ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಚ್‌ಡಿಕೆ ನಡವಳಿಕೆ ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ: ಗೌಡ (State | karnataka | Yadyurappa | political crisis)
Bookmark and Share Feedback Print
 
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಾನು ಸತ್ಯ ಹರಿಶ್ಚಂದ್ರ ಎಂದು ಹೇಳಿಕೊಳ್ಳಬಹುದು. ಆದರೆ ಅವರ ನಡವಳಿಕೆ ರಾವಣ ಅಥವಾ ದುರ್ಯೋಧನ ಎಂಬುದು ರಾಜ್ಯದ ಜನತೆ ಮುಂದೆ ಸಾಬೀತಾಗಿದೆ ಎಂದು ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.

ಕೃಷಿ ಮೇಳ ಉದ್ಘಾಟಿಸಲು ಬ್ರಹ್ಮಾವರಕ್ಕೆ ಬಂದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದರು. ಅಧಿಕಾರಕ್ಕೆ ಹವಣಿಸುವವರಿಂದ ಈ ಗೊಂದಲ ಉಂಟಾಗಿದೆ. ಸರಕಾರದ ಜತೆಗೆ ಇದ್ದುಕೊಂಡು ಸರಕಾರಕ್ಕೇ ಚೂರಿ ಹಾಕುವ ಕೆಲಸವನ್ನು ಗೂಳಿಹಟ್ಟಿ ಶೇಖರ್ ಮಾಡಿದ್ದರಿಂದ ಸಚಿವ ಸ್ಥಾನದಿಂದ ಕಿತ್ತುಹಾಕುವುದು ಅನಿವಾರ್ಯವಾಗಿತ್ತು. ಉಳಿದ ಪಕ್ಷೇತರರಿಗೆ ಸೂಕ್ತ ಸ್ಥಾನಮಾನದ ಭರವಸೆ ನೀಡಲಾಗಿತ್ತು. ಆದರೆ ಚೂರಿ ಹಾಕುವವರ ಜತೆ ಸೇರಿ ಈ ಗೊಂದಲ ಸೃಷ್ಟಿಸಿದ್ದಾರೆ ಎಂದು ಹೇಳಿದ ಡಿ.ವಿ., ಯಾವುದೇ ತೊಂದರೆ ಇಲ್ಲದೆ ಯಡಿಯೂರಪ್ಪ ಬಹುಮತ ಸಾಬೀತುಪಡಿಸುತ್ತಾರೆ ಎಂದು ಹೇಳಲು ಮರೆಯಲಿಲ್ಲ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡವಳಿಕೆ ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ. ಸರಕಾರ ಕೆಡಹುವ ಕೆಲಸ ಮಾಡುವುದಿಲ್ಲ ಎಂದು ಹೇಳುವವರು ಗೋವಾದಲ್ಲಿ ಮಾಡುತ್ತಿರುವುದು ಏನನ್ನು ಎಂದು ಹೇಳಬೇಕು. ಇಂಥ ಹೊಲಸು ರಾಜಕಾರಣದಿಂದ ಅಸ್ಥಿರ ಉಂಟು ಮಾಡುತ್ತಿರುವ ಕುಮಾರಸ್ವಾಮಿ ತಮ್ಮ ಜತೆ ಇರುವ ಶಾಸಕರನ್ನು ವಜ್ರ ಎಂದು ಹೇಳಿದ್ದಾರೆ. ಅದರಲ್ಲಿ ಒಂದು ನಕಲಿ ವಜ್ರ ಎಂದು ಗೊತ್ತಾಯಿತು. ಇನ್ನೆಷ್ಟು ನಕಲಿ ವಜ್ರಗಳಿವೆ ಎಂದು ಗೊತ್ತಾಗಲಿದೆ ಎಂದು ಜೆಡಿಎಸ್ ಶಾಸಕರ ಬಗ್ಗೆ ಹೇಳಿದರು.

ಇದೊಂದು ಅಗ್ನಿಪರೀಕ್ಷೆ. ಬೇರೆ ಪಕ್ಷದ ಶಾಸಕರನ್ನು ಸೆಳೆಯಲು ದುಡ್ಡಿನ ಮೂಲಕ ಯತ್ನಿಸಲಾಗುತ್ತಿದೆ ಎಂಬುದು ಸುಳ್ಳು. ಅಂಥ ದುಡ್ಡಿದ್ದರೆ ಜನರ ಅಭಿವೃದ್ದಿಗೆ ಬಳಸುತ್ತೇವೆಯೇ ವಿನಃ ಕುದುರೆ ವ್ಯಾಪಾರಕ್ಕೆ ಅಲ್ಲ ಎಂದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ