ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೊಸ ವಿಶ್ವಾಸ ಮತ: ಯಾರಿಗೆ ಎಷ್ಟು ಮತ? (BJP | Congress | JDS | Karnataka Crisis | Trust Vote | Yaddyurappa | 2nd Trust Vote)
2ನೇ ಬಾರಿಯ ವಿಶ್ವಾಸಮತ ಯಾಚನೆ ವೇಳೆ ಸ್ಪೀಕರ್‌ರಿಂದ ಅನರ್ಹರು ಎಂದು ತೀರ್ಪು ಪಡೆದಿರುವ ಐದು ಮಂದಿ ಪಕ್ಷೇತರರು ಭಾಗವಹಿಸುವಂತಿಲ್ಲ ಎಂಬ ಹೈಕೋರ್ಟ್ ತೀರ್ಪಿನ ಬಳಿಕ, ಗುರುವಾರದ ವಿಶ್ವಾಸ ಮತಕ್ಕೆ ಹೊಸ ಸಮೀಕರಣ ಬಂದಿದ್ದು, ಬಿಜೆಪಿಯ ವಿಶ್ವಾಸಕ್ಕೆ ಬಲ ಬಂದಿದೆ.
ಇದೀಗ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಕೂಡ ಜೆಡಿಎಸ್-ಕಾಂಗ್ರೆಸ್ ಪಾಳಯದಿಂದ ಮರಳಿ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಲೆಕ್ಕಾಚಾರ ಇಂತಿದೆ:
ಐವರು ಪಕ್ಷೇತರರೊಂದಿಗೆ 11 ಮಂದಿ ಬಂಡಾಯ ಬಿಜೆಪಿ ಶಾಸಕರೂ (ಒಟ್ಟು 16 ಮಂದಿ) ಮತದಾನದಲ್ಲಿ ಭಾಗವಹಿಸುವಂತಿಲ್ಲ. ಹೀಗಾಗಿ ಇದೀಗ ಸದನದ ಒಟ್ಟು ಸಂಖ್ಯಾಬಲವೆಂದರೆ 224 - 16 = 208. ಬಹುಮತ ಸಾಬೀತಿಗೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 105.
ಬಿಜೆಪಿ ಪರ - 107 ಬಿಜೆಪಿ ಶಾಸಕರು 105 + 1 ( 1 ಅಂದರೆ ಸ್ಪೀಕರ್ ಮತ - ಸಮಬಲ ಬಂದರೆ ಮಾತ್ರ ಸ್ಪೀಕರ್ ಮತ ಚಲಾಯಿಸಬಹುದು) ಬಿಜೆಪಿ ಪರ ಪಕ್ಷೇತರ - 1 ಹೀಗಾಗಿ ಬಿಜೆಪಿ ಸರಕಾರಕ್ಕಿರುವ ಬಲ = 106+1= 107
ಪ್ರತಿಪಕ್ಷಗಳ ಪರ - 101 ಕಾಂಗ್ರೆಸ್ - 73 ಜೆಡಿಎಸ್ - 28
ಅ.18ರಂದು ಕೋರ್ಟ್ ತೀರ್ಪು ಪಕ್ಷೇತರರ ಪರವಾಗಿ ಬಂದರೆ... ವಿಶ್ವಾಸ ಮತ ಸಾಬೀತಾಗಿ ಬಿಜೆಪಿ ಗೆದ್ದು, ಒಂದೊಮ್ಮೆ ಹೈಕೋರ್ಟು ತೀರ್ಪು ಪಕ್ಷೇತರರ ಪರವಾಗಿ ಬಂದಲ್ಲಿ, ವಿಶ್ವಾಸಮತವು ಹೈಕೋರ್ಟ್ ತೀರ್ಪಿಗೆ ಬಾಧ್ಯ ಎಂದು ಹೇಳಿರುವುದರಿಂದ, ಈ ಐವರನ್ನು ಸೇರಿಸಿದರೆ, ಸದನದ ಸಂಖ್ಯಾಬಲ 208+5= 213.
ಹೀಗಾದಲ್ಲಿ ಬಹುಮತಕ್ಕೆ ಬೇಕಾದ ಸಂಖ್ಯೆ 107.
5 ಪಕ್ಷೇತರರು ಕಾಂಗ್ರೆಸ್-ಜೆಡಿಎಸ್ ಪರವಾಗಿ ಮತ ಹಾಕಿದರೆ 101+5=106. ಬಿಜೆಪಿ ಕೂಡ ಈಗ ಇದ್ದಂತೆಯೇ ಇದ್ದರೆ ಅದರ ಬಲ 106 ಅಂದರೆ ಟೈ ಆಯಿತು. ಈಗ ಸ್ಪೀಕರ್ ಮತ ಬಿಜೆಪಿ ಪರವಾಗಿ ಬಂದರೆ, 107 ಆಗುತ್ತದೆ.
ಬಿಜೆಪಿ ಕೂದಲೆಳೆ ಅಂತರದಲ್ಲಿ ಪಾರಾಗಬಹುದು (ಷರತ್ತುಗಳು ಅನ್ವಯ * ವರ್ತೂರು ಪ್ರಕಾಶ್ ಮಗದೊಮ್ಮೆ ನಿಷ್ಠೆ ಬದಲಿಸದೇ ಹೋದರೆ ಹಾಗೂ ಬೇರಾವುದೇ ಶಾಸಕರು ಕಪ್ಪೆ ನೆಗೆತ ಮಾಡದೇ ಇದ್ದರೆ ಮಾತ್ರ)
ಇನ್ನೂ ಒಂದು ಕುತೂಹಲದ ಅಂಶವೆಂದರೆ, ಬಿಜೆಪಿಯಿಂದ ಪ್ರತಿಪಕ್ಷಗಳತ್ತ ಹೋಗಿ ನಾಪತ್ತೆಯಾಗಿದ್ದ ಮಾನಪ್ಪ ವಜ್ಜಲ್ ಅತ್ತ ಕಡೆ ಹೋದರೆಂದಾದರೆ, ಜೆಡಿಎಸ್‌ನಿಂದ ನಾಪತ್ತೆಯಾಗಿರುವ ಅಶ್ವತ್ಥ್ ಅವರು ಇತ್ತ ಕಡೆ ಬರುತ್ತಾರೆಂದಾದರೆ, ಸಂಖ್ಯಾಬಲಕ್ಕೇನೂ ವ್ಯತ್ಯಾಸವಾಗುವುದಿಲ್ಲ. ಹೀಗಾಗಿ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ.