ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಬಲವೃದ್ಧಿಗೆ ಆಪರೇಷನ್ ಕಮಲ ಅನಗತ್ಯ: ಯಡಿಯೂರಪ್ಪ (Operation Lotus | Karnataka | B S Yeddyurappa | BJP)
Bookmark and Share Feedback Print
 
ವಿಧಾನಸಭೆಯಲ್ಲಿ ಬಿಜೆಪಿಯ ಬಲವನ್ನು ವೃದ್ಧಿಸಲು ಮತ್ತೆ ಆಪರೇಷನ್ ಕಮಲ ನಡೆಸುವ ಅಗತ್ಯವಿಲ್ಲ ಎಂದು ಎರಡನೇ ಬಾರಿ ವಿಶ್ವಾಸ ಮತ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಅಕ್ಟೋಬರ್ 14ರಂದು ಸರಕಾರದ ಪರ 106 ಮತಗಳನ್ನು ಪಡೆದು ವಿಶ್ವಾಸ ಮತ ಸಾಬೀತುಪಡಿಸಿದ ಮುಖ್ಯಮಂತ್ರಿ ದಸರಾ ಕಾರ್ಯಕ್ರಮಗಳಿಗಾಗಿ ಮೈಸೂರಿಗೆ ಬಂದಿದ್ದು, ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಆಪರೇಷನ್ ಕಮಲದ ಅಗತ್ಯವಿಲ್ಲ ಎಂದಿದ್ದಾರೆ.

ಬಳ್ಳಾರಿ ಗಣಿ ರೆಡ್ಡಿಗಳು ತಮ್ಮಲ್ಲೊಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿದ್ದರು ಎಂಬ ವರದಿಗಳಿದ್ದವು. ಆದರೆ ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟವಾಗಿ ನಿರಾಕರಣೆ ತೋರಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, ನನ್ನ ಅಧಿಕಾರವಧಿಯಲ್ಲಿ ರಾಜ್ಯಕ್ಕೆ ಉಪ ಮುಖ್ಯಮಂತ್ರಿಯನ್ನು ನೇಮಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರೊಂದಿಗೆ ರೆಡ್ಡಿ ಪಾಳಯದಲ್ಲಿ ಮತ್ತಷ್ಟು ರಾಜಕೀಯ ವಿದ್ಯಮಾನಗಳು ಕಾಣಿಸಿಕೊಳ್ಳುವ ನಿರೀಕ್ಷೆಗಳಿವೆ ಎಂದು ಹೇಳಲಾಗುತ್ತಿದೆ.

ಪ್ರಸಕ್ತ ಬಿಜೆಪಿಯು ತನ್ನ 105 ಶಾಸಕರು ಹಾಗೂ ಪಕ್ಷೇತರ ವರ್ತೂರು ಪ್ರಕಾಶ್ ಅವರ ಬೆಂಬಲವನ್ನು ಪಡೆದುಕೊಂಡಿದೆ. ಅತ್ತ ಕಾಂಗ್ರೆಸ್ 73 ಹಾಗೂ ಜೆಡಿಎಸ್ 27ರ ಬಲವನ್ನಷ್ಟೇ ಹೊಂದಿದೆ.

ಬಿಜೆಪಿಯ ಮಾನಪ್ಪ ವಜ್ಜಲ್ ಮತ್ತು ಜೆಡಿಎಸ್‌ನ ಎಂ.ಸಿ. ಅಶ್ವಥ್ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸದನಕ್ಕೆ ಹಾಜರಾಗಿರಲಿಲ್ಲ. ಅವರಲ್ಲಿ ಅಶ್ವಥ್ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರ್ಪಡೆಯಾಗಲಿರುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ