ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೇಷ್ಮೆ ನಿಗಮ ಲಾಭದಲ್ಲಿದೆ: ಯೋಗೀಶ್ವರ್ (State | karnataka | KSIC | Cotton)
Bookmark and Share Feedback Print
 
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ(ಕೆಎಸ್ಐಸಿ) 2009-10ರಲ್ಲಿ 66 ಕೋಟಿ ರೂ. ವಹಿವಾಟು ನಡೆಸಿ 8 ಕೋಟಿ ರೂ. ಲಾಭ ಗಳಿಸಿದೆ ಎಂದು ನಿಗಮದ ಅಧ್ಯಕ್ಷ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

ದಸರೆ ಅಂಗವಾಗಿ ರೇಷ್ಮೆ ನೇಯ್ಗೆ ಕಾರ್ಖಾನೆ ಆವರಣದಲ್ಲಿ ಆಯೋಜಿಸಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ವಿಂಟೇಜ್ ಸೀರೆಗಳ ಪ್ರದರ್ಶನ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆರ್ಥಿಕ ವರ್ಷದಲ್ಲಿ ವಹಿವಾಟನ್ನು 100 ಕೋಟಿ ರೂ. ಗೆ ಹೆಚ್ಚಿಸಿ, 10ರಿಂದ 12 ಕೋಟಿ ರೂ. ಲಾಭಾಂಶ ಪಡೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಮೈಸೂರು ಸಿಲ್ಕ್ ಸೀರೆಗಳಿಗೆ ಅಪಾರ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಕಾರ್ಖಾನೆ ಉತ್ಪಾದನೆ ದ್ವಿಗುಣಗೊಳಿಸಲು ಘಟಕವನ್ನು ಆಧುನೀಕರಣಗೊಳಿಸುವುದು ಹಾಗೂ ಉತ್ಪಾದನೆ ಹೆಚ್ಚಳಕ್ಕೆ ಹೊಸ ಘಟಕ ಆರಂಭಿಸುವ ಯೋಜನೆಯಿದೆ. ಸದ್ಯ ಮೈಸೂರು ಘಟಕದಿಂದ 75 ಸಾವಿರ ಸೀರೆಗಳನ್ನು ಪ್ರತಿ ವರ್ಷ ಉತ್ಪಾದಿಸಲಾ ಗುತ್ತಿದೆ. ಇದು 1.50 ಲಕ್ಷ ಸೀರೆ ಉತ್ಪಾದನೆ ಹೆಚ್ಚಿಸಬಹುದು. ಇದಕ್ಕಾಗಿ ಮೂಲಭೂತ ಸೌಕರ್ಯ ಒದಗಿಸಿದರೆ ಬೇಡಿಕೆ ಮುಟ್ಟಲು ಸಾಧ್ಯವಿದೆ ಎಂದರು.

ಚನ್ನಪಟ್ಟಣದಲ್ಲಿರುವ ನಿಗಮದ ಹಳೆ ಕಾರ್ಖಾನೆ ಮಾರಾಟ ಮಾಡಿದರೆ ಸುಮಾರು 3 ಕೋಟಿ ರೂ. ಆದಾಯ ಬರುವ ನೀರೀಕ್ಷೆಯಿದೆ. ಇದನ್ನು ಇಲ್ಲಿನ ಕಾರ್ಖಾನೆ ಅಭಿವೃದ್ದಿಗೆ ಬಳಸುವ ಯೋಜನೆಯಿದೆ ಎಂದು ತಿಳಿಸಿದರು.

ಹೊಸ ಘಟನ ಸ್ಥಾಪನೆಗೆ ಸಂಬಂಧ 5 ಕೋಟಿ ರೂ. ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಹಣಕಾಸು ಇಲಾಖೆ ಇನ್ನೂ ಒಪ್ಪಿಗೆ ನೀಡಿಲ್ಲ. ಸರಕಾರದಿಂದ ಹಣ ಸಿಗದೇ ಇದ್ದರೂ ನಿಗಮದ ಆದಾಯದಲ್ಲಿಯೇ ಇದನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಕಾರ್ಖಾನೆ ನೌಕರರ ಬೇಡಿಕೆಗಳನ್ನು ಈಡೇರಿಸಲಾಗುತ್ತಿದೆ. ಸಾಫ್ಟ್ ಸಿಲ್ಕ್ ಖರೀದಿಯನ್ನು ಸ್ಥಗಿತಗೊಳಿಸಲಾಗಿದೆ. ನೌಕರರಿಗೆ 5 ಸಾವಿರ ರೂ. ವರೆಗೆ ಬೋನಸ್ ನೀಡಲಾಗಿದೆ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ