ಕರ್ನಾಟಕದ ಬಿಜೆಪಿ ಸರಕಾರವನ್ನು ಉರುಳಿಸಲು ಪ್ರತಿಪಕ್ಷಗಳು ಹೂಡಿದ್ದ ಎಲ್ಲಾ ತಂತ್ರಗಳು ಇತ್ತೀಚಿನ ಮಾಹಿತಿಗಳವರೆಗೆ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಇಂದು ವಿಧಾನಸಭೆ ಮತ್ತು ಹೊರಗಡೆ ನಡೆದ ಮತ್ತು ನಡೆಯುತ್ತಿರುವ ಕ್ಷಣ-ಕ್ಷಣದ ಮಾಹಿತಿಗಳು ಇಲ್ಲಿವೆ.
ಇಂದಿನ ರಾಜ್ಯ ರಾಜಕೀಯ ವಿದ್ಯಮಾನಗಳು (ಕೆಳಗಿನಿಂದ ಮೇಲಕ್ಕೆ):
07.30: ಬಿಜೆಪಿ ಸರಕಾರಕ್ಕೆ 106 ಸದಸ್ಯರ ಬೆಂಬಲವಿದೆ: ಈಶ್ವರಪ್ಪ. 07.30: ಬಹುಮತದ ಕುರಿತು ರಾಷ್ಟ್ರಪತಿಯವರಿಗೆ ಮನವರಿಕೆ ಮಾಡಿಕೊಡಲು ಪೆರೇಡ್. 07.30: ಮಂಗಳವಾರ ಬಿಜೆಪಿಯ 106 ಶಾಸಕರು ನವದೆಹಲಿಗೆ. 07.00: ನಿಮ್ಮ ಕುದುರೆ ವ್ಯಾಪಾರ ವಿಫಲವಾಯಿತೇ?: ಕರಂದ್ಲಾಜೆ ಪ್ರಶ್ನೆ. 07.00: ಕುಮಾರಸ್ವಾಮಿ, ಸಿದ್ದರಾಮಯ್ಯ, ರೇವಣ್ಣರನ್ನು ತರಾಟೆಗೆ ತೆಗೆದುಕೊಂಡ ಶೋಭಾ ಕರಂದ್ಲಾಜೆ. 06.00: ಪ್ರಧಾನಿ ಮನಮೋಹನ್ ಸಿಂಗ್, ಗೃಹಸಚಿವ ಪಿ. ಚಿದಂಬರಂ, ಆಸ್ಕರ್ ಫೆರ್ನಾಂಡಿಸ್ ಹಾಜರು. 06.00: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮನೆಯಲ್ಲಿ ಸಭೆ ಆರಂಭ. 06.00: ಕರ್ನಾಟಕದ ಬೆಳವಣಿಗೆಗಳ ಕುರಿತು ಕಾಂಗ್ರೆಸ್ ಕೋರ್ ಸಮಿತಿ ಸಭೆ 05.03: ರಾಜ್ಯಪಾಲರ ವರದಿ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಿರುವ ಸಂಪುಟ. 05.03: ರಾಷ್ಟ್ರಪತಿ ಆಳ್ವಿಕೆ- ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರ. 05.00: ಸರಕಾರದ ವಿರುದ್ಧ, ಬಂಡಾಯ ಶಾಸಕರ ಪರ ಪಿ.ಪಿ. ರಾವ್ ವಾದ. 05.00: ಸರಕಾರದ ಪರ ಸೋಲಿ ಸೊರಾಬ್ಜಿ ವಾದ ಮಂಡನೆ. 05.00: ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದು ಕಾನೂನು ಬಾಹಿರ ಎಂಬ ವಾದ. 05.00: ಶಾಸಕರ ಅನರ್ಹ ಪ್ರಕರಣ; ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್ 03.00: ಬಿಜೆಪಿ ಸರಕಾರದ ಭವಿಷ್ಯ ಕೇಂದ್ರದ ಅಂಗಳಕ್ಕೆ. 03.00: ಶೀಘ್ರದಲ್ಲೇ ರಾಷ್ಟ್ರಪತಿ ಆಳ್ವಿಕೆ ಕುರಿತು ಕೇಂದ್ರ ನಿರ್ಧಾರ. 03.00: ಶಾಸಕರನ್ನು ಅನರ್ಹಗೊಳಿಸಿದ್ದು ಸರಿಯಲ್ಲ - ರಾಜ್ಯಪಾಲ 03.00: ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರಿಂದ ಶಿಫಾರಸು. 03.00: ಶಾಸಕರ ತಲೆ ಎಣಿಕೆ ನಡೆಸಿದ ರಾಜ್ಯಪಾಲರು. 02.35: ರಾಜ್ಯಪಾಲರು ವಿಶ್ವಾಸ ಕಳೆದುಕೊಂಡಿದ್ದಾರೆ - ವೆಂಕಯ್ಯ ನಾಯ್ಡು 02.30: ಸದನದೊಳಗೆ ಪೊಲೀಸರು ಸಮವಸ್ತ್ರಧಾರಿಗಳಾಗಿ ಬಂದದ್ದು ತಪ್ಪು - ಸಿದ್ದು 02.30: ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್‌ಗಿಲ್ಲ- ಸಿದ್ದು 01.35: ಜೆಡಿಎಸ್, ಕಾಂಗ್ರೆಸ್ ವಿಫಲವಾಗಿದೆ- ಬಿಜೆಪಿ 01.30: ನಾನು ಸಚಿವನಾಗಿ ಕಲಾಪದಲ್ಲಿ ಭಾಗವಹಿಸಿದ್ದೆ- ವಿಜಯ್ ಶಂಕರ್ 01.00: ಇದರಲ್ಲಿ ತಪ್ಪೇನೂ ಇಲ್ಲ- ಮಾಜಿ ಸ್ಪೀಕರ್ ರಮೇಶ್ ಕುಮಾರ್. 01.00: ಇದು ಕಾನೂನು ಪ್ರಕಾರ ತಪ್ಪು - ಪ್ರತಿಪಕ್ಷಗಳ ಆರೋಪ. 01.00: ಜನಾರ್ದನ ರೆಡ್ಡಿ, ವಿಜಯ ಶಂಕರ್, ವಿ. ಸೋಮಣ್ಣ ಧ್ವನಿ ಮತದ ಅಂಗೀಕಾರದ ಸಂದರ್ಭದಲ್ಲಿ ವಿಧಾನಸಭೆಯಲ್ಲಿದ್ದರು. 01.00: ಸದನದಲ್ಲಿ ಕಾಣಿಸಿಕೊಂಡ ವಿಧಾನ ಪರಿಷತ್ ಸದಸ್ಯರು- ಆಕ್ಷೇಪ 12.39: ಅಪರಾಹ್ನ 3.00 ಗಂಟೆಗೆ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ. 12.39: ಸ್ಪೀಕರ್ ಆದೇಶಕ್ಕೆ ತಡೆ ನೀಡಲು ಅನರ್ಹಗೊಂಡಿದ್ದ ಶಾಸಕರಿಂದ ಮನವಿ. 12.39: ಶಾಸಕರ ಅನರ್ಹತೆ-ಪ್ರಕರಣ ಹೈಕೋರ್ಟಿಗೆ 12.05: ವರದಿಯಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲರಿಂದ ಸಲಹೆ? 12.05: ರಾಜಕೀಯ ಬೆಳವಣಿಗೆಗಳ ಕುರಿತು ವರದಿ ರವಾನಿಸಿದ ರಾಜ್ಯಪಾಲ. 12.00: ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಒತ್ತಾಯ. 12.00: ರಾಜ್ಯಪಾಲರನ್ನು ಭೇಟಿ ಮಾಡಿದ ಪ್ರತಿಪಕ್ಷಗಳ ನಾಯಕರು. 11.55: ನಮ್ಮನ್ನು ನೀವೇ ರಕ್ಷಿಸಬೇಕು: ರಾಜ್ಯಪಾಲರಿಗೆ ಬಂಡಾಯ ಶಾಸಕರು. 11.50: ಮಾರ್ಷಲ್‌ಗೆ ಹಲ್ಲೆ ನಡೆಸಿದ್ದು ಚಿಕ್ಕಬಳ್ಳಾಪುರ ಶಾಸಕ ಬಚ್ಚೇಗೌಡ-ವರದಿ 11.35: ರಾಜ್ಯದ ಬೆಳವಣಿಗೆಗಳಿಗೆ ರಾಜ್ಯಪಾಲರೇ ಕಾರಣ, ವಾಪಸ್ ಕರೆಸಿಕೊಳ್ಳಿ- ಈಶ್ವರಪ್ಪ 11.35: ರಾಜ್ಯಪಾಲರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ವಾಗ್ದಾಳಿ. 11.28: ತೆರವಾಗಿರುವ ಎಲ್ಲಾ ಏಳು ಸಚಿವ ಸ್ಥಾನಗಳಿಗೆ ಸೂಕ್ತರ ನೇಮಕ- ಸಿಎಂ. 11.28: ಶೀಘ್ರದಲ್ಲೇ ಮತ್ತೆ ಸಂಪುಟ ಪುನಾರಚನೆ ಮಾಡುತ್ತೇನೆ- ಸಿಎಂ. 11.24: ಯಾರಿಗೆ ಎಷ್ಟು ಹಣ ಹಂಚಲಾಗಿದೆ ಎಂಬ ಮಾಹಿತಿ ನನಗಿದೆ: ಸಿಎಂ. 11.24: ದುರ್ಯೋದನ ಪಾತ್ರವಹಿಸಿದ ಕುಮಾರಸ್ವಾಮಿ- ಯಡಿಯೂರಪ್ಪ ಟೀಕೆ. 11.23: ಬಹುಮತವಿಲ್ಲ ಎನ್ನುತ್ತಿರುವ ಪ್ರತಿಪಕ್ಷಗಳಿಗೆ ಹತಾಶೆಯಾಗಿದೆ - ಸಿಎಂ. 11.22: ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಪ್ರಕರಣದ ತನಿಖೆ- ಸಿಎಂ ಭರವಸೆ. 11.21: ಮಾಧ್ಯಮ ಪ್ರತಿನಿಧಿಗಳ ಕ್ಷಮೆ ಯಾಚಿಸಿದ ಮುಖ್ಯಮಂತ್ರಿ. 11.21: ವಿಶ್ವಾಸ ಮತ ಗೆದ್ದರೂ, ಯಡಿಯೂರಪ್ಪ ಮುಖದಲ್ಲಿ ಮಂದಹಾಸವಿಲ್ಲ- ವರದಿ 11.21: ಸಿಎಂ ಯಡಿಯೂರಪ್ಪರಿಂದ ವಿಧಾನಸಭೆಯಲ್ಲಿ ಪತ್ರಿಕಾಗೋಷ್ಠಿ. 11.20: ಸರಕಾರವನ್ನು ವಜಾ ಮಾಡುವುದು ಸಾಧ್ಯವಿಲ್ಲ- ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ 11.17: ರಾಜ್ಯಪಾಲರಿಂದ ವರದಿ ನಿರೀಕ್ಷಿಸುತ್ತಿದ್ದೇನೆ- ಗೃಹಸಚಿವ ಪಿ. ಚಿದಂಬರಂ 11.15: ಕ್ಯಾಬಿನೆಟ್ ಶಿಫಾರಸುಗಳನ್ನು ಪರಿಶೀಲನೆ ನಡೆಸಲಾಗುತ್ತದೆ- ರಾಷ್ಟ್ರಪತಿ ಪ್ರತಿಭಾ ಪಾಟೀಲ್ 11.05: ರಾಜಭವನಕ್ಕೆ ಆಗಮಿಸಿದ ಕಾಂಗ್ರೆಸ್, ಜೆಡಿಎಸ್, ಬಂಡಾಯ ಶಾಸಕರು. 10.59: ರಾಜಭವನದ ಪ್ರತಿಭಟನಾಕಾರರಿಗೆ ಸಾವಿರಾರು ಮಂದಿ ಸಾಥ್. 10.56: ಹರಿದ ಅಂಗಿಯನ್ನು ಕಿತ್ತು ಹಾಕಿ, ಹೊಸ ಅಂಗಿ ತೊಟ್ಟು ಪ್ರತ್ಯಕ್ಷರಾದ ಗೂಳಿಹಟ್ಟಿ. 10.55: ಧ್ವನಿಮತದ ಮೂಲಕ ವಿಶ್ವಾಸ ಮತ ಅಂಗೀಕಾರ ಅಸಾಧ್ಯ: ಎಚ್‌ಡಿಕೆ. 10.51: ರಾಜ್ಯಪಾಲರಿಗೆ ನಾವು ಸರಕಾರಕ್ಕೆ ಬಹುಮತ ಇಲ್ಲ ಎಂದು ತೋರಿಸುತ್ತೇವೆ- ದೇಶಪಾಂಡೆ 10.50: ಸ್ಪೀಕರ್ ನಿರ್ಧಾರ ಸರಿಯಲ್ಲ, ಬಹುಮತ ಸಾಬೀತುಪಡಿಸಿಲ್ಲ- ಸಿದ್ದು 10.50: ಶಾಸಕರುಗಳಿಗೆ ಸಂಸದ ಎಚ್.ಡಿ. ಕುಮಾರಸ್ವಾಮಿ ಸಾಥ್. 10.50: ರಾಜಭವನಕ್ಕೆ ಬಸ್ಸುಗಳಲ್ಲಿ ಹೊರಟ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಮತ್ತು ಬಂಡಾಯ ಶಾಸಕರು. 10.41: ಬಿಬಿಎಂಪಿ ಪ್ರತಿಪಕ್ಷದ ನಾಯಕ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ. 10.41: ಹಿಟ್ಲರ್ ಯಡಿಯೂರಪ್ಪನಿಗೆ ಧಿಕ್ಕಾರ ಎಂದು ಕೂಗುತ್ತಿರುವ ಪ್ರತಿಭಟನಾಕಾರರು. 10.40: ರಾಜಭವನದ ಎದುರು ಬಿಬಿಎಂಪಿ ಕಾರ್ಪೊರೇಟರುಗಳಿಂದ ಪ್ರತಿಭಟನೆ. 10.35: ವಿಶ್ವಾಸ ಮತ ಗೆದ್ದಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. 10.35: ಕಾನೂನುಗಳನ್ನು ಗಾಳಿಗೆ ತೂರಿದ ಬಿಜೆಪಿ ಸರಕಾರ- ಗೌಡ 10.35: ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು ದೊಡ್ಡ ತಪ್ಪು. 10.35: ಇದು ದೇಶದ ಇತಿಹಾಸದಲ್ಲೇ ಕರಾಳ ಅಧ್ಯಾಯ- ದೇವೇಗೌಡ. 10.33: ಪೊಲೀಸರು ಸದನ ಪ್ರವೇಶಿಸಿದ್ದಕ್ಕೆ ಸಿದ್ದು ಆಕ್ರೋಶ. 10.33: ಕೆಂಡಾಮಂಡಲರಾದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ. 10.32: ರಾಜಭವನಕ್ಕೆ ಪೆರೇಡ್ ಮಾಡಲಿರುವ ಕಾಂಗ್ರೆಸ್, ಜೆಡಿಎಸ್ ಸದಸ್ಯರು. 10.30: ರಾಜಭವನಕ್ಕೆ ಜತೆಯಾಗಿ ತೆರಳಲು ಪ್ರತಿಪಕ್ಷಗಳ ನಿರ್ಧಾರ. 10.30: ವಿಧಾನಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಶಾಸಕಾಂಗ ಸಭೆ. 10.30: ಯಡಿಯೂರಪ್ಪ ನಿವಾಸದ ಬಳಿ ಅಭಿಮಾನಿಗಳಿಂದ ವಿಜಯೋತ್ಸವ. 10.25: ಸರಕಾರವನ್ನು ವಜಾಗೊಳಿಸಿ: ಆರ್.ವಿ. ದೇಶಪಾಂಡೆ ಒತ್ತಾಯ. 10.20: ಸರಕಾರದ ವಿರುದ್ಧ ವಿಧಾನಸಭೆಯ ಹೊರಗಡೆ ಪ್ರತಿಪಕ್ಷಗಳಿಂದ ವಾಗ್ದಾಳಿ. 10.17: ರಾಜ್ಯಪಾಲರಲ್ಲಿಗೆ ತೆರಳಲು ಅನರ್ಹ ಶಾಸಕರ ನಿರ್ಧಾರ. 10.15: ವಿಧಾನಸಭಾ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸ್ಪೀಕರ್. 10.14: ವಿಧಾನಸಭೆಯಲ್ಲೇ ಅಂಗಿ ಹರಿದುಕೊಂಡು ಗೂಳಿಹಟ್ಟಿ ಶೇಖರ್ ಅರೆಬೆತ್ತಲೆ ಪ್ರತಿಭಟನೆ. 10.13: ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿದ ಪ್ರತಿಪಕ್ಷಗಳು. 10.12: ಸಿಸಿ ಟಿವಿ ಮೂಲಕ ಸದನವನ್ನು ವೀಕ್ಷಿಸಿದ ರಾಜ್ಯಪಾಲರು. 10.11: ಪ್ರತಿಪಕ್ಷಗಳಿಂದ ತೀವ್ರ ಗದ್ದಲ, ರಣಾಂಗಣವಾದ ವಿಧಾನಸಭೆ. 10.10: ವಿಶ್ವಾಸ ಮತದಲ್ಲಿ ಯಡಿಯೂರಪ್ಪ ಸರಕಾರಕ್ಕೆ ಗೆಲುವು. 10.10: ಧ್ವನಿಮತದಿಂದ ಬಹುಮತ ಸಾಬೀತು - ಸ್ಪೀಕರ್ ಪ್ರಕಟಣೆ. 10.08: ಧ್ವನಿಮತದ ಮೂಲಕ ಗೊತ್ತುವಳಿ ಅಂಗೀಕಾರ. 10.07: ಬಹುಮತ ಸಾಬೀತುಗೊಳಿಸುವ ಗೊತ್ತುವಳಿ ಮಂಡನೆ. 10.07: ವಿಶ್ವಾಸಮತ ಯಾಚಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 10.06: ವಿಧಾನಸಭೆಯೊಳಗೆ ಮೊಬೈಲ್ ಜಾಮರ್ ಅಳವಡಿಕೆ. ಎಲ್ಲಾ ಮೊಬೈಲ್‌ಗಳು ಸ್ತಬ್ಧ. 10.06: ಸದನಕ್ಕೆ ಆಗಮಿಸಿದ ಸ್ಪೀಕರ್ ಬೋಪಯ್ಯ. 10.05: ಪೊಲೀಸರನ್ನು ಸದನದಿಂದ ಹೊರಗೆ ಕಳುಹಿಸಲು ಆಗ್ರಹ. 10.04: ಸ್ಪೀಕರ್ ಪೀಠದ ಮೇಲೆ ನಿಂತು ಎನ್.ಎ. ಹ್ಯಾರಿಸ್, ಸುರೇಶ್ ಗೌಡರಿಂದ ಪ್ರತಿಭಟನೆ. 10.01: ಸದನದ ಬಾವಿಗಿಳಿದು ಜೆಡಿಎಸ್. ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ 10.00: ಸದನದೊಳಗೆ ಭಾರೀ ಸಂಖ್ಯೆ ಪೊಲೀಸರ ಪ್ರವೇಶ. 10.00: ಸದನದೊಳಗೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವೇಶ. 09.56: ವಿಧಾನಸೌಧದ ಹೊರಗಡೆ ದಾಂಧಲೆ ನಡೆಸುತ್ತಿದ್ದ ನೂರಾರು ಪ್ರತಿಭಟನಾಕಾರರ ಬಂಧನ. 09.55: ಮಾಧ್ಯಮ ಪ್ರತಿನಿಧಿಗಳ ಮೇಲೆ ವಿಧಾನಸೌಧದ ಒಳಗಡೆ ಹಲ್ಲೆ. 09.55: ಪಕ್ಷೇತರ ಶಾಸಕರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಮಾರ್ಷಲ್ ಆಸ್ಪತ್ರೆಗೆ. 09.52: ಬಲವಂತದಿಂದ ಗೇಟ್ ತೆಗೆದು ಸದನ ಪ್ರವೇಶಿಸಿದ ಸಿದ್ದು, ರೇವಣ್ಣ. 09.52: ಶಂಕರ್ ಬಿದರಿ ಜತೆ ಪ್ರತಿಪಕ್ಷದ ನಾಯಕರ ಮಾತಿನ ಚಕಮಕಿ. 09.51: ಸದನದ ಪ್ರವೇಶ ದ್ವಾರದಲ್ಲೇ ಶಂಕರ್ ಬಿದರಿ ಉಪಸ್ಥಿತಿ. 09.50: ಸಿದ್ದರಾಮಯ್ಯ ಮತ್ತು ಎಚ್.ಡಿ. ರೇವಣ್ಣ ವಿಧಾನಸಭೆ ಪ್ರವೇಶಕ್ಕೆ ಅಡ್ಡಿ. 09.45: ಡಿ. ಸುಧಾಕರ್ - ಸುರೇಶ್ ಬಾಬು ಜಟಾಪಟಿ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಸುಧಾಕರ್. 09.40: ಸದನದೊಳಗೆ ಬಿಜೆಪಿ ಸರಕಾರದ ವಿರುದ್ಧ ಪಕ್ಷೇತರರು, ಬಿಜೆಪಿ ಬಂಡಾಯ ಶಾಸಕರಿಂದ ತೀವ್ರ ವಾಗ್ದಾಳಿ. 09.37: ಪಕ್ಷೇತರ ಶಾಸಕರು- ಡಿ. ಸುಧಾಕರ್, ನರೇಂದ್ರ ಸ್ವಾಮಿ, ಗೂಳಿಹಟ್ಟಿ, ವೆಂಕಟರಮಣಪ್ಪ, ಶಿವರಾಜ್ ತಂಗಡಗಿ 09.37: ನಿರ್ಬಂಧ ಉಲ್ಲಂಘಿಸಿ ಸದನ ಪ್ರವೇಶಿಸಿದ ಪಕ್ಷೇತರ ಮತ್ತು ಬಿಜೆಪಿ ಬಂಡಾಯ ಶಾಸಕರು. 09.36: ಮಾರ್ಷಲ್ ಕಪಾಳಕ್ಕೆ ಬಾರಿಸಿದ ಪಕ್ಷೇತರ ಶಾಸಕ. 09.36: ವಿಧಾನಸಭೆಯ ಮಾರ್ಷಲ್‌ಗಳ ಮೇಲೆ ಬಂಡುಕೋರ ಶಾಸಕರಿಂದ ಹಲ್ಲೆ. 09.34: ವಿಧಾನಸಭೆಯತ್ತ ಹೊರಟ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. 09.30: ವಿಧಾನಸಭೆಯ ಹೊರ ಆವರಣ ಪ್ರವೇಶಿಸಿದ ಶಾಸಕರು. 09.28: ವಿಧಾನಸಭಾ ಪ್ರವೇಶ ದ್ವಾರದ ಗಾಜು ಪುಡಿ ಮಾಡಿದ ಶಾಸಕರು. 09.25: ವಿಧಾನಸಭೆಯೊಳಗೆ ಮಾಧ್ಯಮಗಳಿಗೆ ಸಂಪೂರ್ಣ ನಿಷೇಧ. 09.20: ಸದನ ಪ್ರವೇಶಿಸಿದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರು. 09.20: ಅನರ್ಹಗೊಂಡ ಶಾಸಕರಿಂದ ವಿಧಾನಸಭೆಯ ಎದುರು ಪ್ರತಿಭಟನೆ. 08.30: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮನೆಗೆ ತೆರಳಿದ ಬಂಡಾಯ ಶಾಸಕರು. 07.10: ಅನರ್ಹಗೊಂಡ ಶಾಸಕರಿಗೆ ವಿಧಾನಸಭೆ ಪ್ರವೇಶವಿಲ್ಲ ಎಂದು ಘೋಷಣೆ. 07.00: ಹದಿನಾರು ಮಂದಿ ಬಿಜೆಪಿ ಮತ್ತು ಪಕ್ಷೇತರ ಶಾಸಕರ ಅನರ್ಹಗೊಳಿಸಿದ ಸ್ಪೀಕರ್. * ತನ್ನ ಕಾರ್ಯವ್ಯಾಪ್ತಿಯಲ್ಲಿ ಶಾಸಕಾಂಗದ ಘನತೆಗೆ ಕುತ್ತು ಬಾರದಂತೆ ನಡೆದುಕೊಳ್ಳುತ್ತೇನೆ - ರಾಜ್ಯಪಾಲರಿಗೆ ಬೋಪಯ್ಯ. * ಶಾಸಕರನ್ನು ಅನರ್ಹಗೊಳಿಸದಂತೆ ರಾಜ್ಯಪಾಲರಿಂದ ಸ್ಪೀಕರ್ ಕೆ.ಜಿ. ಬೋಪಯ್ಯಗೆ ಪತ್ರ. * ಭಾನುವಾರ ಎಲ್ಲಾ ಬಂಡಾಯ ಶಾಸಕರಿಂದ ಉತ್ತರ. ಶಾಸಕರು ಮತ್ತು ಸರಕಾರದ ವಾದವನ್ನು ಆಲಿಸಿದ ಸ್ಪೀಕರ್ ಸೋಮವಾರ ತೀರ್ಪು ನೀಡುವುದಾಗಿ ಪ್ರಕಟಣೆ. * ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದುಕೊಂಡ ಶಾಸಕರಿಗೆ ಸ್ಪೀಕರ್ ನೋಟೀಸ್.