ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರವು ಇಂದು ಎರಡನೇ ವಿಶ್ವಾಸ ಮತದ ಅಗ್ನಿ ಪರೀಕ್ಷೆಯನ್ನೂ ಯಶಸ್ವಿಯಾಗಿ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ನಡೆಸಿದ ಮತ್ತು ನಡೆಸುತ್ತಿರುವ ಕಸರತ್ತುಗಳು ಮತ್ತು ರಾಜಕೀಯ ಬೆಳವಣಿಗೆಗಳು ಕುತೂಹಲ ಹುಟ್ಟಿಸಿವೆ.
ಇದರ ಕ್ಷಣ-ಕ್ಷಣದ ಮಾಹಿತಿಗಳು ಹೀಗಿವೆ. (ಕೆಳಗಿನಿಂದ ಮೇಲಕ್ಕೆ):
01.12: ಅಪ್ಪ-ಮಕ್ಕಳು ಇನ್ನಾದರೂ ಕುತಂತ್ರ ರಾಜಕಾರಣ ಬಿಡಿ - ಯಡಿಯೂರಪ್ಪ 01.11: ಸರಕಾರಕ್ಕೆ ಮತ್ತೆ ಸಂಕಷ್ಟ ಎದುರಾಗಲಿದೆ - ಜೆಡಿಎಸ್. 01.11: ಫೈನಲ್ ಮುಂದೆ ನಡೆಯಬೇಕಿದೆ, ಕಾದು ನೋಡಿ - ರೇವಣ್ಣ. 01.11: ಸರಕಾರಕ್ಕಿದು ಕೇವಲ ಸೆಮಿಫೈನಲ್- ಎಚ್.ಡಿ. ರೇವಣ್ಣ. 12.56: ವಿಶ್ವಾಸ ಮತ ಯಾಚಿಸಿದ ಬಗ್ಗೆ ಭಾರದ್ವಾಜ್‌ಗೆ ಯಡಿಯೂರಪ್ಪ ಮಾಹಿತಿ. 12.56: ರಾಜ್ಯಪಾಲರ ಭೇಟಿಗೆ ರಾಜಭವನದತ್ತ ಹೊರಟ ಮುಖ್ಯಮಂತ್ರಿ. 12.55: ಮುಂದಿನ ರಾಜಕೀಯ ತಂತ್ರಗಳ ಬಗ್ಗೆ ಅಪ್ಪ-ಮಗ ಚರ್ಚೆ. 12.55: ಈಗಲ್‌ಟನ್ ರೆಸಾರ್ಟಿನಲ್ಲಿ ಎಚ್.ಡಿ. ದೇವೇಗೌಡ- ಕುಮಾರಸ್ವಾಮಿ ಭೇಟಿ 12.45: ವಿಧಾನ ಸಭಾಧ್ಯಕ್ಷರನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. - ಎಚ್‌ಡಿಕೆ. 12.45: ರಾಜ್ಯ ಬಿಜೆಪಿಗಿದು ಕೇವಲ ತಾತ್ಕಾಲಿಕ ಗೆಲುವು: ಎಚ್.ಡಿ. ಕುಮಾರಸ್ವಾಮಿ. 12.43: ಪಕ್ಷೇತರರ ವಜಾ ಸಂವಿಧಾನ-ಕಾನೂನು ಬಾಹಿರ - ಸಿದ್ದು. 12.43: ಸರಕಾರದ ವಿರುದ್ಧ ಕಾಂಗ್ರೆಸ್-ಜೆಡಿಎಸ್ ವಾಗ್ದಾಳಿ. 12.43: ವಿಧಾನಸೌಧದಲ್ಲಿ ಸಿದ್ದು-ರೇವಣ್ಣ ಜಂಟಿ ಪತ್ರಿಕಾಗೋಷ್ಠಿ. 12.40: ಸರಕಾರ ಸುಭದ್ರವಾಗಿದೆ - ಯಡಿಯೂರಪ್ಪ 12.40: ಮೂರು ದಿನದೊಳಗೆ ಎರಡು ಬಾರಿ ವಿಶ್ವಾಸ ಮತ ಯಾಚಿಸಿದ್ದು ಇತಿಹಾಸ. 12.40: ಜನತೆ ಈ ಕರಾಳ ಘಟನೆಯನ್ನು ಮರೆಯಬೇಕು. 12.40: ಅ.11ರ ಘಟನೆಯಿಂದ ತೀವ್ರ ನೋವಾಗಿದೆ. 12.40: ಇದು ರಾಜ್ಯದ ಜನತೆಗೆ, ಪ್ರಜಾತಂತ್ರಕ್ಕೆ ಸಿಕ್ಕ ಜಯ- ಸಿಎಂ. 12.40: ವಿಶ್ವಾಸ ಮತ ಗೆದ್ದ ನಂತರ ಯಡಿಯೂರಪ್ಪ ಪತ್ರಿಕಾಗೋಷ್ಠಿ 12.40: ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ- ಜೆಡಿಎಸ್ 12.40: ರಾಜ್ಯ ಸರಕಾರವನ್ನು ವಜಾಗೊಳಿಸಲು ರೇವಣ್ಣ ಒತ್ತಾಯ. 12.30: ವಿಶ್ವಾಸ ಮತಕ್ಕೆ ಗೈರು ಹಾಜರಾದದ್ದು ಪಕ್ಷ ವಿರೋಧಿ ಚಟುವಟಿಕೆ-ಬಿಜೆಪಿ 12.30: ಬಿಜೆಪಿ ಶಾಸಕ ವಜ್ಜಲ್ ಅವರಿಂದ ಪಕ್ಷ ವಿರೋಧಿ ಚಟುವಟಿಕೆ 12.30: ಬಿಜೆಪಿಯು ಅಶಿಸ್ತನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. 12.30: ವಿಶ್ವಾಸ ಮತ ಸಾಬೀತು ಸಂದರ್ಭದಲ್ಲೂ ಕಲಾಪಕ್ಕೆ ಬಂದಿಲ್ಲ. 12.30: ವಜ್ಜಲ್ ಬಿಜೆಪಿಯ ಎರಡೆರಡು ವಿಪ್ ಸ್ವೀಕರಿಸಿಲ್ಲ 12.30: ಬಿಜೆಪಿ ಮುಖ್ಯ ಸಚೇತಕ ಜೀವರಾಜ್ ಸ್ಪೀಕರ್‌ಗೆ ಅರ್ಜಿ 12.30: ಶಾಸಕ ಮಾನಪ್ಪ ವಜ್ಜಲ್ ಅನರ್ಹತೆಗೆ ಬಿಜೆಪಿ ಮನವಿ 11.50: ಸ್ಪೀಕರ್ ಕ್ರಮಕ್ಕೆ ಜೆಡಿಎಸ್ ತೀವ್ರ ಖಂಡನೆ. 11.50: ವಿಶ್ವಾಸ ಮತ ಫಲಿತಾಂಶ ಪ್ರಕಟಣೆಗೆ ಜೆಡಿಎಸ್ ಅಸಮಾಧಾನ. 11.49: ಮತ್ತೆ ರೆಸಾರ್ಟ್‌ನತ್ತ ಬಸ್ಸುಗಳಲ್ಲಿ ತೆರಳಿದ ಬಿಜೆಪಿ ಶಾಸಕರು. 11.47: ವಿಧಾನ ಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಶಾಸಕಾಂಗ ಸಭೆ. 11.45: ಬಿಜೆಪಿ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ರಮ. 11.45: ಬಿಜೆಪಿ ಶಾಸಕ-ಸಚಿವರಿಂದ ಹರ್ಷೋದ್ಗಾರ. 11.44: ಸ್ಪೀಕರ್ ಬೋಪಯ್ಯ ಅವರ ಮತವನ್ನು ಪರಿಗಣಿಸಲಾಗಿಲ್ಲ. 11.43: ಅನರ್ಹ ಪಕ್ಷೇತರರು ಅರ್ಹರಾದರೆ ಸರಕಾರದ ವಿರೋಧಿಗಳ ಸಂಖ್ಯೆ 105ಕ್ಕೇರುತ್ತದೆ. 11.42: ಅನರ್ಹ ಪಕ್ಷೇತರರು ಅರ್ಹರೆಂದು ಕೋರ್ಟ್ ತೀರ್ಪು ನೀಡಿದರೂ ಸರಕಾರಕ್ಕೆ ಧಕ್ಕೆಯಿಲ್ಲ. 11.38: ಜೆಡಿಎಸ್ 27 + ಕಾಂಗ್ರೆಸ್ 73 = 100 11.38: ಸದನದಲ್ಲಿದ್ದ ಬಿಜೆಪಿ ಶಾಸಕರು 105+ ಪಕ್ಷೇತರ ಪ್ರಕಾಶ್ ವರ್ತೂರು = 106 11.38: ಬಹುಮತ ಸಾಬೀತಿಗೆ 104 ಮತ ಬೇಕಾಗಿತ್ತು. 11.38: ಸದನದ ಒಟ್ಟು ಸದಸ್ಯರ ಸಂಖ್ಯೆ 206ಕ್ಕೆ ಇಳಿಕೆ. 11.38: ಬಿಜೆಪಿ ಮತ್ತು ಜೆಡಿಎಸ್‌ನ ತಲಾ ಒಬ್ಬರು ಸದಸ್ಯರು ಗೈರು. 11.38: ಸದನದ ಒಟ್ಟು ಸದಸ್ಯರ ಸಂಖ್ಯೆ 208ಕ್ಕೆ ಇಳಿಕೆ. 11.38: ಅನರ್ಹಗೊಂಡ ಒಟ್ಟು ಶಾಸಕರು 16. 11.38: ಸದನದ ಒಟ್ಟು ಸ್ಥಾನಗಳು 224. 11.36: ಎರಡನೇ ಬಾರಿಯೂ ವಿಶ್ವಾಸ ಮತ ಗೆದ್ದ ಬಿಜೆಪಿ ಸರಕಾರ. 11.35: ವಿಶ್ವಾಸ ಮತ ಸಾಬೀತುಪಡಿಸಿದ ಯಡಿಯೂರಪ್ಪ. 11.34: ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸ್ಪೀಕರ್. 11.33: ವಿಶ್ವಾಸ ಮತ ಅಂಗೀಕಾರವಾಗಿದೆ - ಸ್ಪೀಕರ್ ಪ್ರಕಟಣೆ. 11.33: ಸರಕಾರದ ಪರವಾಗಿ 106, ಸರಕಾರದ ವಿರೋಧವಾಗಿ 100 ಮತಗಳು. 11.32: ಪ್ರತಿಪಕ್ಷಗಳ ಆಕ್ಷೇಪವನ್ನು ಲೆಕ್ಕಿಸದೆ ಫಲಿತಾಂಶ ಪ್ರಕಟಿಸಿದ ಸ್ಪೀಕರ್. 11.32: ಪ್ರಕರಣ ಕೋರ್ಟಿನಲ್ಲಿರುವುದರಿಂದ ಫಲಿತಾಂಶ ಪ್ರಕಟಿಸುವುದು ಸರಿಯಲ್ಲ. 11.32: ಫಲಿತಾಂಶ ಪ್ರಕಟಣೆಗೆ ಪ್ರತಿಪಕ್ಷಗಳ ಆಕ್ಷೇಪ. 11.31: ಶಾಸಕರ ತಲೆ ಎಣಿಕೆ ಮುಕ್ತಾಯ. 11.30: ಮುಖ್ಯಮಂತ್ರಿ ಯಡಿಯೂರಪ್ಪ ಮುಖದಲ್ಲಿ ಮಂದಹಾಸ. 11.26: ಸರಕಾರಕ್ಕೆ ಬೆಂಬಲ ನೀಡದ ಶಾಸಕರ ತಲೆ ಎಣಿಕೆ ಆರಂಭ. 11.26: ಮತ ಯಾಚನೆಗೆ ಇಲ್ಲ ಎನ್ನುವ ಶಾಸಕರು ಎದ್ದು ನಿಲ್ಲಿ- ಸ್ಪೀಕರ್ 11.26: ಸರಕಾರಕ್ಕೆ ಬೆಂಬಲ ಇಲ್ಲ ಎನ್ನುವ ಶಾಸಕರ ತಲೆ ಎಣಿಕೆಗೆ ಸ್ಪೀಕರ್ ಸೂಚನೆ 11.25: ಸರಕಾರದ ಬೆಂಬಲಿಗ ಶಾಸಕರ ತಲೆ ಎಣಿಕೆ ಮುಕ್ತಾಯ. 11.22: ಸದನದಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಿರುವ ಸಿದ್ದರಾಮಯ್ಯ 11.22: ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಗೈರು. 11.21: ನಿಮಗೆ ಪ್ರತ್ಯೇಕವಾಗಿ ಕೈ ಎತ್ತಿ ತೋರಿಸುವುದು ಸಾಧ್ಯವಿಲ್ಲ - ಸ್ಪೀಕರ್ 11.21: ಕೆಲವರು ಕೈ ಎತ್ತಿಲ್ಲ, ಎದ್ದು ನಿಂತಿಲ್ಲ - ಸಿದ್ದು ಆಕ್ಷೇಪ. 11.21: ಪ್ರತಿಪಕ್ಷಗಳು ಗದ್ದಲ ಮಾಡಬಾರದು, ಮತ ಎಣಿಕೆಗೆ ಅವಕಾಶ ನೀಡಿ- ಸ್ಪೀಕರ್ 11.20: ಜೆಡಿಎಸ್ ಚೆನ್ನಪಟ್ಟಣ ಶಾಸಕ ಅಶ್ವತ್ಥ್ ಸದನಕ್ಕೆ ಗೈರು. 11.19: ರೇವಣ್ಣರಿಂದಲೂ ಶಾಸಕರ ತಲೆ ಎಣಿಕೆ, ಚೀಟಿಯಲ್ಲಿ ನೋಟ್. 11.19: ಅಧಿಕಾರಿಗಳಿಂದ ಸರಕಾರದ ಬೆಂಬಲಿಗ ಶಾಸಕರ ತಲೆ ಎಣಿಕೆ ಆರಂಭ. 11.18: ಇಲ್ಲ ಎಂದು ಉತ್ತರಿಸಿದ ಸ್ಪೀಕರ್ 11.18: ವಿಧಾನ ಪರಿಷತ್ ಸದಸ್ಯರು ಇಲ್ಲಿ ಇದ್ದಾರೆಯೇ?: ಸಿದ್ದು ಪ್ರಶ್ನೆ. 11.18: ಸರಕಾರವನ್ನು ಬೆಂಬಲಿಸುವವರು ಎದ್ದು ನಿಲ್ಲಿ - ಸ್ಪೀಕರ್ ಸೂಚನೆ. 11.17: ಮತ ಎಣಿಕೆ ಆರಂಭ - ಸ್ಪೀಕರ್ ಘೋಷಣೆ. 11.17: ಅವರು ಆರೋಗ್ಯವಾಗಿದ್ದಾರೆ, ಮಾನಸಿಕ ಸ್ಥಿತಿ ಉತ್ತಮವಾಗಿದೆ: ಸ್ಪೀಕರ್ ಸ್ಪಷ್ಟನೆ 11.16: ಅಸ್ವಸ್ಥ ಬಿಜೆಪಿ ಶಾಸಕ ಈಶಣ್ಣ ಅವರ ದೈಹಿಕ-ಮಾನಸಿಕ ಆರೋಗ್ಯ ಸರಿಯಿಲ್ಲ- ಸಿದ್ದು 11.15: ಪರ-ವಿರೋಧಿಗಳ ತಲೆ ಎಣಿಕೆಗೆ ಸ್ಪೀಕರ್ ಬೋಪಯ್ಯ ಆದೇಶ. 11.14: ವಿಧಾನಸಭೆಯ ಬಾಗಿಲು ಮುಚ್ಚುವಂತೆ ಆದೇಶಿಸಿದ ಸ್ಪೀಕರ್. 11.14: ಮತ ವಿಭಜನೆ ಮತ್ತು ತಲೆ ಎಣಿಕೆಗೆ ಒತ್ತಾಯಿಸಿದ ಪ್ರತಿಪಕ್ಷಗಳು. 11.13: ಚರ್ಚೆಗೆ ಅವಕಾಶ ನೀಡಬೇಕು - ಕಾಂಗ್ರೆಸ್, ಜೆಡಿಎಸ್ ಒತ್ತಾಯ. 11.12: ವಿಶ್ವಾಸಮತ ಯಾಚಿಸುತ್ತೇನೆ ಎಂದು ಪ್ರಸ್ತಾವನೆ ಮಂಡಿಸಿದ ಯಡಿಯೂರಪ್ಪ 11.12: ವಿಶ್ವಾಸ ಮತ ಮಂಡಿಸಲು ಮುಖ್ಯಮಂತ್ರಿಯವರಿಗೆ ಸ್ಪೀಕರ್ ಸೂಚನೆ 11.12: ಪ್ರತಿಪಕ್ಷದ ನಾಯಕ ಮನವಿಯನ್ನು ತಿರಸ್ಕರಿಸುತ್ತಿದ್ದೇನೆ- ಸ್ಪೀಕರ್ 11.11: ಎದ್ದು ನಿಂತು ಪ್ರತಿಭಟಿಸಿದ ಎಚ್.ಡಿ. ರೇವಣ್ಣ. 11.10: ಅನರ್ಹರ ಭವಿಷ್ಯ ನಿರ್ಧಾರವಾದ ನಂತರ ಬಹುಮತ ಸಾಬೀತಾಗಲಿ. 11.10: ಹಾಗಾಗಿ ವಿಶ್ವಾಸ ಮತ ಯಾಚನೆಯನ್ನು ಮುಂದಕ್ಕೆ ಹಾಕಿ - ಸಿದ್ದು ಮನವಿ. 11.10: ಕೋರ್ಟ್ ತೀರ್ಪಿನ ನಂತರ ಮತ್ತೆ ವಿಶ್ವಾಸ ಮತ ಕೇಳಬೇಕಾಗಬಹುದು. 11.09: ಪಕ್ಷೇತರ ಶಾಸಕರ ಹಕ್ಕುಗಳನ್ನು ನಿರಾಕರಿಸಲಾಗಿದೆ. 11.08: ಅನರ್ಹಗೊಂಡ ಪಕ್ಷೇತರರ ಹಕ್ಕುಗಳಿಗೆ ಚ್ಯುತಿಯಾಗಿದೆ. 11.06: ಸ್ಪೀಕರ್‌ಗೆ ಗೌರವ ಕೊಟ್ಟು ಸದನಕ್ಕೆ ಬಂದಿದ್ದೇವೆ. 11.05: 2ನೇ ಬಾರಿ ಬಹುಮತ ಸಾಬೀತು ಮಾಡಲು ಅವಕಾಶ ನೀಡಿದ್ದು ಇದೇ ಮೊದಲು. 11.03: ಅ.11ರಂದು ನಡೆದ ಕಲಾಪ ಸರಿಯಾಗಿರಲಿಲ್ಲ- ಪ್ರತಿಪಕ್ಷದ ನಾಯಕ. 11.02: ಕಲಾಪದಲ್ಲಿ ಭಾಗವಹಿಸಬೇಕೆಂಬ ಬಯಕೆಯಿಂದ ನಾವು ಬಂದಿದ್ದೆವು- ಸಿದ್ದು 11.02: ಪೊಲೀಸ್ ಬಂದಿದ್ದರಿಂದ ಮೊನ್ನೆ ಪ್ರತಿಭಟನೆ ಮಾಡಿದ್ದೆವು- ಸಿದ್ದು 11.01: ಆಡಳಿತ ಪಕ್ಷದವರು ಗಲಾಟೆ ಮಾಡಿದ್ರೂ ನಾವು ಗಲಾಟೆ ಮಾಡಲ್ಲ- ಸಿದ್ದು 11.01: ಇವತ್ತು ಗಲಾಟೆ ಮಾಡುವುದಿಲ್ಲ: ಸಿದ್ದರಾಮಯ್ಯ 11.01: ಸದನವನ್ನು ಉದ್ದೇಶಿಸಿ ಮಾತು ಆರಂಭಿಸಿದ ಸಿದ್ದರಾಮಯ್ಯ 11.00: ಸದನಕ್ಕೆ ಆಗಮಿಸಿದ ಸ್ಪೀಕರ್ ಕೆ.ಜಿ. ಬೋಪಯ್ಯ. 10.58: ಅಚ್ಚರಿಯ ಸಭ್ಯ ನಡತೆ ಪ್ರದರ್ಶಿಸುತ್ತಿರುವ ಪ್ರತಿಪಕ್ಷಗಳ ಶಾಸಕರು. 10.55: ವಿಧಾನಸಭೆಯ ಗಂಟೆ ಬಾರಿಸಿ ಕಲಾಪಕ್ಕೆ ಚಾಲನೆ. 10.53: ತೀವ್ರ ಅಸ್ವಸ್ಥ ಬಿಜೆಪಿ ಯಲಬುರ್ಗ ಶಾಸಕ ಈಶಣ್ಣ ಗುಳಗಣ್ಣವರ್ ಸ್ಟ್ರೆಚರ್‌ನಲ್ಲಿ ಸದನಕ್ಕೆ ಆಗಮನ 10.52: ವಿಶ್ವಾಸಮತ ಯಾಚನೆಗೆ ಕ್ಷಣ ಗಣನೆ ಆರಂಭ... 10.50: ಸದನದಲ್ಲಿದ್ದ ಬಿಎಸ್‌ವೈ ಪುತ್ರ, ಸಂಸದ ರಾಘವೇಂದ್ರ ಜೆಡಿಎಸ್ ವಿರೋಧದಿಂದಾಗಿ ಮೊಗಸಾಲೆಯಿಂದ ನಿರ್ಗಮನ 10.47: ಮುಖ್ಯಮಂತ್ರಿ ಯಡಿಯೂರಪ್ಪ ಮುಖದಲ್ಲಿ ಆತಂಕದ ಛಾಯೆ. 10.47: ಬಿಜೆಪಿಯ ಬಂಡಾಯ ಮತ್ತು ಪಕ್ಷೇತರ ಶಾಸಕರಿಗೆ ಅವಕಾಶವಿಲ್ಲ. 10.47: ಸದನ ಪ್ರವೇಶಿಸಿದ ಜೆಡಿಎಸ್ ಶಾಸಕರು. 10.46: ಮುಖ್ಯಮಂತ್ರಿ ಜತೆ ಸದನದಲ್ಲಿ ಜಗದೀಶ್ ಶೆಟ್ಟರ್ ಮಾತುಕತೆ. 10.46: ಹಾಜರಿ ಪುಸ್ತಕಕ್ಕೆ ಸಹಿ ಮಾಡಿದ ಜೆಡಿಎಸ್ ಶಾಸಕರು. 10.45: ಬಿಜೆಪಿಯಲ್ಲಿ 106, ಕಾಂಗ್ರೆಸ್‌ಗೆ 73, ಜೆಡಿಎಸ್‌ಗೆ 28 ಶಾಸಕರ ಬೆಂಬಲ ನಿರೀಕ್ಷೆ. 10.44: ವಿಶ್ವಾಸ ಮತದಲ್ಲಿ ಪಾಲ್ಗೊಳ್ಳುತ್ತೇವೆ- ಜೆಡಿಎಸ್ 10.43: ವಿಧಾನಸಭೆ ಕಲಾಪ ಆರಂಭಕ್ಕೆ ಕ್ಷಣಗಣನೆ. 10.43: ವಿಧಾನಸಭೆಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ. 10.42: ಕೊನೆಯ ಕ್ಷಣದವರೆಗೂ ಗೊಂದಲದಲ್ಲಿ ಮುಳುಗಿದ್ದ ಕಾಂಗ್ರೆಸ್ 10.42: ಕಾನೂನು ತೊಂದರೆಗಳಿರುವುದರಿಂದ ನಿರ್ಧಾರ ಬದಲಿಸಿದ ಕಾಂಗ್ರೆಸ್. 10.42: ವಿಶ್ವಾಸ ಮತ ಚಲಾಯಿಸುತ್ತೇವೆ: ಕಾಂಗ್ರೆಸ್ ನಿರ್ಧಾರ 10.41: ವಿಧಾನಸಭೆಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಭೆ. 10.41: ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ. 10.40: ನಮ್ಮ ಕಾರ್ಯತಂತ್ರವನ್ನು ಬಹಿರಂಗಪಡಿಸುವುದಿಲ್ಲ: ದೇಶಪಾಂಡೆ 10.40: ವಿಶ್ವಾಸ ಮತ ಯಾಚನೆಯಲ್ಲಿ ಭಾಗವಹಿಸುವ ಪ್ರಶ್ನೆಗಳಿಗೆ ಉತ್ತರಿಸದ ದೇಶಪಾಂಡೆ. 10.36: ಪಕ್ಷೇತರ ಶಾಸಕರ ಅನರ್ಹತೆ ಅಸಂವಿಧಾನಿಕ ಕ್ರಮ - ಪ್ರತಿಪಕ್ಷಗಳು. 10.36: ಪಕ್ಷೇತರ ಶಾಸಕರ ಅನರ್ಹತೆ ವಿಚಾರ ಕೋರ್ಟಲ್ಲಿರುವುದರಿಂದ ನಿರ್ಧಾರ. 10.36: ವಿಶ್ವಾಸ ಮತ ಚಲಾವಣೆ ಪ್ರಶ್ನೆಯೇ ಇಲ್ಲ- ಪ್ರತಿಪಕ್ಷಗಳು. 10.36: ವಿಧಾನಸಭಾ ಕಲಾಪದಲ್ಲಿ ಭಾಗವಹಿಸುತ್ತೇವೆ- ಜೆಡಿಎಸ್, ಕಾಂಗ್ರೆಸ್. 10.35: ವಿಧಾನಸಭೆಯಲ್ಲಿ ನೀರವ ಮೌನದ ವಾತಾವರಣ. 10.35: ಸದನದಲ್ಲಿ ತಮಗೆ ಮೀಸಲಾದ ಆಸನದಲ್ಲಿ ಆಸೀನರಾದ ಬಿಜೆಪಿ ಶಾಸಕರು. 10.33: ಸುಲಭ ಬಹುಮತದ ಮೂಲಕ ಜಯದ ನಿರೀಕ್ಷೆಯಲ್ಲಿ ಬಿಜೆಪಿ. 10.32: ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಬಂದ ಜೆಡಿಎಸ್ ಶಾಸಕರು. 10.31: ಸದನಕ್ಕೆ ಬಸ್ಸುಗಳಲ್ಲಿ ಆಗಮಿಸಿದ ಬಿಜೆಪಿ ಶಾಸಕರು. 10.30: ಪೊಲೀಸ್ ಸರ್ಪಗಾವಲಿನ ಬಗ್ಗೆ ತೀವ್ರ ಆಕ್ರೋಶ. 10.30: ರೋಷನ್ ಬೇಗ್ ಮತ್ತು ಬಿ.ಸಿ. ಪಾಟೀಲ್ ಅವರಿಂದ ಪ್ರತಿಭಟನೆ 10.00: ವಿಧಾಸಸಭೆಯತ್ತ ಕಾಂಗ್ರೆಸ್ ಶಾಸಕರ ದೌಡು. 09.35: ಸರಕಾರವನ್ನು ಸಂಕಷ್ಟದಿಂದ ರಕ್ಷಿಸುವಂತೆ ಸಿಎಂ ವಿಶೇಷ ಪ್ರಾರ್ಥನೆ. 09.30: ಗಾಳಿ ಆಂಜನೇಯ ದೇವಸ್ಥಾನ, ಸಾಯಿ ಮಂದಿರದಲ್ಲಿ ಮುಖ್ಯಮಂತ್ರಿಯಿಂದ ಪೂಜೆ. 09.00: ಚರ್ಚೆಯಲ್ಲಿ ಭಾಗವಹಿಸುತ್ತೇವೆ, ವಿಶ್ವಾಸ ಮತದ ಸಂದರ್ಭದಲ್ಲಿ ಬಹಿಷ್ಕಾರ- ಜೆಡಿಎಸ್ 09.00: ವಿಶ್ವಾಸ ಮತದಲ್ಲಿ ಪಾಲ್ಗೊಳ್ಳುವುದಿಲ್ಲ: ಜೆಡಿಎಸ್ 08.30: ಈ ಸಂಬಂಧ ಸ್ಪೀಕರ್‌ಗೆ ಮನವಿ ಮಾಡಲಿರುವ ಕಾಂಗ್ರೆಸ್ 08.30: ತಮ್ಮ 16 ಶಾಸಕರು ನಗರದ ಹೊರಗೆ ಇರುವುದರಿಂದ ಸಾಧ್ಯವಾಗುತ್ತಿಲ್ಲ-ಕಾಂಗ್ರೆಸ್ 08.30: ವಿಶ್ವಾಸ ಮತದಲ್ಲಿ ಪಾಲ್ಗೊಳ್ಳದೇ ಇರಲು ಕಾಂಗ್ರೆಸ್ ನಿರ್ಧಾರ. 08.00: ವಿಶ್ವಾಸ ಮತದಲ್ಲಿ ಆಡಳಿತ ಪಕ್ಷ ಗೆಲ್ಲುವ ಸಾಧ್ಯತೆಯಿರುವುದರಿಂದ ಪ್ರತಿಪಕ್ಷಗಳಿಂದ ತಂತ್ರ. 07.00: ಗೆಲುವಿನ ವಿಶ್ವಾಸದೊಂದಿಗೆ ಎರಡನೇ ಬಾರಿ ವಿಶ್ವಾಸ ಮತಕ್ಕೆ ಬಿಜೆಪಿ ಸಿದ್ಧತೆ