2008ರಲ್ಲಿ ನಡೆದ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ, ಕೇರಳ ಮತ್ತು ರಾಜಸ್ಥಾನದಿಂದ ಇಬ್ಬರು ಶಂಕಿತ ಲಷ್ಕರ್-ಎ.ತೊಯಿಬಾ ಸಂಘಟನೆಯ ಇಬ್ಬರು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಬಾಂಬ್‌ಸ್ಫೋಟ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಸಂಪೂರ್ಣ ವಿಚಾರಣೆ ನಡೆಸಿದ ನಂತರ ವಿವರಗಳು ಬಹಿರಂಗವಾಗಲಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಜ್ಮಿರ್‌ನಿಂದ ಉಮರ್ ಫಾರೂಕ್ ಎನ್ನುವ ಉಗ್ರನನ್ನು ಬಂಧಿಸಲಾಗಿದ್ದು, ಕಾಸರ್‌ಗೋಡ್ ಮೂಲದ ಇಬ್ರಾಹಿಂ ಮೌಲ್ವಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
ಎಲ್‌ಇಟಿ ಶಂಕಿತ 48 ವರ್ಷ ವಯಸ್ಸಿನ ಉಗ್ರ ಮೌಲ್ವಿಯನ್ನು ಕಾಸರ್‌ಗೋಡ್‌ನ ಬಡಿಯಡ್ಕ್ ಅರೆಪಟ್ಟಣದಲ್ಲಿ ಭಯೋತ್ಪಾದನಾ ನಿಗ್ರಹ ದಳ ಕಳೆದ ರಾತ್ರಿ ಬಂಧಿಸಲಾಗಿದೆ. ಕಳೆದ ಎರಡು ತಿಂಗಳುಗಳಿಂದ ಆರೋಪಿಗಳನ್ನು ಬಂಧಿಸಲು ಹಲವು ತಂಡಗಳನ್ನು ರೂಪಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.