ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅನರ್ಹತೆ ಪ್ರಕರಣ; ನ್ಯಾ.ಸಭಾಹಿತ್ ಅಂತಿಮ ತೀರ್ಪು ಏನಾಗಲಿದೆ? (High court | V.J.Sabhahith | BJP | Congress | JDS | Judgement)
Bookmark and Share Feedback Print
 
NRB
11 ಬಿಜೆಪಿ ಶಾಸಕರ ಅನರ್ಹತೆ ಪ್ರಕರಣದ ಕುರಿತು ಹೈಕೋರ್ಟ್ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲಿ ವಿಭಿನ್ನ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಅದನ್ನು ಮೂರನೇ ನ್ಯಾಯಮೂರ್ತಿಗೆ ವರ್ಗಾಯಿಸಿದ್ದು, ಇದೀಗ ಮೂರನೇ ನ್ಯಾ.ವಿ.ಜಿ.ಸಭಾಹಿತ್ ಅವರು ಬುಧವಾರ ನೀಡುವ ಅಂತಿಮ ತೀರ್ಪು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಯಾವುದೇ ಪ್ರಕರಣದಲ್ಲಿ ತೀರ್ಪು ನೀಡುವ ಸಂದರ್ಭದಲ್ಲಿ ಇಬ್ಬರು ನ್ಯಾಯಮೂರ್ತಿಗಳ ನಡುವೆ ಭಿನ್ನ ಅಭಿಪ್ರಾಯ ವ್ಯಕ್ತವಾದರೆ, ಆಗ ಅಂತಿಮ ತೀರ್ಪು ನೀಡುವ ಜವಾಬ್ದಾರಿಯನ್ನು ಮೂರನೇ ನ್ಯಾಯಮೂರ್ತಿಗೆ ನೀಡಲಾಗುತ್ತದೆ. ಆ ನಿಟ್ಟಿನಲ್ಲಿ 11 ಶಾಸಕರ ಅನರ್ಹತೆ ಪ್ರಕರಣದಲ್ಲಿ ಮೂರನೇ ನ್ಯಾಯಮೂರ್ತಿಯಾಗಿ ಸಭಾಹಿತ್ ಸೂಚಿಸಲ್ಪಟ್ಟಿದ್ದಾರೆ.

ಇದೀಗ 11 ಬಿಜೆಪಿ ಶಾಸಕರ ಅನರ್ಹತೆ ಪ್ರಕರಣದ ಬಗ್ಗೆ ಇಬ್ಬರು ನ್ಯಾಯಮೂರ್ತಿಗಳು ನೀಡಿದ ತೀರ್ಪು ಪರಿಶೀಲಿಸಿ ಈ ಪೈಕಿ ಒಂದು ತೀರ್ಪನ್ನು ಮೂರನೇ ನ್ಯಾಯಮೂರ್ತಿ ಒಪ್ಪಿ ನೀಡುವ ತೀರ್ಪು ಅಂತಿಮದ್ದಾಗಿರುತ್ತದೆ.

ಆದರೆ ಮೂರನೇ ನ್ಯಾಯಮೂರ್ತಿ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ನೀಡಿದ ತೀರ್ಪುಗಳಲ್ಲಿ ಒಂದನ್ನು ಒಪ್ಪಿಕೊಳ್ಳಬಹುದೇ ವಿನಃ ತಾವೇ ಅಂತಿಮ ತೀರ್ಪು ನೀಡಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಬುಧವಾರ ಸಭಾಹಿತ್ ಅವರು, ಮುಖ್ಯನ್ಯಾಯಮೂರ್ತಿ ಖೇಹರ್ ಅಥವಾ ನ್ಯಾ.ಎನ್.ಕುಮಾರ್ ಅವರು ನೀಡಿದ್ದ ತೀರ್ಪಿನಲ್ಲಿ ಯಾವುದಾದರು ಒಂದನ್ನು ಒಪ್ಪಿ ನೀಡುವ ಅಂತಿಮ ತೀರ್ಪು 11 ಶಾಸಕರ ಪಾಲಿಗೆ ವರವಾಗುತ್ತೋ ಇಲ್ಲವೇ ಮುಳುವಾಗುತ್ತೋ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ