ಬಿಜೆಪಿ ಬಹುಮತಕ್ಕೆ ದೆಹಲಿಯಲ್ಲಿ ಸಂಚು ರೂಪಿಸಲಾಗಿದ್ದು, ಬೆಂಗಳೂರಿನಲ್ಲಿ ಸೃಷ್ಟಿಸಲಾಗಿದೆ ಎಂದು ಸರಕಾರ ಬಹುಮತ ಸಾಬೀತುಪಡಿಸಿದ ಒಂದು ದಿನದ ನಂತರ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಕಳೆದುಕೊಂಡಿದ್ದರೂ,ಬಹುಮತವನ್ನು ಪಡೆಯಲು ಇತರ ಪಕ್ಷಗಳ ಸದಸ್ಯರನ್ನು ಸೆಳೆಯುವ ಪ್ರಯತ್ನ ಮಾಡುತ್ತಿರುವುದು ಪಕ್ಷ ಅಧೋಗತಿಗೆ ಇಳಿದಿದೆ ಎನ್ನುವುದು ಸಾಬೀತಾಗಿದೆ ಎಂದು ತಿವಾರಿ ಕಿಡಿಕಾರಿದ್ದಾರೆ.
ಬಿಜೆಪಿ ಪಕ್ಷಕ್ಕೆ ಅಧಿಕಾರಕ್ಕೆ ಮುಂದುವರಿಯಲು ಯಾವುದೇ ನೈತಿಕ ಅಧಿಕಾರವಿಲ್ಲ.ಬಹುಮತವನ್ನು ಹೊಂದಿಲ್ಲದಿದ್ದರೂ ಬಹುಮತವನ್ನು ಸೃಷ್ಠಿಸಲಾಗುತ್ತಿದೆ. ಹಣಬಲ, ಅಧಿಕಾರ ಬಲ ಹಾಗೂ ಜಾತಿಬಲವನ್ನು ಪ್ರಮುಖ ಗುರಿಯಾಗಿಸಿಕೊಂಡಿವೆ ಎಂದು ಟೀಕಿಸಿದರು.
ಬಿಜೆಪಿ 16 ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಿರುವುದು ಕಾನೂನುಭಾಹಿರವಾಗಿದೆ. ವಿಧಾನಸಭೆಯ ಸ್ಪೀಕರ್ ಅಡಿಳತ ಪಕ್ಷದ ಕೈಗೊಂಬೆಯಾಗಿ ವರ್ತಿಸಿ, ಪಕ್ಷಪಾತ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಮುಂಬರುವ ಕೆಲ ದಿನಗಳಲ್ಲಿ ಬಿಜೆಪಿ ಸರಕಾರ ಉರುಳುವುದು ಖಚಿತವಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಮನೀಶ್ ತಿವಾರಿ ಭವಿಷ್ಯ ನುಡಿದಿದ್ದಾರೆ