ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೋವಾದಲ್ಲಿ 'ತಾಲಿಬಾನ್' ಆಳ್ವಿಕೆ, ಬದುಕಿದ್ದೇ ಹೆಚ್ಚು: ರೆಡ್ಡಿ (Janardhana Reddy | BJP | Karnataka Government Crisis | Dissidence)
Bookmark and Share Feedback Print
 
ಕಾಂಗ್ರೆಸ್ ಸರಕಾರವಿರುವ ಗೋವಾದಿಂದ ನಾವು ಬದುಕಿಬಂದಿದ್ದೇ ಹೆಚ್ಚು ಎಂದು ಹೇಳಿರುವ ರಾಜ್ಯ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಎಚ್.ಡಿ.ಕುಮಾರಸ್ವಾಮಿ ಜತೆ ಎಂದಿಗೂ ಮಾತುಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಿನ್ನಮತೀಯ ಬಿಜೆಪಿ ಶಾಸಕರನ್ನು ಬುಟ್ಟಿಗೆ ಹಾಕಿಕೊಂಡು ಬರಲೆಂದು ಗೋವಾಕ್ಕೆ ಸಂಧಾನಕಾರರಾಗಿ ತೆರಳಿ, ಶನಿವಾರ ಸಂಜೆ ವಾಪಸಾದ ಬಳಿಕ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ, ಅತೃಪ್ತರ ಮನವೊಲಿಕೆ ಕುರಿತ ಸಂಧಾನದಲ್ಲಿ ವಿಫಲವಾಗಿರುವುದು ತನ್ನ ವೈಯಕ್ತಿಕ ಸೋಲಲ್ಲ ಎಂದರು.

ಅಲ್ಲಿನ ಕಾಂಗ್ರೆಸ್ ಸರಕಾರವು ಅಧಿಕಾರ ದುರುಪಯೋಗ ಮಾಡಿ, ಬಿಜೆಪಿ ಶಾಸಕರ ಭೇಟಿಗೇ ಆರಂಭದಲ್ಲಿ ತಡೆಯೊಡ್ಡಿತು ಎಂದ ರೆಡ್ಡಿ, ಗೋವಾದಿಂದ ಬದುಕಿ ಬಂದಿದ್ದೇ ಹೆಚ್ಚು. ಅಲ್ಲಿ ತನ್ನನ್ನೊಬ್ಬ ಬೇರೆ ರಾಜ್ಯದ ಸಚಿವ ಎಂದೂ ಪರಿಗಣಿಸದೆ ತುಚ್ಛವಾಗಿ ನಡೆದುಕೊಳ್ಳಲಾಯಿತು. ಗೋವಾದಲ್ಲಿ ಪ್ರಜಾಪ್ರಭುತ್ವ ಸರಕಾರವೇ ಇಲ್ಲದಂತಾಗಿತ್ತು ಎಂದು ಆರೋಪಿಸಿದರು.

ಗೋವಾದಲ್ಲಿ ತಾಲಿಬಾನ್ ರೀತಿಯ ಆಡಳಿತವಿದೆ ಎಂದ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. 11ನೇ ತಾರೀಕು ಅವರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವ ಪರಿಸ್ಥಿತಿ ಬರಲಿದೆ ಎಂದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ