ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸರಕಾರ ಸದಾ ಹಗರಣದಲ್ಲಿ ಮುಳುಗಿದೆ: ಮೋಟಮ್ಮ (BJP | Motamma | Yeddyurappa | Congress | JDS | Siddaramaiah)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಹಗರಣಗಳಲ್ಲೇ ಮುಳುಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕಿ ಮೊಟಮ್ಮ ಆರೋಪಿಸಿದ್ದಾರೆ.

ಮದ್ದೂರು ತಾಲೂಕು ಚಿಕ್ಕರಸಿನಕೆರೆಯ ಶ್ರೀ ಕಾಲಭೈರವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸೇರಿದಂತೆ ಸಚಿವರು ಮತ್ತವರ ಕುಟುಂಬದವರು ಅಕ್ರಮಗಳಲ್ಲಿ ತೊಡಗಿದ್ದಾರೆ. ಈ ಸರಕಾರ ಬೇಗನೆ ತೊಲಗಬೇಕು ಎಂದರು.

ಸರಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ವಾಮಮಾರ್ಗ ಹಿಡಿದಿದೆ. ಬಿಜೆಪಿ ಶಾಸಕರು ಅವರ ಮುಖ್ಯಮಂತ್ರಿ ಮತ್ತು ಪಕ್ಷದಲ್ಲಿನ ಧೋರಣೆ ಖಂಡಿಸಿ ಬೆಂಬಲ ವಾಪಸ್ ಪಡೆದಿದ್ದಾರೆ. ಆದರೆ, ಅವರನ್ನು ಬಿಜೆಪಿ ನಿಯಮ ಬಾಹಿರವಾಗಿ ಅನರ್ಹಗೊಳಿಸಿದೆ ಎಂದು ಟೀಕಿಸಿದರು.
ಆಪರೇಷನ್ ಕಮಲಕ್ಕೆ ತುತ್ತಾಗಿರುವ ಶಾಸಕರು ಈಗಾಗಲೇ ಪಶ್ಚತ್ತಾಪ ಪಡುತ್ತಿದ್ದಾರೆ. ಇನ್ನು ಮುಂದೆ ಆ ತಪ್ಪು ಮಾಡಲು ಯಾವುದೇ ಶಾಸಕರು ಸಿದ್ದವಿಲ್ಲ. ನಮ್ಮ ಪಕ್ಷದ ಶಾಸಕರು ಅಂತಹ ಯೋಚನೆ ಮಾಡಿಲ್ಲ ಎಂದು ಮೋಟಮ್ಮ ಪ್ರತಿಕ್ರಿಯಿಸಿದರು.

ರಾಜ್ಯ ಸರಕಾರವನ್ನು ಯಾರೂ ಪತನ ಮಾಡಬೇಕಿಲ್ಲ. ಅದಾಗಿಯೇ ಉರುಳಿ ಬೀಳಲಿದೆ. ನಮ್ಮ ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ಕೈಗೊಂಡರೂ ಅದಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಅವರು ಹೇಳಿದರು.

ಶಾಸಕರ ಅನರ್ಹತೆ ವಿಚಾರ ಹಾಗೂ ಬಹುಮತ ನಿರ್ಣಯ ಸಮಯದಲ್ಲಿ ಸ್ಪೀಕರ್ ನಡವಳಿಕೆಯು ಪಕ್ಕಾ ಬಿಜೆಪಿ ಏಜೆಂಟರಂತೆ ಇತ್ತು. ಸ್ಪೀಕರ್ ಬೋಪಯ್ಯ ಅವರು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಹರಿಹಾಯ್ದರು.
ಸಂಬಂಧಿತ ಮಾಹಿತಿ ಹುಡುಕಿ