ಚಿಕ್ಕಬಳ್ಳಾಪುರ, ಬುಧವಾರ, 13 ಅಕ್ಟೋಬರ್ 2010( 12:55 IST )
'ನಾನೊಬ್ಬ ಜನಪ್ರತಿನಿಧಿ, ಜನ ನನ್ನನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದಾರೆ. ಕಾನೂನುಬದ್ಧವಾಗಿ ನಡೆಯುತ್ತಿದ್ದ ಸಭೆಗೆ ಪ್ರವೇಶಿಸುತ್ತಿದ್ದಾಗ ತಡೆಯಲು ಮಾರ್ಷಲ್ ಯಾರು? ಆತ ತಡೆದ ಅದಕ್ಕೇ ಒಂದು ಇಕ್ಕಿದೆ' ಹೀಗೆ ಮಾರ್ಷಲ್‌ಗೆ ಕಪಾಳಮೋಕ್ಷ ಮಾಡಿದ್ದನ್ನು ಸಮರ್ಥಿಸಿಕೊಂಡವರು ಚಿಕ್ಕಬಳ್ಳಾಪುರ ಜೆಡಿಎಸ್ ಶಾಸಕ ಕೆ.ಪಿ.ಬಚ್ಚೇಗೌಡ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ನಾವು ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಅಧಿವೇಶನಕ್ಕೆ ತೆರಳುತ್ತಿದ್ದಂತೆ ಮಾರ್ಷಲ್‌ಗಳು ತಡೆದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಶಾಸಕನಾಗಿ ಒಳ ಪ್ರವೇಶಿಸಿದ ಮೇಲೂ ತಮ್ಮನ್ನು ತಡೆದ ಆಗ ಕ್ರಮ ಅನಿವಾರ್ಯವಾಯಿತು' ಎಂದು ಬಚ್ಚೇಗೌಡ ಹೇಳಿದರು.
ಸೋಮವಾರ ವಿಧಾನಸೌಧದೊಳಗೆ ನಡೆದ ಘಟನೆ ಅತ್ಯಂತ ನಾಚಿಕಗೇಡು. ಧ್ವನಿಮತವನ್ನೂ ಕೇಳದೆ ಸರಕಾರ ವಿಶ್ವಾಸ ಮತ ಗೆದ್ದಿದೆ ಎಂದು ಸ್ಪೀಕರ್ ಘೋಷಿಸಿರುವುದು ಸಂವಿಧಾನಬಾಹಿರ. ಜನರಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳ ಮೇಲೆ ಮಾರ್ಷಲ್‌ಗಳಿಂದ ಹಲ್ಲೆ ನಡೆಸಿದ್ದು ಸರಕಾರದ ಹೀನ ಕೃತ್ಯ' ಎಂದರು.