ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕುಲಾಂತರಿ ತಳಿಗೂ ರಾಜಕಾರಣಿಗೂ ವ್ಯತ್ಯಾಸವೇ ಇಲ್ಲ: ಪುಟ್ಟಣ್ಣಯ್ಯ (Puttannayya | Congress | Man mohan singh | JDS | BJP)
Bookmark and Share Feedback Print
 
ಕುಲಾಂತರಿ ತಳಿಗಳಿಗೂ ಇಂದಿನ ರಾಜಕಾರಣಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ವ್ಯಂಗ್ಯವಾಡಿದ್ದಾರೆ.

ನಗರದ ಬಸವೇಶ್ವರ ಸಭಾಂಗಣದಲ್ಲಿ ಕೃಷಿ ಕೈಗಾರಿಕಾ ಮೇಳದ ಅಂಗವಾಗಿ ಶ್ರೀ ಮುರುಘಾ ಮಠ ಆಯೋಜಿಸಿರುವ ಶರಣ ಸಂಸ್ಕೃತಿ ಉತ್ಸವದ ಮೊದಲ ದಿನ ಏರ್ಪಡಿಸಲಾಗಿದ್ದ 'ಕುಲಾಂತರಿ ತಳಿ-ರೈತ ಪರ ಚರ್ಚೆ ' ಕುರಿತು ಮಾತನಾಡಿದರು.

ದೇಶದ ಸಾರ್ವಭೌಮತ್ವ, ಆತ್ಮಗೌರವ, ಆಹಾರ ಸಂಸ್ಕೃತಿ, ಕೃಷಿ, ಕೈಗಾರಿಕೆ ಸಂಸ್ಕೃತಿ, ಸಮಾಜ ಚೆನ್ನಾಗಿರಬೇಕಾದರೆ ಬೀಜ ಸಂಸ್ಕೃತಿ ಉತ್ತಮವಾಗಿರುವುದು ಅಷ್ಟೇ ಮುಖ್ಯ ಎಂದರು.

ದೇಶದಲ್ಲಿ ಶೇ.73ರಷ್ಟು ರೈತರು ಕೃಷಿ ಅವಲಂಬಿತರಾಗಿದ್ದಾರೆ. ಅಮೆರಿಕದಲ್ಲಿ ಶೇ.2ರಷ್ಟು ಕೃಷಿಕರು ಮಾತ್ರ ಇದ್ದಾರೆ. ಆದರೂ ಜಗತ್ತಿಗೇ ಬಿತ್ತನೆ ಬೀಜ ಪೂರೈಸುತ್ತಿದ್ದಾರೆ. ಇದು ಭಾರತದ ಕೃಷಿ ವಿಜ್ಞಾನಿಗಳಿಗೆ ಅವಮಾನ. ದೇಶಿ ತಳಿಗಳ ಸಂಶೋಧನೆಗೆ ಒತ್ತು ಕೊಡಬೇಕು. ಅದನ್ನು ಬಿಟ್ಟು ಕುಲಾಂತರಿ ತಳಿಗಳನ್ನು ರೈತರ ಮೇಲೆ ಹೇರುವ ದುಷ್ಟ ಕೆಲಸಕ್ಕೆ ಕೈ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ದೇಶದಲ್ಲಿ ಕೃಷಿ ಉತ್ಪಾದನೆ ಹೆಚ್ಚಳಕ್ಕೆ ವಿಜ್ಞಾನಿಗಳು ಬಿಟಿ ಹತ್ತಿ, ಬದನೆ ಪ್ರಯೋಗ ಮಾಡುತ್ತಿದ್ದಾರೆ. ಬದನೆಯಲ್ಲಿ 70 ತಳಿಗಳಿವೆ. ವಿಜ್ಞಾನಿಗಳು ಇದರಲ್ಲಿ ಉತ್ಪನ್ನ ಹೆಚ್ಚಳಕ್ಕೆ ಏಕೆ ಪ್ರಯೋಗ ಮಾಡುತ್ತಿಲ್ಲ ? ಕೃಷಿ ವಿಶ್ವ ವಿದ್ಯಾಲಯಗಳು ಸಂಶೋಧನೆ ಮಾಡಿ ಹೈಬ್ರಿಡ್, ಕುಲಾಂತರಿ ತಳಿಗಳನ್ನು ಬಿಡುಗಡೆ ಮಾಡುತ್ತಿವೆ. ಇದರಿಂದ ಉತ್ಪಾದನೆ ಕುಸಿದು ಕೃಷಿ ಅಧೋಗತಿಗೆ ಬಂದು ನಿಲ್ಲುತ್ತಿದೆ. ಇದಕ್ಕೆ ಕಾರಣ ರಾಜಕೀಯ ಅಭದ್ರತೆ ಎಂದು ತಿಳಿಸಿದರು.

ದೇಶದಲ್ಲಿ ಈವರೆಗೂ 2 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಪ್ರಧಾನಿ ಡಾ.ಮನಮೋಹನ್ ಸಿಂಗ್‌ಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವು ದು ಏತಕ್ಕೆ ಎನ್ನುವುದೇ ತಿಳಿಯುತ್ತಿಲ್ಲವಂತೆ. ಮನಮೋಹನ್ ಸಿಂಗ್ ಆರ್ಥಿಕ ತಜ್ಞ ಎಂದು ಖ್ಯಾತಿ ಪಡೆದಿದ್ದಾರೆ. ಒಟ್ಟಾರೆ ಕೇಂದ್ರ ಸರಕಾರ ಉಳ್ಳವರ ಜೀವಕ್ಕೆ ಒಂದು ಬೆಲೆ, ಬಡವರ ಜೀವಕ್ಕೆ ಒಂದು ಬೆಲೆ ನಿಗದಿ ಪಡಿಸಿ ಕೃಷಿ ರಂಗಕ್ಕೆ ಕೊಡಲಿಪೆಟ್ಟು ನೀಡಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ