ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತ್ತೆ ಚೆನ್ನೈಗೆ ಆಗಮಿಸಿದ ಬಿಜೆಪಿ ಅತೃಪ್ತ ಶಾಸಕರು (Karnataka Political Crisis | BJP | JDS | Janardhana Reddy)
Bookmark and Share Feedback Print
 
ರಾಜ್ಯ ರಾಜಕೀಯದ ಹಲವು ವಿದ್ಯಮಾನಗಳ ಬಳಿಕ ಬಿಜೆಪಿನ ಅತೃಪ್ತ ಶಾಸಕರು ಮತ್ತೊಮ್ಮೆ ಚೆನ್ನೈಗೆ ಆಗಮಿಸಿದ್ದಾರೆ. ಗೋವಾದಿಂದ ಶನಿವಾರ ರಾತ್ರಿ ಚೆನ್ನೈಗೆ ಆಗಮಿಸಿರುವ ಶಾಸಕರು ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಠಿಕಾಣಿ ಹೂಡಿದ್ದಾರೆ.

ಈ ಮಧ್ಯೆ ಚೆನ್ನೈ ಪಯಣ ಬೆಳೆಸಿರುವ ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅತಪ್ತರನ್ನು ಶಾಸಕರನ್ನು ಸೆಳೆಯಲು ಅಂತಿಮ ಸುತ್ತಿನ ಕಸರತ್ತು ಆರಂಭಿಸಿದ್ದಾರೆ.

16 ಮಂದಿ ಶಾಸಕರು ನನ್ನೊಂದಿಗಿದ್ದು ಮಾಧ್ಯಮದ ಮುಂದೆ ಬಂದು ಎಲ್ಲವನ್ನೂ ಬಹಿರಂಗಪಡಿಸಲಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಮತ್ತೊಂದೆಡೆ ಇತ್ತ ಮುಖ್ಯಮಂತ್ರಿ ಯಡಿಯೂರುಪ್ಪ ಎಂದಿನಂತೆ ಭಾನುವಾರ ಬೆಳಗ್ಗೆ ವಿಧಾನಸೌಧದ ಮುಂದೆ ಜಾಗಿಂಗ್ ನಡೆಸಿದರು. ಸೋಮವಾರ ಸರಕಾರವು ವಿಶ್ವಾಸ ಮತ ಸಾಬೀತುಪಡಿಸಲಿದೆಯೆಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಎರಡುವರೆ ವರ್ಷಗಳ ಬಿಜೆಪಿ ಸರಕಾರ ಉಳಿಯುವುದೇ ಎಂಬುದು ಸೋಮವಾರ ಸ್ಪಷ್ಟವಾಗಲಿದೆ. ಗೋವಾದಲ್ಲಿ ಜನಾರ್ದನ ರೆಡ್ಡಿಯವರ ಸಂಧಾನ ಮಾತುಕತೆ ವಿಫಲಗೊಂಡ ಹಿನ್ನೆಲೆಯಲ್ಲಿ ಬಿನ್ನಮತೀಯರು ಸರಕಾರದ ವಿರುದ್ಧ ಮತ ಹಾಕುವುದು ಖಚಿತ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ