ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅದಿರು ರಫ್ತು ನಿಷೇಧ ಭಿನ್ನಮತಕ್ಕೆ ಕಾರಣ:ಅಶೋಕ್ (Iron ore Ban | Government | Cong | Jds)
Bookmark and Share Feedback Print
 
NRB
ರಾಜ್ಯ ಸರಕಾರ ಇತ್ತಿಚೆಗೆ ಅದಿರು ರಫ್ತು ನಿಷೇಧಿಸಿದ ಹಿನ್ನೆಲೆಯಲ್ಲಿ, ಪ್ರತಿ ಪಕ್ಷಗಳು ಭಿನ್ನಮತವನ್ನು ಸೃಷ್ಟಿಸಿ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ಸಂಚು ರೂಪಿಸಿವೆ ಎಂದು ಗೃಹ ಮತ್ತು ಸಾರಿಗೆ ಸಚಿವ ಆರ್‌.ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿನ ಸರಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷಗಳು ಹಣದ ಹೊಳೆಯನ್ನು ಹರಿಸುತ್ತಿವೆ. ದಣಿ ಲಾಬಿ ನಿರಂತರವಾಗಿ ಸರಕಾರವನ್ನು ಕಾಡುತ್ತಿದೆ.ಇಂತಹ ಶಕ್ತಿಗಳನ್ನು ಮಟ್ಟಹಾಕಲು ಸರಕಾರ ನಿರ್ಧರಿಸಿದೆ ಎಂದು ಕಿಡಿಕಾರಿದರು.

ದಸರಾ ಹಬ್ಬದ ಆಚರಣೆಯಲ್ಲಿ ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ವಿಚ್ಚಿದ್ರಕಾರಿ ಶಕ್ತಿಗಳನ್ನು ಮಟ್ಟಹಾಕಲಾಗುವುದು. ಜನಸಾಮಾನ್ಯರು ಯಾವುದೇ ರೀತಿಯ ಆತಂಕಪಡುವುದು ಬೇಡ ಎಂಗು ಭರವಸೆ ನೀಡಿದರು.

ದಸರಾ ಹಬ್ಬವನ್ನು ವೀಕ್ಷಿಸಲು ಮೈಸೂರಿಗೆ ತೆರಳು ಪ್ರವಾಸಿಗರಿಗೆ ವಿಶೇಷ ಬಸ್ ಸೌಲಭ್ಯಗಳನ್ನು ಒದಗಿಸಲಾಗಿದೆ.ಬೆಂಗಳೂರು-ತೀರ್ಥಹಳ್ಳಿ, ಬೆಂಗಳೂರು-ಸೋಮವಾರಪೇಟೆ ಸೇರಿದಂತೆ ಕೆಲ ದೂರದ ಮಾರ್ಗಗಳಿಗೆ ವೊಲ್ವೋ ಬಸ್ ಸೇವೆಯನ್ನು ಆರಂಭಿಸಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ