ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಕ್ಕಟ್ಟಿನ ಹಿಂದೆ ವ್ಯವಸ್ಥಿತ ಸಂಚಿದೆ: ರಾಜಗೋಪಾಲ್ (Raj gopal | BJP | JDS | Yeddyurappa | Kumaraswamy)
Bookmark and Share Feedback Print
 
ಕರ್ನಾಟಕದ ರಾಜಕೀಯ ವಲಯದಲ್ಲಿ ತಲೆದೋರಿದ ಬಿಕ್ಕಟ್ಟಿನ ಹಿಂದೆ ವ್ಯವಸ್ಥಿತ ಸಂಚಿದೆ ಎಂದು ಕೇಂದ್ರದ ಮಾಜಿ ಸಚಿವ ಒ. ರಾಜಗೋಪಾಲ್ ಆರೋಪಿಸಿದ್ದಾರೆ.

ಬೋಫೋರ್ಸ್ ಹಗರಣದ ಆರೋಪಿಯಾಗಿರುವ ಇಟಲಿ ಉದ್ಯಮಿ ಕ್ವಟ್ರೋಚಿ ಅವರ ಪುತ್ರ ವಾರದ ಹಿಂದೆ ಬೆಂಗಳೂರಿನಲ್ಲಿ ತಂಗಿದ್ದು, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಪುತ್ರನೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂಬ ಕುರಿತು ಆರೋಪಗಳು ಕೇಳಿಬರುತ್ತಿದ್ದು, ಈ ಬಗ್ಗೆ ಕಾಂಗ್ರೆಸ್ ಉತ್ತರ ನೀಡಬೇಕು. ಈ ಕುರಿತು ಸಮಗ್ರ ತನಿಖೆ ನಡೆಯಲಿ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಲಹಾಬಾದ್ ಹೈಕೋರ್ಟ್ ನೀಡಿರುವ ಅಯೋಧ್ಯೆ ತೀರ್ಪನ್ನು ಎಡರಂಗ ಮಾತ್ರ ವಿರೋಧಿಸಿ ಹೇಳಿಕೆ ನೀಡುತ್ತಿರುವುದು ರಾಜಕೀಯ ಲಾಭದ ತಂತ್ರಗಾರಿಕೆ ಎಂದು ದೂರಿದ ಅವರು, ಸಮಾಜದ ಎಲ್ಲ ವಿಭಾಗದ ಮಂದಿ ತೀರ್ಪನ್ನು ಒಪ್ಪಿಕೊಂಡಿದ್ದಾರೆ. ತೀರ್ಪಿಗೆ ಮುನ್ನ ಗೌರವ ನೀಡುವುದಾಗಿ ಹೇಳಿಕೆ ನೀಡಿದವರು ಈಗ ಆಕ್ಷೇಪ ಎತ್ತುತ್ತಿರುವುದು ತಾರತಮ್ಯ ನೀತಿ. ಇದು ಖಂಡನೀಯ ಎಂದರು.

ಅಯೋಧ್ಯೆಯ ವಿವಾದಿತ ಜಾಗದಲ್ಲಿ ಬಾಬರಿ ಮಸೀದಿಯನ್ನು ಮರು ನಿರ್ಮಿಸಬೇಕೆಂದು ಐಕ್ಯರಂಗ ಮತ್ತು ಎಡರಂಗಗಳು ಹಿಂದೆ ಕೇರಳ ವಿಧಾನಸಭೆಯಲ್ಲಿ ಜಂಟಿ ನಿರ್ಣಯ ಮಂಡಿಸಿದ್ದವು. ಆದರೆ ಅಲಹಾಬಾದ್ ಹೈಕೋರ್ಟ್ ತೀರ್ಪು ಇದಕ್ಕೆ ವ್ಯತಿರಿಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ನಿಲುವು ತಪ್ಪೆಂದು ತೋರಿದರೆ ಉಭಯ ರಂಗಗಳು ಜನತೆಯ ಮುಂದೆ ಕ್ಷಮೆ ಕೋರಲಿ ಅಥವಾ ತಮ್ಮದು ಹಳೆಯ ನಿಲುವೇ ಎಂದಾದರೆ ಅದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ