ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಟೀಕಿಸುವುದಿಲ್ಲ, ಟೀಕೆಗೆ ಉತ್ತರಿಸುವುದೂ ಇಲ್ಲ: ಯಡಿಯೂರಪ್ಪ (BJP | Yeddyurappa | Mandya | KRS | Congress | JDS)
Bookmark and Share Feedback Print
 
'ಇನ್ನು ಮುಂದೆ ಪ್ರತಿಪಕ್ಷಗಳ ಮುಖಂಡರ ಟೀಕೆಗಳಿಗೆ ಉತ್ತರಿಸೋದಿಲ್ಲ. ಅವರನ್ನು ಟೀಕಿಸುವುದೂ ಇಲ್ಲ. ಇದು, ಕಾವೇರಿ ಮೇಲಾಣೆ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಪಥ ಮಾಡಿದ್ದಾರೆ.

ಕೆಆರ್ಎಸ್‌ನಲ್ಲಿ ಕಾವೇರಿ ಮಾತೆಗೆ ಸೋಮವಾರ ಪೂಜೆ ಮತ್ತು ಬಾಗಿನ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸುವಂತೆ ತಮ್ಮನ್ನು ಕೇಳಲೇಬೇಡಿ ಎಂದು ಮಾಧ್ಯಮಗಳಿಗೆ ತಾಕೀತು ಮಾಡಿದರು.

ಟೀಕೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಪ್ರತಿಪಕ್ಷದವರು ಅವರ ಕೆಲಸ ಮಾಡುತ್ತಾರೆ. ಅಧಿಕಾರಕ್ಕೆ ಬರಬೇಕೆಂದು ಅವರು ಪ್ರಯತ್ನಿಸುತ್ತಲೇ ಇರುತ್ತಾರೆ. ಅದು, ವಾಮ ಮಾರ್ಗದ ಬದಲು ರಾಜಮಾರ್ಗದಲ್ಲಿರಬೇಕಷ್ಟೇ ಎಂದು ಕಿವಿಮಾತು ಹೇಳಿದರು.

ಪ್ರತಿಪಕ್ಷಗಳ ಟೀಕೆಗೆ ಉತ್ತರಿಸುವುದು ಮತ್ತು ಅವರನ್ನು ಟೀಕಿಸುವುದರಿಂದ ಪ್ರಯೋಜನವಿಲ್ಲ. ತಮ್ಮ ಸರಕಾರ ಮಾಡಿರುವ ಸಾಧನೆ, ಮುಂದಿರುವ ಯೋಜನೆಗಳ ಬಗ್ಗೆ ಕಿರು ಹೊತ್ತಗೆ ಪ್ರಕಟಿಸಿ ಜನತೆಗೆ ತಲುಪಿಸುವ ಕೆಲಸ ಮಾಡುವೆ ಎಂದು ತಿಳಿಸಿದರು.

ಪ್ರತಿಪಕ್ಷಗಳ ಟೀಕೆಗೆ ಮಣಿದು ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳಿಂದ ವಿಮುಖವಾಗುವ ಪ್ರಶ್ನೆಯೇ ಇಲ್ಲ. ಉಳಿದಿರುವ ಎರಡೂವರೆ ವರ್ಷದ ಅಧಿಕಾರಾವಧಿಯಲ್ಲಿ ಒಳ್ಳೆಯ ಕೆಲಸ ಮಾಡಿ, ಮತ್ತೆ 5 ವರ್ಷದ ಅವಧಿಗೆ ಪಕ್ಷವನ್ನು ಅಧಿಕಾರಕ್ಕೆ ತರುವೆ ಎಂದರು. ಪ್ರತಿಪಕ್ಷಗಳ ಮುಖಂಡರ ಜತೆಗೆ ಮಾಧ್ಯಮಗಳ ನಿರಂತರ ಟೀಕೆ-ಟಿಪ್ಪಣಿಯಿಂದ ತಮ್ಮ ಮನಸ್ಸು ಜರ್ಜರಿತಗೊಂಡಿದೆ. ಪ್ರಾಮಾಣಿಕತೆ ಮತ್ತು ಮಾಡಿರುವ ಸಾಧನೆಗೆ ಬೆಲೆಯೇ ಇಲ್ಲವೇ ಎಂದು ಯಡಿಯೂರಪ್ಪ ಅವರು ಪತ್ರಕರ್ತರತ್ತ ಪ್ರಶ್ನೆ ಎಸೆದರು.
ಸಂಬಂಧಿತ ಮಾಹಿತಿ ಹುಡುಕಿ