ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇದು ಧರ್ಮ ಯುದ್ಧ; ಸರಕಾರ ಪತನ ಖಚಿತ: ಎಚ್‌ಡಿಕೆ (Kumaraswami | Bangalore | Karnataka | Political Crisis)
Bookmark and Share Feedback Print
 
ರಾಜ್ಯ ರಾಜಕೀಯದಲ್ಲಿ ಹಲವು ವಿದ್ಯಾಮಾನಗಳು ನಡೆಯುತ್ತಿರುವಂತೆಯೇ ಚೆನ್ನೈನಲ್ಲಿ ಮಾಧ್ಯಮದ ಮುಂದೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಜತೆ ಅತೃಪ್ತ ಶಾಸಕರು ಭಾನುವಾರ ಪ್ರತ್ಯಕ್ಷರಾಗಿದ್ದಾರೆ.

ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ರೆಬೆಲ್ ಸ್ಟಾರುಗಳು ನಮ್ಮನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಬದಲಾಗಿ ಸ್ವಯಂ ಪ್ರೇರಿತವಾಗಿ ಬಂದಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಮತ್ತೊಂದೆಡೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಇದು ಧರ್ಮ ಯುದ್ಧವಾಗಿದ್ದು ಸರಕಾರದ ಪತನ ಖಚಿತ ಎಂದು ಹೇಳಿದ್ದಾರೆ. ಬಿಜೆಪಿನ ಕೆಲ ಶಾಸಕರು ರಾಜ್ಯಪಾಲರಿಗೆ ನೀಡಿದ ಪತ್ರದಲ್ಲಿ ತಮ್ಮ ಬೆಂಬಲ ಪಾಪಸ್ ಪಡೆದಿದ್ದಾರೆ. ಆದರೆ ಶಾಸಕರಿಗೆ ನೋಟಿಸ್ ನೀಡಿ ರಾಜ್ಯ ಸರಕಾರವು ಬೆದರಿಕೆ ತಂತ್ರವೊಡ್ಡಿದ್ದಾರೆ. ಆದರೆ ಈ ಬಾರಿ ಯಡ್ಡಿ ತಂತ್ರ ನಡೆಯಲ್ಲ ಎಂದವರು ಹೇಳಿದರು.

ಅದೇ ಹೊತ್ತಿಗೆ ಮುಖ್ಯಮಂತ್ರಿ ಸೂಚನೆ ಮೆರೆಗೆ ಸ್ಪೀಕರ್ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡುವ ಸಾಧ್ಯತೆಯೂ ಇದೆ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ರಾಜ್ಯದ ಜನತೆ ಬಿಎಸ್‌ವೈ ನಡವಳಿಕೆಯಿಂದ ಬೆಸತ್ತಿದ್ದಾರೆ. ಅತೃಪ್ತ ಶಾಸಕರಲ್ಲಿ ಉತ್ತರ ಕರ್ನಾಟಕದವರು ಇದ್ದಾರೆ. ಇದು ಕರ್ನಾಟಕದ ಜನತೆಯನ್ನು ಈ ಸರ್ಕಾರ ಕಡೆಗಣಿಸಿರುವುದಕ್ಕೆ ಸಾಕ್ಷಿಯಾಗಿದೆ. ಬೀದಿ ಬೀದಿ ಸರಕಾರದ ಚರ್ಚೆ ಮಾಡುವಂತಹ ವಾತಾವರಣ ನಿರ್ಮಾಣ ಮಾಡಿದ್ದಾರೆ. ಆದರೆ ನಮ್ಮ ಹೋರಾಟ ಯಾವುದೇ ಸರಕಾರದ ವಿರುದ್ಧವಲ್ಲ ಬದಲಾಗಿ ರಾಜ್ಯದ ಜನತೆಗೆ ಉತ್ತಮ ಆಡಳಿತ ಕೊಡುವ ಭರವಸೆಯಾಗಿದೆ ಎಂದವರು ತಿಳಿಸಿದರು.

ಶಾಸಕರಿಗೆ ಯಾವುದೇ ಆಮಿಷ ಒಡ್ಡಲಾಗಿಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ಇವರಿಗೆ ಸಹಕಾರ ನೀಡುವುದು ನನ್ನ ಕರ್ತವ್ಯವಾಗಿದೆ ಎಂದವರು ಹೇಳಿದರು.

ಅದೇ ಹೊತ್ತಿಗೆ ಜನಾರ್ದನ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ತನ್ನ ರಾಜಕೀಯ ಸನ್ಯಾಸದ ಬಗ್ಗೆ ರಾಜ್ಯದ ಆರು ಕೋಟಿ ಜನತೆ ತೀರ್ಮಾನ ಮಾಡಬೇಕೇ ಹೊರತು ಕೇವಲ ನಾಲ್ಕು ಜನ ವ್ಯಕ್ತಗಳಿಗೆ ಸನ್ಯಾಸ ಕೊಡಲು ಸಾದ್ಯವಿಲ್ಲ ಎಂದು ಹೇಳಿದರು.

ಭಾನುವಾರ ಸಂಜೆಯ ವೇಳೆಗೆ ಅತೃಪ್ತ ಶಾಸಕರು ಬೆಂಗಳೂರುನತ್ತ ಪಯಣ ಬೆಳೆಸಿದ್ದು, ರಾತ್ರಿಯ ಹೊತ್ತಿಗೆ ಬಿಡದಿಯ ರೆಸಾರ್ಟ್‌ಗೆ ಬರುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ