ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 2ನೇ ಫೈನಲ್: ಸದಸ್ಯರಲ್ಲದವರ 'ಆಟ' ತಡೆಗೆ ಕ್ರಮ: ಸಿಎಂ (Karnataka Crisis | Yaddyurappa | Defection | BJP | Congress | JDS | 2nd Vote of Confidence)
Bookmark and Share Feedback Print
 
ಮತ್ತೊಂದು ಸುತ್ತಿನ ಜಂಗೀಕುಸ್ತಿಗೆ ಅಖಾಡ ಸಿದ್ಧವಾಗಿದ್ದು, ಬಿಜೆಪಿ ತನ್ನ ಶಾಸಕರಿಗೆ ಅ.14ರ ವಿಶ್ವಾಸಮತ ಯಾಚನೆ ವೇಳೆ ಹಾಜರಿದ್ದು, ಸರಕಾರವವನ್ನು ಬೆಂಬಲಿಸುವಂತೆ ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿದೆ. ಈ ಮಧ್ಯೆ, ಸದಸ್ಯರಲ್ಲದವರು ಸದನ ಪ್ರವೇಶಿಸದಂತೆ ತಡೆಯಲು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ವಿಶೇಷವಾಗಿ ಬಂಡಾಯವೆದ್ದು ಸ್ಪೀಕರ್ ರೂಲಿಂಗ್ ಪ್ರಕಾರ ಸದಸ್ಯತ್ವ ಕಳೆದುಕೊಂಡ 11 ಮಂದಿ ಬಿಜೆಪಿ ಬಂಡಾಯ ಶಾಸಕರು ಹಾಗೂ ಪಕ್ಷೇತರ ಶಾಸಕರು ಸದನಕ್ಕೆ ಬಂದು ಗದ್ದಲವೆಬ್ಬಿಸದಂತೆ ತಡೆಯುವುದೇ ಪೊಲೀಸ್ ಅಧಿಕಾರಿಗಳೊಂದಿಗಿನ ಸಭೆಯ ಹಿಂದಿರುವ ಉದ್ದೇಶ ಎಂದು ವಿಶ್ಲೇಷಿಸಲಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿ 2ನೇ ಸಲ ವಿಶ್ವಾಸ ಮತ ಯಾಚನೆ ಹಿನ್ನೆಲೆಯಲ್ಲಿ ಸಿಎಂ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ಅಂತ್ಯವಾಗಿದ್ದು, ಸುಸೂತ್ರವಾಗಿ ಸದನ ನಡೆಯುವಂತಾಗಲು ಪೊಲೀಸರೊಂದಿಗೆ ಚರ್ಚಿಸಿದ್ದಾಗಿ ಸಿಎಂ ಹೇಳಿಕೆ ನೀಡಿದ್ದಾರೆ.

ನಮ್ಮದು ರಾಜಮಾರ್ಗ, ತಂತ್ರ ವಿಪಕ್ಷಗಳಿಗೆ ಬಿಟ್ಟ ವಿಷಯ...
ತಾವು ರಾಜಮಾರ್ಗದಲ್ಲೇ ವಿಶ್ವಾಸಮತ ಯಾಚನೆ ಮಾಡುವುದಾಗಿ ಹೇಳಿಕೆ ನೀಡಿರುವ ಯಡಿಯೂರಪ್ಪ, ತಂತ್ರ-ಪ್ರತಿತಂತ್ರಗಳೇನಿದ್ದರೂ ಕಾಂಗ್ರೆಸ್-ಜೆಡಿಎಸ್‌ಗೆ ಬಿಟ್ಟ ವಿಷಯ. ನಾಲ್ಕು ದಿನಗಳ ಅಂತರದಲ್ಲಿ ಎರಡನೇ ಬಾರಿ ವಿಶ್ವಾಸಮತ ಗೆಲ್ಲುವ ಮೂಲಕ ನಾವು ಹೊಸ ಇತಿಹಾಸ ಸೃಷ್ಟಿಸಲಿದ್ದೇವೆ ಎಂದು ಹೇಳಿದ್ದಾರೆ.

ಈ ಮಧ್ಯೆ, ಸರಕಾರಕ್ಕೆ ಕೈಕೊಟ್ಟ ಪಕ್ಷೇತರರ ಪರಿಸ್ಥಿತಿಯೇ ಡೋಲಾಯಮಾನವಾಗಿದ್ದು, ಅವರ ಭವಿಷ್ಯ ಹೈಕೋರ್ಟ್ ಕೈಯಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ