ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಧಾನಸೌಧದ ಬಳಿ ಮತ್ತೆ ವಾಮಚಾರ; ಅರಿಶಿಣ ಕುಂಕುಮ ಪತ್ತೆ (Karnataka | Bangalore | Vidhanasoudha | State)
Bookmark and Share Feedback Print
 
ವಿಧಾನಸೌಧದ ಬಳಿ ಮತ್ತೆ ವಾಮಚಾರ ಮಾಡಿರುವ ಅಂಶ ಬೆಳಕಿಗೆ ಬಂದಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ವಿಧಾನಸೌಧದ ಗೇಟ್ ಬಳಿ ಮಾಟ-ಮಂತ್ರ ಮಾಡಿರುವ ಕುರುಹು ಮತ್ತೊಮ್ಮೆ ಪತ್ತೆಯಾಗಿದೆ. ಆ ಮೂಲಕ ಮತ್ತೊಂದು ಬಾರಿ ವಾಮಚಾರದ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ಎರಡು ದಿನಗಳ ಹಿಂದೆಯಷ್ಟೇ ಶಕ್ತಿ ಸೌಧದ ಎದುರುಗಡೆ ಗೊಂಬೆ, ಕೋಳಿ ಮೊಟ್ಟೆ, ಬಳಿಕೊಟ್ಟ ಹುಂಜದ ತಲೆ, ತಾಮ್ರದ ಚೊಂಬು ಪತ್ತೆಯಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಮತ್ತೆ ಮಾಮಚಾರ ನಡೆದಿದ್ದು, ಅರಿಶಿಣ ಕುಂಕುಮ ಪತ್ತೆಯಾಗಿದೆ.

24 ತಾಸುಗಳಷ್ಟು ಪೊಲೀಸ್ ಸರ್ಪಗಾವಲೂ ಇರುವುದರ ನಡುವೆಯೂ ಈ ಮಾಟಮಂತ್ರ ನಡೆದಿದೆ. ಇಂದು ಬೆಳಗ್ಗೆ ವಾಮಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ರಸ್ತೆವರೆಗೂ ಅರಿಶಿಣ ಕುಂಕುಮವನ್ನು ಚೆಲ್ಲಲಾಗಿದ್ದು,
ವಿಧಾನಸೌಧದ ಮುಖ್ಯದ್ವಾರದ ಮುಂದೆಯೇ ಇದು ನಡೆದಿದೆ.

ಆದರೆ ವಾಮಚಾರ ಕೃತ್ಯವನ್ನು ನಡೆಸಿರುವುದನ್ನು ಪೊಲೀಸರಿಗೆ ಕಂಡು ಹಿಡಿಯಲು ಸಾಧ್ಯವಾಗದಿರುವುದು ವಿಪರ್ಯಾಸಕ್ಕೆ ಕಾರಣವಾಗಿದೆ. ರಾಜಕೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸ್ಥಾನ ಭದ್ರಪಡಿಸಲು ಅಥವಾ ಕಳೆದುಕೊಳ್ಳದಿರಲು ಈ ಕೃತ್ಯ ನಡೆಸಿರುವುದಂತು ಖಚಿತವಾದಂತಾಗಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ