬಂಡುಕೋರರೂ ಜೆಡಿಎಸ್ ಪಕ್ಷದ ಜಮೀರ್ ಅಹ್ಮದ್ ಮತ್ತು ಚೆಲುವರಾಯ ಸ್ವಾಮಿ ಅವರ ತೆಕ್ಕೆಯೊಳಗೆ ಸೇರಿಕೊಂಡಿದ್ದಾರೆ. ಇತ್ತೀಚಿನ ಮಾಹಿತಿಯಂತೆ ಅವರೆಲ್ಲರೂ ಗೋವಾದಲ್ಲೇ ತಂಗಿದ್ದು, ಭಾನುವಾರ ಸಂಜೆ ಬೆಂಗಳೂರಿಗೆ ಮರಳುವ ಸಾಧ್ಯತೆಗಳಿವೆ.

ಸಂಬಂಧಿಸಿದ ಸುದ್ದಿಗಳು...
ದಿಕ್ಕು ತಪ್ಪಿಸಿದ್ದೇ ರೇಣುಕಾಚಾರ್ಯ ಎಂದರಾ ಭಿನ್ನರು
ಏಕಾಂಗಿಯಾಗಿ ಓಡಿ ಬಂದ ರೇಣುಕ ಈಗ ಯಡಿಯೂರಪ್ಪಗೆ ಬೆಂಬಲ
ಮತ್ತೆ ಭಿನ್ನ ಬಣ ಸೇರಿಕೊಂಡ ಬೆಳ್ಳುಬ್ಬಿ
ಸಂಬಂಧಿತ ಮಾಹಿತಿ ಹುಡುಕಿ