ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶಾಸಕರನ್ನು ಸೆಳೆದರೆ 'ಕೈ' ಕತ್ತರಿಸುತ್ತೇವೆ: ದೇಶಪಾಂಡೆ ಕಿಡಿ (BJP | Siddaramaiah | Congress | Desh pandy | Yeddyurappa | Karnataka)
Bookmark and Share Feedback Print
 
ರಾಜ್ಯರಾಜಕಾರಣದಲ್ಲಿ ಶಾಸಕರ ಪಕ್ಷಾಂತರ, ಆಪರೇಷನ್ ಕಮಲದ ತಂತ್ರ ಮತ್ತೆ ಮುಂದುವರಿಯಲಿದೆ ಎಂಬ ಆತಂಕದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಕಂಗಾಲಾಗಿವೆ. ಮತ್ತೊಂದೆಡೆ ಜಗಳೂರು ಕಾಂಗ್ರೆಸ್ ಶಾಸಕ ರಾಮಚಂದ್ರ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ. ಏತನ್ಮಧ್ಯೆ ತಮ್ಮ ಪಕ್ಷದ ಒಬ್ಬ ಶಾಸಕರನ್ನು ಸೆಳೆದುಕೊಂಡರೂ ನಿಮ್ಮ(ಬಿಜೆಪಿ) ಕೈ ಕತ್ತರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಜಗಳೂರು ಶಾಸಕ ರಾಮಚಂದ್ರ ಅವರು ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆಯೇ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ರಾತ್ರಿ ತುರ್ತು ಶಾಸಕಾಂಗ ಸಭೆ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು.

ಪ್ರತಿಭಟನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇಶಪಾಂಡೆ, ಬಿಜೆಪಿ ಮನೆಯಲ್ಲೇ ಭಿನ್ನಮತ ಸ್ಫೋಟಗೊಂಡಿದೆ, ಅದನ್ನು ಶಮನ ಮಾಡುವ ಬದಲು ನಮ್ಮ(ಕಾಂಗ್ರೆಸ್) ಮನೆಗೆ ಕೈಹಾಕಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಶಾಸಕರಿಗೆ ಕೋಟಿ,ಕೋಟಿ ಹಣದ ಆಮಿಷ, ಮಂತ್ರಿಗಿರಿ ಆಸೆ ತೋರಿಸಿ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಒಂದು ವೇಳೆ ಬಿಜೆಪಿ ಸರಕಾರವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಆಪರೇಶನ್ ಕಮಲದ ಮೂಲಕ ಸೆಳೆದುಕೊಂಡರೆ ಕೈ ಕೈತ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ