ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳುವ ಅಗತ್ಯ ಇಲ್ಲ: ಖರ್ಗೆ (Mallikarjuna Kharhge | Bharadwaj | BJP | Congress)
Bookmark and Share Feedback Print
 
ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ವಾಪಸ್ ಕರೆಯಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

ಸಂವಿಧಾನದ ಅಡಿ ರಾಜ್ಯಪಾಲರು ಕೆಲಸ ನಿರ್ವಹಿಸುತ್ತಿದ್ದು, ಅವರಿಗೂ ಕಾನೂನು ಗೊತ್ತಿದೆ. ಆದರೆ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳಬೇಕೆಂದು ಬಿಜೆಪಿ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ಸದ್ಯಕ್ಕೆ ಅಂತಹ ಅಗತ್ಯ ಕಂಡುಬಂದಿಲ್ಲ ಎಂದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖರ್ಗೆ, ಬಿಜೆಪಿಯಲ್ಲೇ ಆಂತರಿಕ ಕಚ್ಚಾಟ ನಡೆದಿದೆ. ಅವರಲ್ಲೇ ಶಿಸ್ತು ಇಲ್ಲ. ಬಿಜೆಪಿ ಸಹೋದ್ಯೋಗಿಗಳೇ ಪಕ್ಷ ಬಿಟ್ಟು ಹೋಗಿದ್ದಾರೆ. ಇಷ್ಟೆಲ್ಲಾ ರಂಪಾಟದ ನಡುವೆ ರಾಜ್ಯಪಾಲರ ಮೇಲೆ ಗೂಬೆ ಕೂರಿಸುವುದು ತರವಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.

ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದ ರಾಜ್ಯಪಾಲರು ತಕ್ಷಣ ನಿರ್ಧಾರ ಬದಲಿಸಿ ಮತ್ತೆ ವಿಶ್ವಾಸ ಮತ ಯಾಚಿಸಲು ಮುಖ್ಯಮಂತ್ರಿಗೆ ಅವಕಾಶ ನೀಡಿದರು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ನಿರ್ದೇಶನವೇನಾದರೂ ಇತ್ತೆ ಎಂಬ ಪ್ರಶ್ನೆಗೆ ಅಂತಹ ಯಾವುದೇ ನಿರ್ದೇಶನ ಇರಲಿಲ್ಲ. ಕಾನೂನು ಅಡಿ ಅವರಿಗೆ ತೋಚಿದ್ದನ್ನು ಮಾಡಿದ್ದಾರೆ. ಹೀಗಾಗಿ ಕೇಂದ್ರ ಮಧ್ಯ ಪ್ರವೇಶಿಸುವ ಅಗತ್ಯವೂ ಇಲ್ಲ ಎಂದು ಸಮಜಾಯಿಷಿ ನೀಡಿದರು.

ರಾಜ್ಯದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಬಿಜೆಪಿ ಸರಕಾರ ಎಂಬ ಕೂಸು ಎಂದು ಹುಟ್ಟಿದೆಯೋ ಅಂದಿನಿಂದ ವಿಕಲಚೇತನವಾಗಿದೆ. ಹೀಗಾಗಿ ಈ ಸರಕಾರಕ್ಕೆ ಏನೂ ಮಾಡಲು ಆಗುತ್ತಿಲ್ಲ. ನೀರಾವರಿ, ರಸ್ತೆ-ಸೇತುವೆ, ಶಿಕ್ಷಣ, ಆರೋಗ್ಯ, ಸಂಪರ್ಕ ಹೀಗೆ ನಾನಾ ಹಂತದಲ್ಲಿ ಮೂಲಸೌಲಭ್ಯ ಕಲ್ಪಿಸಲು ಈ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ