ಅಕ್ಟೋಬರ್ 14ರಂದು ಎರಡನೇ ಬಾರಿ ಸರಕಾರದ ಬಹುಮತ ಸಾಬೀತುಪಡಿಸಿರುವ ಮುಖ್ಯಮಂತ್ರಿ ಬಿ.ಎಯಸ್ ಯಡಿಯೂರಪ್ಪ, ಅಭಿವೃದ್ದಿಯೇ ಸರಕಾರದ ಮೂಲ ಮಂತ್ರ ಎಂದು ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಇತೀಚೆಗಿನ ಕೆಲವು ದಿನಗಳಿಂದ ಹಲವು ರಾಜಕೀಯ ವಿದ್ಯಮಾನಗಳು ನಡೆದಿವೆ. ಇದರಿಂದಾಗಿ ಅಭಿವೃದ್ಧಿ ಚಟುವಟಿಕೆಗಳಿಗೆ ಸ್ವಲ್ಪ ಹಿನ್ನೆಡೆಯುಂಟಾಗಿದೆ. ಆದರೆ ಇದೀಗ ಸರಕಾರ ಎರಡನೇ ಬಾರಿಗೆ ಬಹುಮತ ಸಾಬೀತುಪಡಿಸಿದೆ. ಸಚಿವರೆಲ್ಲಾ ವೇಗವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಲಿದ್ದಾರೆ. ಇದಕ್ಕೆಲ್ಲಾ ಪ್ರತಿಪಕ್ಷಗಳ ಸಹಕಾರವಿರುತ್ತದೆ ಎಂದು ಭಾವಿಸುತ್ತೇನೆ ಎಂದವರು ಹೇಳಿದರು.
ಬಹುಮತ ಸಾಬೀತುಪಡಿಸುವ ಮೂಲಕ ಜನಾದೇಶಕ್ಕೆ ಮನ್ನಣೆ ಸಿಕ್ಕಿದಂತಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಸೋಮವಾರ ನಡೆದ ಘಟನೆಯು ನೋವನ್ನುಂಟುಮಾಡಿದೆ. ಆದರೆ ರಾಜ್ಯಪಾಲರ ಸೂಚನೆಯಂತೆ ಮತ್ತೊಮ್ಮೆ ವಿಶ್ವಾಸಮತ ಯಾಚಿಸಬೇಕಾಯಿತು ಎಂದವರು ಹೇಳಿದರು.
ಸರಕಾರ ಉರುಳಿಸಲು ಯತ್ನಿಸಿದರವರಿಗೆ ಗೆಲವು ಲಭಿಸಿಲ್ಲ. ಇದರ ಹಿಂದೆ ದೊಡ್ಡ ಲಾಬಿಯೇ ಇದೆ. ಆದರೆ ಯಾವುದಕ್ಕೂ ನಾನು ಬೆದರುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ.
ಇಷ್ಟೆಲ್ಲಾ ಆದರೂ ಸರಕಾರದ ಸರಕಾರಕ್ಕೆ ಅಪಾಯ ತಪ್ಪಿಲ್ಲ. ಗುರುವಾರ ನಡೆಯುವ ವಿಶ್ವಾಸಮತ ಹೈಕೋರ್ಟ್ ತೀರ್ಪಿಗೆ ಒಳ್ಳಪಟ್ಟಿರುತ್ತದೆ ಎಂದು ಕೋರ್ಟ್ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಇದೀಗ ಪಕ್ಷೇತರರ ಅರ್ಜಿ ವಿಚಾರಣೆ ಅಕ್ಟೋಬರ್ 18 ಸೋಮವಾರ ನಡೆಯಲಿದೆ.
ಒಟ್ಟಿನಲ್ಲಿ ಕಳೆದ ತಿಂಗಳು ಸರಕಾರ ಕೈಗೊಂಡ ಸಂಪುಟ ಪುನರಾಚನೆಯೇ ಇಷ್ಟೆಲ್ಲಾ ರದ್ಧಾಂತಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಆರು ಸಚಿವ ಸ್ಥಾನಗಳು ತೆರವಾಗಿರುವುದರಿಂದ ಮತ್ತೊಮ್ಮೆ ಸರ್ಜರಿ ನಡೆಯುವುದು ಖಚಿತ. ಈ ಬಗ್ಗೆಯೂ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಮತ್ತೊಂದೆಡೆ ಸರಕಾರವನ್ನು ಉರುಳಿಸಿ ಪರ್ಯಾಯ ಸರಕಾರ ರಚನೆಯ ಬಗ್ಗೆಯ ಪ್ರತಿಪಕ್ಷಗಳ ಕನಸು ಭಗ್ನಗೊಂಡಿದೆ. ಆದರೂ ಯಡ್ಡಿ ಗೆಲುವು ಶಾಶ್ವತವಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.